ʻಬೌನ್ಸರ್‌ಗೆ ಭಯ ಇದೆಯಾ?ʼ:2014ರಲ್ಲಿ ರವಿ ಶಾಸ್ತ್ರಿ ನೀಡಿದ್ದ ಸಲಹೆಯನ್ನು ನೆನೆದ ವಿರಾಟ್ ಕೊಹ್ಲಿ!
ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಇದಾದ ಬಳಿಕ ಅವರು ಭಾರತದ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ನೀಡಿದ್ದ ಸಲಹೆಯಿಂದ ಫಾರ್ಮ್‌ಗೆ ಮರಳಿದ್ದರು. ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿ 700 ರನ್‌ಗಳನ್ನು ಗಳಿಸಿದ್ದರು. ಈ ಬಗ್ಗೆ ವಿರಾಟ್ ಕೊಹ್ಲಿ ಒನ್8 ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.
ರವಿ ಶಾಸ್ತ್ರಿ ನೀಡಿದ್ದ ಸಲಹೆಯನ್ನು 12 ವರ್ಷಗಳ ಬಳಿಕ ರಿವೀಲ್ ಮಾಡಿದ ಕೊಹ್ಲಿ. -
ನವದೆಹಲಿ: ವಿಶ್ವದ ಯಾವುದೇ ಘಟಾನುಘಟಿ ಬ್ಯಾಟ್ಸ್‌ಮನ್ ಅಥವಾ ಬೌಲರ್ ಇರಲಿ, ಅವರು ತಮ್ಮ ವೃತ್ತಿ ಜೀವನದ ಒಂದಲ್ಲ ಒಂದು ಹಂತದಲ್ಲಿ ಫಾರ್ಮ್ ಕಳೆದುಕೊಂಡು ಕಠಿಣ ದಿನಗಳನ್ನು ಎದುರಿಸುತ್ತಿರುತ್ತಾರೆ. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಕೂಡ ಇದಕ್ಕೆ ಹೊರತಾಗಿಲ್ಲ. ಅದೇ ರೀತಿ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ(Virat Kohli) ಅವರು ಕೂಡ 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಫಾರ್ಮ್ ಕಳೆದುಕೊಂಡು ತಮ್ಮ ವೃತ್ತಿ ಜೀವನದ ಕಠಿಣ ಹಂತವನ್ನು ಅನುಭವಿಸಿದ್ದರು. ಈ ಬಗ್ಗೆ ಅವರು ಒನ್8 ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ ಹಾಗೂ ಕಠಿಣ ದಿನಗಳನ್ನು ಮೆಟ್ಟಿ ನಿಲ್ಲಲ್ಲು ಭಾರತ ತಂಡದ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ (Ravi Shastri) ನೀಡಿದ್ದ ಸಲಹೆ ಹೇಗೆ ಕೈ ಹಿಡಿಯಿತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.
2014ರ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಸೀಮ್ ಬೌಲಿಂಗ್ ಕಂಡೀಷನ್ಸ್‌ನಲ್ಲಿ ಆಫ್ ಸ್ಟಂಪ್ ಹೊರಗಡೆ ಪಿಚ್ ಆಗಲಿ ಅಥವಾ ಆನ್ ಸೈಡ್ ಹೊರಗಡೆ ಬಾಲ್ ಪಿಚ್ ಆಗಿದ್ದರೂ ವಿಕೆಟ್ ಕೀಪರ್ ಕ್ಯಾಚ್, ಸ್ಲಿಪ್‌ಗಳಲ್ಲಿ ಕ್ಯಾಚ್ ಕೊಟ್ಟು ಪದೇ-ಪದೇ ಔಟ್ ಆಗಿದ್ದರು. ