ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: 500 ರನ್‌ಗಳ ಜೊತೆಯಾಟವನ್ನು ಆಡಿ ಎಲೈಟ್‌ ಲಿಸ್ಟ್‌ ಸೇರಿದ ವೈಭವ್‌-ಜೈಸ್ವಾಲ್‌ ಜೋಡಿ!

ರಾಜಸ್ಥಾನ್‌ ರಾಯಲ್ಸ್‌ ತಂಡದ ಅರಂಭಿಕರಾದ ವೈಭವ್‌ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ 500 ರನ್‌ಗಳ ಜೊತೆಯಾಟವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಹಲವು ಜೋಡಿಗಳನ್ನು ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಈ ಇಬ್ಬರೂ ಸೇರ್ಪಡೆಯಾಗಿದ್ದಾರೆ.

IPL 2026: ಎಲೈಟ್‌ ಲಿಸ್ಟ್‌ ಸೇರಿದ ವೈಭವ್‌-ಜೈಸ್ವಾಲ್‌ ಜೋಡಿ!

ಎಲೈಟ್‌ ಲಿಸ್ಟ್‌ಗೆ ಸೇರ್ಪಡೆಯಾದ ವೈಭವ್‌-ಜೈಸ್ವಾಲ್‌. -

Profile
Ramesh Kote Apr 4, 2026 10:04 PM

ಅಹಮದಾಬಾದ್‌: ಗುಜರಾತ್‌ ಜಯಂಟ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ (Yashasvi jaiswal) ಹಾಗೂ ವೈಭವ್‌ ಸೂರ್ಯವಂಶಿ (Vaibhav Suryavnashi) ಅವರು ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದಾರೆ. ಈ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 52 ರನ್‌ಗಳನ್ನು ದಾಖಲಿಸಿದರು. ಇದಕ್ಕೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 38 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಇದೀಗ ಜಿಟಿ ವಿರುದ್ಧ 26 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಈ ಜೊತೆಯಾಟದ ಮೂಲಕ ಈ ಜೋಡಿ ವಿಶೇಷ ದಾಖಲೆಯನ್ನು ಬರೆದಿದೆ.

ಇದರ ಜೊತೆಗೆ ಯಶಸ್ವಿ ಜೈಸ್ವಾಲ್‌ ಹಾಗೂ ವೈಭವ್‌ ಸೂರ್ಯವಂಶಿ ಅವರು ಐಪಿಎಲ್‌ ಟೂರ್ನಿಯಲ್ಲಿ 500 ರನ್‌ಗಳ ಜೊತೆಯಾವನ್ನು ಆಡಿದರು. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ 500ಕ್ಕೂ ಅಧಿಕ ರನ್‌ಗಳ ಜೊತೆಯಾಟವನ್ನು ಆಡಿದ ಜೋಡಿಗಳನ್ನು ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಇದೀಗ ಜೈಸ್ವಾಲ್‌ ಹಾಗೂ ವೈಭವ್‌ ಸೇರ್ಪಡೆಯಾಗಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಇಲ್ಲಿಯವರೆಗೂ 113 ಜೋಡಿಗಳು 500ಕ್ಕೂ ಅಧಿಕ ರನ್‌ಗಳ ಜೊತೆಯಾಟವನ್ನು (ಯಾವುದೇ ವಿಕೆಟ್‌ಗೆ) ಆಡಿದ್ದಾರೆ. ಇದರಲ್ಲಿ ಟ್ರಾವಿಸ್‌ ಹೆಡ್‌ ಹಾಗೂ ಅಭಿಷೇಕ್‌ ಶರ್ಮಾ (12.57) ವೇಗವಾಗಿ 500 ರನ್‌ಗಳ ಜೊತೆಯಾಟವನ್ನು ಆಡಿದ್ದಾರೆ. ಎರಡನೇ ಸ್ಥಾನದಲ್ಲಿ ಫಿಲ್‌ ಸಾಲ್ಟ್‌ ಹಾಗೂ ಸುನೀಲ್‌ ನರೇನ್‌ (12.46)ಇದ್ದಾರೆ. ಇದೀಗ ಮೂರನೇ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್‌ ಹಾಗೂ ವೈಭವ್‌ ಸೂರ್ಯವಂಶಿ (12.02) ಬಂದಿದ್ದಾರೆ.

