ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs ZIM: ವೈಭವ್‌ ಚೊಚ್ಚಲ ಅರ್ಧಶತಕ, ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಭಾರತಕ್ಕೆ ಮೊದಲ ಜಯ!

IND vs ZIM 1st T20I Highlights: ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್‌ ಹಾಗೂ ವೈಭವ್‌ ಸೂರ್ಯವಂಶಿ ಅವರ ಚೊಚ್ಚಲ ಅರ್ಧಶತಕದ ಬಲದಿಂದ ಭಾರತ ತಂಡ, ಜಿಂಬಾಬ್ವೆ ಎದುರು ಮೊದಲನೇ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಭಾರತ ತಂಡ ಮೊದಲ ಗೆಲುವು ದಾಖಲಿಸಿತು.

ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಭಾರತಕ್ಕೆ ಮೊದಲ ಜಯದ ನಗೆ!

ಜಿಂಬಾಬ್ವೆ ಎದುರು ಮಿಂಚಿದ ವೈಭವ್‌ ಸೂರ್ಯವಂಶಿ, ಮಯಾಂಕ್‌ ಯಾದವ್.‌ -

Profile
Ramesh Kote Jul 23, 2026 8:25 PM

ಹರಾರೆ: ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಸಾಲು ಸಾಲು ಸೋಲುಗಳನ್ನು ಅನುಭವಿಸಿದ್ದ ಭಾರತ ತಂಡ ಇದೀಗ ಶ್ರೇಯಸ್‌ ಅಯ್ಯರ್‌ (Shreyas Iyer) ನಾಯಕತ್ವದಲ್ಲಿ ಮೊದಲ ಗೆಲುವು ದಾಖಲಿಸಿದೆ. ಇಲ್ಲಿನ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಗುರುವಾರ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ (IND vs ZIM) ಟೀಮ್‌ ಇಂಡಿಯಾ ತನ್ನ ಆಲ್‌ರೌಂಡ್‌ ಪ್ರದರ್ಶನದ ಸಹಾಯದಿಂದ ಆತಿಥೇಯ ಜಿಂಬಾಬ್ವೆ ವಿರುದ್ಧ 7 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಪ್ರವಾಸಿಗರು 1-0 ಮುನ್ನಡೆ ಸಾಧಿಸಿ ಶುಭಾರಂಭ ಮಾಡಿದ್ದಾರೆ. ಪರಿಣಮಕಾರಿಯಾಗಿ ಬೌಲ್‌ ಮಾಡಿ 2 ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿದ ಮಯಾಂಕ್‌ ಯಾದವ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸೂರ್ಯಕುಮಾರ್‌ ಯಾದವ್‌ ಅವರ ಬಳಿಕ ಭಾರತ ಟಿ20 ತಂಡದ ನಾಯಕತ್ವವನ್ನು ವಹಿಸಿದ್ದ ಶ್ರೇಯಸ್‌ ಅಯ್ಯರ್‌ಗೆ ಯುಕೆ ಪ್ರವಾಸದ ಆರಂಭಿಕ ಎರಡು ಸರಣಿಗಳಲ್ಲಿ ಭಾರಿ ಹಿನ್ನಡೆಯಾಗಿತ್ತು. ಐರ್ಲೆಂಡ್‌ ಎದುರು 0-2 ಹಾಗೂ ಇಂಗ್ಲೆಂಡ್‌ ವಿರುದ್ಧ 0-4 ಅಂತರದಲ್ಲಿ ಭಾರತ ಪರಾಭವಗೊಂಡಿತ್ತು. ಇದರಿಂದಾಗಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆಗಳು ಎದುರಾಗಿದ್ದವು. ಆದರೆ, ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯ ಆರಂಭಿಕ ಪಂದ್ಯವನ್ನು ಗೆಲ್ಲುವ ಮೂಲಕ ಟೀಮ್‌ ಇಂಡಿಯಾ ಸದ್ಯ ನೀರಳವಾಗಿದೆ.

IND vs ZIM: ಭಾರತದ ಪರ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಶೋಕ್‌ ಶರ್ಮಾ ಯಾರು?

ಜಿಂಬಾಬ್ವೆಯನ್ನು 125 ರನ್‌ಗೆ ಕಟ್ಟಿಹಾಕಿದ್ದ ಬೌಲರ್ಸ್‌

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ಜಿಂಬಾಬ್ವೆಯನ್ನು ಆಹ್ವಾನಿಸಿದ್ದ ಭಾರತ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಅವರ ಯೋಜನೆಯನ್ನು ಬೌಲರ್‌ಗಳು ಸಂಪೂರ್ಣವಾಗಿ ಯಶಸ್ವಿಗೊಳಿಸಿದರು. ಆ ಮೂಲಕ ಎದುರಾಳಿ ತಂಡವನ್ನು 20 ಓವರ್‌ಗಳಿಗೆ ಕೇವಲ 125 ರನ್‌ಗಳಿಗೆ ಟೀಮ್‌ ಇಂಡಿಯಾ ಬೌಲರ್‌ಗಳು ಕಟ್ಟಿ ಹಾಕಿದ್ದರು. ವಿಶೇಷವಾಗಿ ಭಾರತ ತಂಡದ ಪರ ಮಯಾಂಕ್‌ ಯಾದವ್‌ ಅವರು 4 ಓವರ್‌ಗಳಿಗೆ ಕೇವಲ 18 ರನ್‌ ನೀಡಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಪ್ರಿನ್ಸ್‌ ಯಾದವ್‌ 19 ರನ್‌ ನೀಡಿ ಎರಡು ವಿಕೆಟ್‌ ಪಡೆದರು.

