KAR vs PDC: ಮಯಾಂಕ್-ಪಡಿಕ್ಕಲ್ ಅಬ್ಬರದ ಶತಕ, ಪಾಂಡಿಚೇರಿ ಎದುರು ಕರ್ನಾಟಕ ತಂಡಕ್ಕೆ 67 ರನ್ ಜಯ!
KAR vs PDC Match Highlights: ದೇವದತ್ ಪಡಿಕ್ಕಲ್ ಹಾಗೂ ಮಾಯಂಕ್ ಅಗರ್ವಾಲ್ ಅವರ ಶತಕಗಳ ಬಲದಿಂದ ಕರ್ನಾಟಕ ತಂಡ, ಪುದುಚೇರಿ ವಿರುದ್ಧ 67 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಎ ಗುಂಪಿನ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ.
ಪಾಂಡಿಚೇರಿ ವಿರುದ್ಧ ಶತಕಗಳನ್ನು ಬಾರಿಸಿದ ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್. -
ಅಹಮದಾಬಾದ್: ಪ್ರಸ್ತುತ ನಡಯುತ್ತಿರುವ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ (Vijay Hazare Tropgy 2025-26) ಟೂರ್ನಿಯಲ್ಲಿ ಕರ್ನಾಟಕ ತಂಡ ತನ್ನ ಗೆಲುವಿನ ಲಯವನ್ನು ಮುಂದುವರಿಸಿದೆ. ಇಲ್ಲಿನ ಎಡಿಎಸ್‌ಎ ರೈಲ್ವೇಸ್ ಗ್ರೌಂಡ್‌ನಲ್ಲಿ ಬುಧವಾರ ನಡೆದಿದ್ದ ಪುದುಚೇರಿ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಅವರ ನಾಯಕತ್ವದ ಕರ್ನಾಟಕ ತಂಡ 67 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಹಾಗೂ ದೇವದತ್ ಪಡಿಕ್ಕಲ್ (Devdutt Padikkal) ಇಬ್ಬರೂ ತಲಾ ಶತಕಗಳನ್ನು ಬಾರಿಸಿ ಕರ್ನಾಟಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು.
ಈ ಪಂದ್ಯದಲ್ಲಿ ಕರ್ನಾಟಕ ತಂಡ ನೀಡಿದ್ದ 364 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಾಂಡಿಚೇರಿ ತಂಡ, ಕಠಿಣ ಹೋರಾಟ ನಡೆಸಿದ ಹೊರತಾಗಿಯೂ 50 ಓವರ್‌ಗಳಿಗೆ 296 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ 67 ರನ್‌ಗಳಿಂದ ಸೋಲು ಅನುಭವಿಸಿತು. ಪಾಂಡಿಚೇರಿ ಆರಂಭಿಕ ಬ್ಯಾಟ್ಸ್‌ಮನ್ ನೆಯಾನ್ ಶ್ಯಾಮ್ ಕಂಗಯಾನ್ (68 ರನ್) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಜಯಂತ್ ಯಾದವ್ (54) ಅವರು ಅರ್ಧಶತಕಗಳನ್ನು ಗಳಿಸಿದರು. ಇನ್ನುಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಪಾಂಡಿಚೇರಿ ತಂಡ 300ರ ಸನಿಹ ಬಂದು ಸೋಲು ಒಪ್ಪಿಕೊಂಡಿತು. ಪಾಂಡಿಚೇರಿ ತಂಡ ಆಡಿದ ನಾಲ್ಕೂ ಪಂದ್ಯಗಳನ್ನು ಸೋಲು ಅನುಭವಿಸುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಕುಸಿದಿದೆ.
VHT 2025-26: ನ್ಯೂಜಿಲೆಂಡ್ ಏಕದಿನ ಸರಣಿಗೂ ಮುನ್ನ ಭರ್ಜರಿ ಶತಕ ಬಾರಿಸಿದ ಋತುರಾಜ್ ಗಾಯಕ್ವಾಡ್!