IPL 2026: ನಾನು ನೋಡಿದ ಬೆಸ್ಟ್‌ ಆಟಗಾರ ವೈಭವ್‌ ಸೂರ್ಯವಂಶಿ ಎಂದ ಜೋಸ್‌ ಬಟ್ಲರ್‌!

ವೈಭವ್‌ ಸೂರ್ಯವಂಶಿ ಸದ್ಯ ಅತ್ಯುತ್ತಮ ಹಂತದಲ್ಲಿದ್ದಾರೆ. ಅವರು ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಕ್ರಿಕೆಟ್‌ ಜಗತ್ತಿನ ಗಮನವನ್ನು ಸೆಳೆದಿದ್ದಾರೆ. ಕಳೆದ 2025ರ ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಫ್ರಾಂಚೈಸಿ ಲೀಗ್‌ಗೆ ಪದಾರ್ಪಣೆ ಮಾಡಿ ತಮ್ಮ ಭಯಮುಕ್ತ ಬ್ಯಾಟಿಂಗ್‌ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಅವರು ಐಪಿಎಲ್‌ ಟೂರ್ನಿಯಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆದಿದ್ದರು.

ಇದಾದ ಬಳಿಕ ಅವರು ಅಂಡರ್‌-19 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳಲ್ಲಿಯೂ ಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೆ ಅಂಡರ್‌-19 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ 175 ರನ್‌ಗಳನ್ನು ಬಾರಿಸಿದ್ದರು. ವೈಭವ್‌ ಕಳೆದ ವಾರವಷ್ಟೆ 15ನೇ ವಯಸ್ಸಿಗೆ ಪದಾರ್ಪಣೆ ಮಾಡಿದ್ದಾರೆ ಹಾಗೂ ಭಾರತ ತಂಡದ ಪರ ಆಡಲು ಅರ್ಹತೆಯನ್ನು ಪಡೆದಿದ್ದಾರೆ. ಮೈಕಲ್‌ ವಾನ್‌, ಮೊಹಮ್ಮದ್‌ ಕೈಫ್‌ ಸೇರಿದಂತೆ ಹಲವು ಮಾಜಿ ಆಟಗಾರರು ವೈಭವ್‌, ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಆದರೆ, ಆರ್‌ ಅಶ್ವಿನ್‌ ಮಿಶ್ರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

IPL 2026: ʻಬೇಕಿದ್ದರೆ ನನ್ನನ್ನು ಬೈದು ಬಿಡಿʼ-ಪಂಜಾಬ್‌ ಸೋಲಿನ ಬಳಿಕ ಸಿಎಸ್‌ಕೆಯನ್ನು ಟೀಕಿಸಿದ ಅಶ್ವಿನ್!

ಯಶಸ್ವಿ ಜೈಸ್ವಾಲ್‌ ಕೂಡ ಎಡಗೈ ಬ್ಯಾಟ್ಸ್‌ಮನ್‌ ಆಗಿದ್ದು, ಅವರು ಕೂಡ ಭಾರತ ವೈಟ್‌ಬಾಲ್‌ ತಂಡಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ರನ್‌ ಹೊಳೆ ಹರಿಸಿ ರಾಷ್ಟ್ರೀಯ ತಂಡಕ್ಕೆ ಮರಳಲು ಎದುರು ನೋಡುತ್ತಿದ್ದಾರೆ. ಅಂದ ಹಾಗೆ ಜೈಸ್ವಾಲ್‌ ಹಾಗೂ ವೈಭವ್‌ ಸೂರ್ಯವಂಶಿ ಅವರಲ್ಲಿ ಯಾರು ಭಾರತ ತಂಡಕ್ಕೆ ಬರಲಿದ್ದಾರೆಂಬುದು ಆಸಕ್ತದಾಯಕ ಸಂಗತಿಯಾಗಿದೆ.