IND vs WI: 5ನೇ ಟಿ20ಐನಲ್ಲಿ ವಿಂಡೀಸ್ ಬ್ಯಾಟರ್ಗಳನ್ನು ಕಟ್ಟಿ ಹಾಕಲು ಬೌಲರ್ಗಳಿಗೆ ತಾಂತ್ರಿಕ ಸಲಹೆ ನೀಡಿದ ವರುಣ್ ಆರೋನ್!
ವೆಸ್ಟ್ ಇಂಡೀಸ್ ವಿರುದ್ದದ ಐದನೇ ಟಿ20ಐ ಪಂದ್ಯದ ನಿಮಿತ್ತ ಭಾರತ ತಂಡದ ಬೌಲರ್ಗಳಿಗೆ ಮಾಜಿ ವೇಗಿ ವರುಣ್ ಆರೋನ್ ತಾಂತ್ರಿಕ ಸಲಹೆಯನ್ನು ನೀಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಭರ್ಜರಿ ಫಾರ್ಮ್ನಲ್ಲಿರುವ ಶೇಯ್ ಹೋಪ್ ಅವರನ್ನು ಕಟ್ಟಿ ಹಾಕಲು ಬೌಲರ್ಗಳು ಯಾವ ತಂತ್ರವನ್ನು ಬಳಸಿಕೊಳ್ಳಬೇಕೆಂದು ಹೇಳಿದ್ದಾರೆ.
ಭಾರತ ತಂಡದ ರಣತಂತ್ರ ಹೇಳಿಕೊಟ್ಟ ವರುಣ್ ಆರೋನ್. -
ಬೆಂಗಳೂರು: ವೆಸ್ಟ್ ಇಂಡೀಸ್ ವಿರುದ್ಧದ ಟಿ20ಐ ಸರಣಿಯಲ್ಲಿ (IND vs WI) ಭಾರತ ತಂಡದ ಬೌಲರ್ಗಳು ನಿಯಮಿತವಾಗಿ ವಿಫಲರಾಗುತ್ತಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ವಿಂಡೀಸ್ ನಾಯಕ ಶೇಯ್ ಹೋಪ್ (Shai Hope) ಹಾಗೂ ಶೆರ್ಪೆನ್ ಋದರ್ಫೋರ್ಡ್ ಎದುರು ಟೀಮ್ ಇಂಡಿಯಾ ಬೌಲರ್ಗಳ ರಣತಂತ್ರ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 17 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐದನೇ ಪಂದ್ಯದ ನಿಮಿತ್ತ ಮಾಜಿ ವೇಗದ ಬೌಲರ್ ವರುನ್ ಆರೋನ್ (Varun Aaron) ಅವರು ಟೀಮ್ ಇಂಡಿಯಾ ಬೌಲರ್ಗಳಿಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ. ವಿಂಡೀಸ್ ಬ್ಯಾಟರ್ಗಳ ಎದುರು ನಮ್ಮ ಬೌಲರ್ಗಳು ಯಾವ ರೀತಿಯ ರಣತಂತ್ರವನ್ನು ಅನುಸರಿಸಬೇಕೆಂದು ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಶೋ ʻಫಾಲೋ ದಿ ಬ್ಲೂಸ್ʼನಲ್ಲಿ ಭಾರತ ತಂಡ ಐದನೇ ಟಿ20ಐ ಪಂದ್ಯಕ್ಕೆ ಯಾವ ತಾಂತ್ರಿಕ ಬದಲಾವಣೆಗಳನ್ನು ಮಾಡಿಕೊಳ್ಳಬಹುದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ವರುಣ್ ಆರೋನ್, “ಬೌಲರ್ಗಳ ಯೋಜನೆಗಳೇ ಮುಖ್ಯ ಎಂದು ನಾನು ಹೇಳುತ್ತೇನೆ. ನನ್ನ ಪ್ರಕಾರ, ಬೌಲರ್ಗಳ ಯೋಜನೆಗಳು ಸರಿಯಾಗಿರಲಿಲ್ಲ. ನೀವು ಪಿಚ್ನ ಸ್ವರೂಪವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಯಾವಾಗ ತಮ್ಮ ವಿಭಿನ್ನ ಬೌಲಿಂಗ್ ತಂತ್ರಗಳನ್ನು ಬಳಸಬೇಕು ಎಂಬುದನ್ನು ತಿಳಿದಿರಬೇಕು. ಜೊತೆಗೆ, ಚೆಂಡನ್ನು ನಿರಂತರವಾಗಿ ವಿಕೆಟ್ಗಳ ಗುರಿಯತ್ತ ಎಸೆಯಬೇಕು. ಕಳೆದ ಎರಡು ಪಂದ್ಯಗಳಲ್ಲಿ ಭಾರತ ತಂಡದ ಬೌಲರ್ಗಳು ವಿಕೆಟ್ಗಳನ್ನು ಗುರಿಯಾಗಿಸಿಕೊಂಡು ಬೌಲ್ ಮಾಡುವಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ,” ಎಂದು ಅವರು ಹೇಳಿದ್ದಾರೆ.
