ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ವೈಫಲ್ಯಕ್ಕೆ ಕಾರಣ ತಿಳಿಸಿದ ಅಜಿಂಕ್ಯ ರಹಾನೆ!

ಭಾನುವಾರ ದೆಹಲಿಯ ಅರುನ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ 110 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ಈ ಪಂದ್ಯದ ಬಳಿಕ ಹದಿನೆಂಟನೇ ಆವೃತ್ತಿಯಲ್ಲಿ ಕೆಕೆಆರ್‌ ವೈಫಲ್ಯಕ್ಕೆ ಕಾರಣವನ್ನು ಅಜಿಂಕ್ಯ ರಹಾನೆ ಬಹಿರಂಗಪಡಿಸಿದ್ದಾರೆ.

IPL 2025: ಕೆಕೆಆರ್‌ ವೈಫಲ್ಯಕ್ಕೆ ಕಾರಣ ತಿಳಿಸಿದ ರಹಾನೆ!

ಕೆಕೆಆರ್‌ ಸೋಲಿನ ಬಗ್ಗೆ ನಾಯಕ ಅಜಿಂಕ್ಯ ರಹಾನೆ ಮಾತನಾಡಿದ್ದಾರೆ.

Profile Ramesh Kote May 26, 2025 8:32 AM

ನವದೆಹಲಿ: ಹೆನ್ರಿಚ್‌ ಕ್ಲಾಸೆನ್ (Heinrich Klaasen) ಅವರ ಬಿರುಗಾಳಿ ಶತಕ ಮತ್ತು ಜಯದೇವ್ ಉನಾದ್ಕಟ್‌ ಅವರ ಅದ್ಭುತ ಬೌಲಿಂಗ್ ಪ್ರದರ್ಶನದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್(SRH) ತಂಡ ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು 110 ರನ್‌ಗಳಿಂದ ಸೋಲಿಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್(IPL 2025) ಅಭಿಯಾನವನ್ನು ಕೊನೆಗೊಳಿಸಿತು. ಈಗಾಗಲೇ ಪ್ಲೇಆಫ್ಸ್‌ ರೇಸ್‌ನಿಂದ ಹೊರಬಿದ್ದಿದ್ದ ಈ ಎರಡೂ ತಂಡಗಳು ತಮ್ಮ ಕೊನೆಯ ಪಂದ್ಯವನ್ನು ಗೆಲ್ಲಲು ಪೈಪೋಟಿ ನಡೆಸಿದ್ದವು. ಆದರೆ ಅಂತಿಮವಾಗಿ‌ ಗೆದ್ದ ಸನ್‌ರೈಸರ್ಸ್ ಹೈದರಾಬಾದ್, ಆಡಿದ 14 ಪಂದ್ಯಗಳಲ್ಲಿ 13 ಅಂಕಗಳೊಂದಿಗೆ ಆರನೇ ಸ್ಥಾನದೊಂದಿಗೆ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿತು. ಆದರೆ ಅಜಿಂಕ್ಯ ರಹಾನೆ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್, 14 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ 8ನೇ ಸ್ಥಾನದ ಮೂಲಕ ಈ ಋತುವಿನ ಅಭಿಯಾನವನ್ನು ಮುಗಿಸಿತು. ಈ ಪಂದ್ಯದ ಸೋಲಿನ ನಂತರ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ.

ಭಾನುವಾರ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧದ ಗೆಲುವಿನ ನಂತರ, ಅಜಿಂಕ್ಯ ರಹಾನೆ ತಮ್ಮ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಕಳಪೆಯಾಗಿತ್ತು ಎಂದು ಹೇಳಿದ್ದಾರೆ. "ಅವರು (ಎಸ್‌ಆರ್‌ಎಚ್‌) ನಿಜವಾಗಿಯೂ ಚೆನ್ನಾಗಿ ಬ್ಯಾಟ್‌ ಮಾಡಿದರು, ಬೌಲ್ ಮಾಡುವಾಗ ನಾವು ಕೆಲವು ತಪ್ಪುಗಳನ್ನು ಮಾಡಿದೆವು. ಅವರು ಬ್ಯಾಟ್‌ ಮಾಡಿದ ರೀತಿ, ಎಲ್ಲಾ ಕೆಟ್ಟ ಎಸೆತಗಳ ಲಾಭವನ್ನು ಪಡೆದುಕೊಂಡರು ಮತ್ತು ಒಳ್ಳೆಯ ಎಸೆತಗಳನ್ನು ಕೂಡ ಹೊಡೆದರು. ಇದರ ಶ್ರೇಯ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳಿಗೆ ಸಲ್ಲಬೇಕು, ಅವರ ಉದ್ದೇಶ ನಿಜಕ್ಕೂ ಅದ್ಭುತವಾಗಿತ್ತು," ಎಂದು ರಹಾನೆ ಶ್ಲಾಘಿಸಿದ್ದಾರೆ.

IPL 2025: ಮೂರನೇ ಅತ್ಯಂತ ವೇಗದ ಐಪಿಎಲ್‌ ಶತಕ ಸಿಡಿಸಿದ ಹೆನ್ರಿಚ್‌ ಕ್ಲಾಸೆನ್‌!