ಕರ್ನಾಟಕ ತಂಡದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಮನ್ವಂತ್ ಕುಮಾರ್ ಎಲ್ ಮೂರು ವಿಕೆಟ್ ಪಡೆದರೆ, ಕರುಣ್ ನಾಯರ್ ಹಾಗೂ ವಿದ್ವತ್ ಕಾವೇರಪ್ಪ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದರು.
363 ರನ್‌ಗಳನ್ನು ಕಲೆ ಹಾಕಿದ ಕರ್ನಾಟಕ
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಕರ್ನಾಟಕ ತಂಡ, ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಶತಕಗಳ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 363 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಪಾಂಡಿಚೇರಿ ತಂಡಕ್ಕೆ 364 ರನ್‌ಗಳ ಗುರಿಯನ್ನು ನೀಡಿತು. ಕರ್ನಾಟಕ ತಂಡ ಪರ ಮಯಾಂಕ್ ಅಗರ್ವಾಲ್ 132 ರನ್ ಗಳಿಸಿದರೆ, ದೇವದತ್ ಪಡಿಕ್ಕಲ್ 113 ರನ್‌ಗಳನ್ನು ಕಲೆ ಹಾಕಿದರು. ಇವರ ಜೊತೆಗೆ ಕರುಣ್ ನಾಯರ್ ಅಜೇಯ 62 ರನ್‌ಗಳನ್ನು ಕಲೆ ಹಾಕಿದರು.
VHT 2025-26: ಗೋವಾ ಎದುರು ಕೇವಲ 75 ಎಸೆತಗಳಲ್ಲಿ 157 ರನ್ ಸಿಡಿಸಿದ ಸರ್ಫರಾಝ್ ಖಾನ್!
ಮಯಾಂಕ್-ಪಡಿಕ್ಕಲ್ ಜುಗಲ್‌ಬಂದಿ
ಕರ್ನಾಟಕ ಪರ ಇನಿಂಗ್ಸ್ ಆರಂಭಿಸಿದ ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಮುರಿಯದ ಮೊದಲನೇ ವಿಕೆಟ್‌ಗೆ 228 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ತಮ್ಮ ತಂಡಕ್ಕೆ ಭರ್ಜರಿ ಆರಂಭವನ್ನು ನೀಡಿತು. ಈ ಸೀಸನ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ದೇವದತ್ ಪಡಿಕ್ಕಲ್ 116 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ 113 ರನ್‌ಗಳನ್ನು ಕಲೆ ಹಾಕಿದರು. ಇದು ಈ ಆವೃತ್ತಿಯಲ್ಲಿ ಆರ್‌ಸಿಬಿ ಆಟಗಾರನ ಪಾಲಿಗೆ ಮೂರನೇ ಶತಕವಾಗಿದೆ.
ಅಪಾಯದಲ್ಲಿ ಬುಮ್ರಾ, ರೂಟ್ ನಂ.1 ಟೆಸ್ಟ್ ಶ್ರೇಯಾಂಕ
ಮಯಾಂಕ್ ಅಗರ್ವಾಲ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ
ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಮಯಾಂಕ್ ಅಗರ್ವಾಲ್ 124 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 15 ಬೌಂಡರಿಗಳೊಂದಿಗೆ 132 ರನ್‌ಗಳನ್ನು ಗಳಿಸಿದರು ಹಾಗೂ ಕರ್ನಾಟಕ ತಂಡದ ಗೆಲುವಿಗೆ ನೆರವು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇವರ ಜೊತೆಗೆ ಕರುನ್ ನಾಯರ್ ಕೂಡ 34 ಎಸೆತಗಳಲ್ಲಿ 62 ರನ್‌ಗಳ ಕೊಡುಗೆಯನ್ನು ನೀಡಿದರು.