IND vs WI: ಐದನೇ ಟಿ20ಐ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆಯನ್ನು ಸೂಚಿಸಿದ ವರುಣ್ ಆರೋನ್!
ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡದ ಬೌಲಿಂಗ್ ಕೋಚ್ ಆರೋನ್, ಭಾರತೀಯ ವೇಗದ ಬೌಲರ್ಗಳು ಬ್ಯಾಟರ್ಗಳಿಗೆ ಕಠಿಣ ಲೆನ್ತ್ನಲ್ಲಿ ಬೌಲ್ ಮಾಡಬೇಕು ಎಂದು ಹೇಳಿದ್ದಾರೆ. ಒಂದೆರಡು ಬೌಂಡರಿಗಳನ್ನು ಬಿಟ್ಟುಕೊಟ್ಟ ತಕ್ಷಣ ಪೂರ್ಣ ಲೆನ್ತ್ನಲ್ಲಿ ಬೌಲ್ ಮಾಡುವ ತಂತ್ರಕ್ಕೆ ಮೊರೆ ಹೋಗಬಾರದು ಎಂದು ಅವರು ಸಲಹೆ ನೀಡಿದ್ದಾರೆ.
“ಅರ್ಷದೀಪ್ ಸಿಂಗ್ ಮತ್ತು ಶೇಯ್ ಹೋಪ್ ನಡುವಿನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅರ್ಷದೀಪ್ ವಿಕೆಟ್ಗೆ ಗುರಿಯಾಗಿಸಿಕೊಂಡು ಬೌಲ್ ಮಾಡಿದರು. ಆದರೆ, ಬ್ಯಾಟರ್ಗಳು ಒಂದು ಅಥವಾ ಎರಡು ಬೌಂಡರಿಗಳನ್ನು ಬಾರಿಸಿದ ತಕ್ಷಣ ಭಾರತ ತಂಡ ತನ್ನ ಎರಡನೇ ಯೋಜನೆಯಾದ ಫುಲ್ ಲೆನ್ತ್ ಬೌಲಿಂಗ್ಗೆ ಬದಲಾಯಿಸುತ್ತದೆ. ವೆಸ್ಟ್ ಇಂಡೀಸ್ ತಂಡ ಬಾರಿಸಿರುವ ಸಿಕ್ಸರ್ಗಳ ಸಂಖ್ಯೆಯನ್ನು ಗಮನಿಸಿದರೆ ಅದಕ್ಕೆ ಕಾರಣವಿದೆ. ಭಾರತ ತಂಡದ ಬೌಲರ್ಗಳು ಅವರಿಗೆ ಸಾಕಷ್ಟು ಫುಲ್ ಲೆನ್ತ್ ಎಸೆತಗಳನ್ನು ನೀಡಿದ್ದಾರೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
IND vs WI: ಟಿ20ಐ ಕ್ರಿಕೆಟ್ನಲ್ಲಿ 100 ಸಿಕ್ಸರ್ಗಳ ಪೂರ್ಣಗೊಳಿಸಿದ ಸಂಜು ಸ್ಯಾಮ್ಸನ್!
ಮೂರನೇ ಟಿ20ಐ ಪಂದ್ಯದಲ್ಲಿ ಅರ್ಷದೀಪ್ ಸಿಂಗ್, ಉತ್ತಮ ಫಾರ್ಮ್ನಲ್ಲಿದ್ದ ವೆಸ್ಟ್ ಇಂಡೀಸ್ ನಾಯಕ ಶೇಯ್ ಹೋಪ್ ಅವರನ್ನು ಓವರ್ ದಿ ವಿಕೆಟ್ ಬದಲಿಗೆ ರೌಂಡ್ ದಿ ವಿಕೆಟ್ನಿಂದ ಎಸೆದ ಲೆನ್ತ್ ಬಾಲ್ ಮೂಲಕ ಕ್ಲೀನ್ ಬೌಲ್ಡ್ ಮಾಡಿದ್ದರು. ಆದರೆ, ನಾಲ್ಕನೇ ಪಂದ್ಯದಲ್ಲಿ ಭಾರತೀಯ ಬೌಲರ್ಗಳು ಅದೇ ರೀತಿಯ ಪ್ರದರ್ಶನವನ್ನು ಪುನರಾವರ್ತಿಸಲು ಸಾಧ್ಯವಾಗಲಿಲ್ಲ.
ನಾಲ್ಕನೇ ಟಿ20 ಪಂದ್ಯದಲ್ಲಿ ಶೇಯ್ ಹೋಪ್ ಅಜೇಯ 102 ರನ್ಗಳನ್ನು ಕೇವಲ 50 ಎಸೆತಗಳಲ್ಲಿ ಸಿಡಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಬೃಹತ್ 247 ರನ್ಗಳ ಮೊತ್ತವನ್ನು ದಾಖಲಿಸಿತು.