ಮುಂದಿನ ವರ್ಷ ಬಲಿಷ್ಠವಾಗಿ ಬರುತ್ತೇವೆ: ರಹಾನೆ

"ನಾವು ನಿಧಾನಗತಿಯ ಎಸೆತಗಳನ್ನು ಎಸೆಯುವ ಬಗ್ಗೆ ಮತ್ತು ವೈಡ್ ಬೌಲ್ ಮಾಡುವ ಬಗ್ಗೆ ಚರ್ಚಿಸಿದೆವು, ಆದರೆ ಕೆಲವೊಮ್ಮೆ ಬೌಲರ್‌ಗಳು ಯೋಜನೆಯನ್ನು ಸರಿಯಾಗಿ ಕಾರ್ಯಗತಗೊಳಿಸದಿದ್ದರೆ, ಕ್ಲಾಸೆನ್‌ನಂತಹ ಬ್ಯಾಟ್ಸ್‌ಮನ್‌ಗಳು ಮತ್ತು ಹೈದರಾಬಾದ್‌ನ ಎಲ್ಲಾ ಬ್ಯಾಟ್ಸ್‌ಮನ್‌ಗಳು ನಿಜವಾಗಿಯೂ ಅದರ ಲಾಭವನ್ನು ಪಡೆದುಕೊಳ್ಳುತ್ತಾರೆ," ಎಂದು ಕೆಕೆಆರ್‌ ನಾಯಕ ತಿಳಿಸಿದ್ದಾರೆ.

"ನಾವು ಬೌಲಿಂಗ್ ವಿಭಾಗದಲ್ಲಿ ವಿಫಲರಾದೆವು ಮತ್ತು ಬೌಲಿಂಗ್ ಘಟಕವಾಗಿ ಇನಿಂಗ್ಸ್‌ನಾದ್ಯಂತ ನಾವು ಬಹಳಷ್ಟು ತಪ್ಪುಗಳನ್ನು ಮಾಡಿದೆವು. ಋತುವಿನ ಉದ್ದಕ್ಕೂ ನಮಗೆ ನಮ್ಮದೇ ಆದ ಕ್ಷಣಗಳಿದ್ದವು, ನಮಗೆ ಅವಕಾಶಗಳಿದ್ದವು. 2-3 ಪಂದ್ಯಗಳಲ್ಲಿ ನಾವು ಒಂದು ಘಟಕವಾಗಿ ಆಡಲಿಲ್ಲ ಎಂದು ಭಾವಿಸುತ್ತೇನೆ. ನಾವು ನಮ್ಮ ಕೈಲಾದಷ್ಟು ಪ್ರಯತ್ನವನ್ನು ನಡೆಸಿದ್ದೇವೆ, ನೀವು ಯಾವಾಗಲೂ ಸ್ವಿಚ್ ಆನ್‌ನಲ್ಲಿ ಇಡಬೇಕು. ಈ ಋತುವು ನಿಜವಾಗಿಯೂ ಕಠಿಣವಾಗಿದೆ. ವಿಷಾದವಿಲ್ಲ, ಈ ಸೀಸನ್‌ನಿಂದ ಬಹಳಷ್ಟು ಕಲಿತಿದ್ದೇವೆ. ಮುಂದಿನ ವರ್ಷ ನಾವು ಇನ್ನಷ್ಟು ಬಲಿಷ್ಠರಾಗಿ ಮರಳಿ ಬರುತ್ತೇವೆ," ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.

SRH vs KKR: ಗೆಲುವಿನೊಂದಿಗೆ ಮುಳುಗಿದ 'ಸನ್‌ರೈಸರ್ಸ್‌' ಹೈದರಾಬಾದ್‌

ಸ್ಪೋಟಕ ಇನಿಂಗ್ಸ್‌ ಆಡಿದ್ದ ಕ್ಲಾಸೆನ್‌

ಹೆನ್ರಿಚ್‌ ಕ್ಲಾಸೆನ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಇನಿಂಗ್ಸ್‌ ಆಡಿದರು. ಅವರು ಆಡಿದ 39 ಎಸೆತಗಳಲ್ಲಿ ಒಂಬತ್ತು ಸಿಕ್ಸರ್‌ಗಳು ಮತ್ತು ಏಳು ಬೌಂಡರಿಗಳೊಂದಿಗೆ ಅಜೇಯ 105 ರನ್ ಗಳಿಸಿದರು, ಜೊತೆಗೆ ಹೆಡ್ (76, 40 ಎಸೆತಗಳು, ಆರು ಸಿಕ್ಸರ್‌ಗಳು, ಆರು ಬೌಂಡರಿಗಳು) ಮತ್ತು ಇಶಾನ್ ಕಿಶನ್ (29) ಅವರೊಂದಿಗೆ ಕ್ರಮವಾಗಿ ಎರಡನೇ ಮತ್ತು ಮೂರನೇ ವಿಕೆಟ್‌ಗಳಿಗೆ 83 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಅಂತಿಮವಾಗಿ ಸನ್‌ರೈಸರ್ಸ್ ಹೈದರಾಬಾದ್‌ ತನ್ನ ಪಾಲಿನ 20 ಓವರ್‌ಗಳಿಗೆ ಮೂರು ವಿಕೆಟ್‌ಗಳಿಗೆ 278 ರನ್ ಗಳಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ಮೂರನೇ ತಂಡದ ಗರಿಷ್ಠ ಮೊತ್ತವಾಗಿದೆ ಹಾಗೂ ಪ್ರಸಕ್ತ ಋತುವಿನ ಎರಡನೇ ಅತ್ಯುತ್ತಮ ತಂಡದ ಸ್ಕೋರ್ ಆಗಿದೆ.