ಜಿಂಬಾಬ್ವೆ ತಂಡ ಒಂದು ಹಂತದಲ್ಲಿ 100 ರನ್‌ ಗಳಿಸುವುದು ಅನುಮಾನ ಎಂದು ಭಾವಿಸಲಾಗಿತ್ತು. ಆದರೆ, ರಯಾನ್‌ ಬುರ್ಲ್‌ (26 ರನ್‌), ವೆಸ್ಲೀ ಮಾಧೆವೆರೆ (39 ರನ್‌) ಹಾಗೂ ಟಿ ಮಾರುಮಣಿ (27 ರನ್‌) ಅವರ ನಿರ್ಣಾಯಕ ಕೊಡುಗೆಯಿಂದ ಆತಿಥೇಯರು 120ರ ಗಡಿ ದಾಟಿ ಗೌರವವನ್ನು ಉಳಿಸಿಕೊಂಡರು.



ವೈಭವ್‌ ಸೂರ್ಯವಂಶಿ ಚೊಚ್ಚಲ ಅರ್ಧಶತಕ

ಇಂಗ್ಲೆಂಡ್‌ ಪ್ರವಾಸದಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಮೂರು ಪಂದ್ಯಗಳನ್ನು ಆಡಿದ್ದ ವೈಭವ್‌ ಸೂರ್ಯವಂಶಿ, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟ್‌ ಬೀಸುವಲ್ಲಿ ವಿಫಲರಾಗಿದ್ದರು. ವಿಶೇಷವಾಗಿ ಇಂಗ್ಲೆಂಡ್‌ ಕಂಡೀಷನ್ಸ್‌ ಅವರಿಗೆ ಹೊಸದಾಗಿತ್ತು. ಆದರೆ, ಅಂಡರ್‌-19 ವಿಶ್ವಕಪ್‌ ಫೈನಲ್‌ ಪಂದ್ಯವನ್ನು ಹರಾರೆಯಲ್ಲಿ ಆಡಿದ್ದ ಅನುಭವವನ್ನು ಸದುಪಯೋಗಪಡಿಸಿಕೊಂಡ 15ರ ವಯಸ್ಸಿನ ವೈಭವ್‌ ಸೂರ್ಯವಂಶಿ ತಮ್ಮ ಟಿ20ಐ ವೃತ್ತಿ ಜೀವನದ ಮೊದಲ ಅರ್ಧಶತಕವನ್ನು ಸಿಡಿಸಿ ಭಾರತ ತಂಡದ ಗೆಲುವಿಗೆ ನೆರವು ನೀಡಿದರು. ಅವರು ಆಡಿದ 19ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 50 ರನ್‌ ಗಳಿಸಿದರು. ಅರ್ಧಶತಕ ಬಾರಿಸಿದ ಮುಂದಿನ ಎಸೆತದಲ್ಲಿಯೇ ಅವರು ಕ್ಯಾಚ್‌ ಕೊಟ್ಟು ಔಟ್‌ ಆದರು.



ಮತ್ತೊಬ್ಬ ಆರಂಭಿಕ ಅಭಿಷೇಕ್‌ ಶರ್ಮಾ ಒಂದ ರನ ಗಳಿಸಿ ಬೇಗ ಔಟ್‌ ಆದರು. ಆದರೆ, ಇಶಾನ್‌ ಕಿಶನ್‌ 24 ಎಸೆತಗಳಲ್ಲಿ 35 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ನಾಯಕ ಶ್ರೇಯಸ್‌ ಅಯ್ಯರ್‌ 24ಎಸೆತಗಳಲ್ಲಿ ಅಜೇಯ 28 ರನ್‌ ಗಳಿಸಿ ಭಾರತ ತಂಡವನ್ನು 14ನೇ ಓವರ್‌ನಲ್ಲಿ ಗೆಲ್ಲಿಸಿದರು. ಜಿಂಬಾಬ್ವೆ ಪರ ಬ್ಲೆಸಿಂಗ್‌ ಮುಝರಾಬಾನಿ ಎರಡು ವಿಕೆಟ್‌ ಕಿತ್ತು ಯಶಸ್ವಿ ಬೌಲರ್‌ ಎನಿಸಿಕೊಂಡರು.

ಸ್ಕೋರ್‌ ವಿವರ

ಜಿಂಬಾಬ್ವೆ: 20 ಓವರ್‌ಗಳಿಗೆ 120-7 (ವೆಸ್ಲೀ ಮಾಧವೆರೆ 39 ರನ್‌, ರಯಾನ್‌ ಬುರ್ಲ್‌26 ರನ್‌, ಟಿ ಮಾರುಮಣಿ 27 ರನ್‌; ಮಯಾಂಕ್‌ ಯಾದವ್‌ 18ಕ್ಕೆ 2, ಪ್ರಿನ್ಸ್‌ ಯಾದವ್‌ 19ಕ್ಕೆ 2)

ಭಾರತ: 13.2 ಓವರ್‌ಗಳಿಗೆ 126-3 ( ವೈಭವ್‌ ಸೂರ್ಯವಂಶಿ 50 ರನ್‌, ಇಶಾನ್‌ ಕಿಶನ್‌ 35 ರನ್‌, ಶ್ರೇಯಸ್‌ ಅಯ್ಯರ್‌ 28* ರನ್‌; ಬ್ಲೆಸಿಂಗ್‌ ಮುಝರಾಬಾನಿ 26ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಮಯಾಂಕ್‌ ಯಾದವ್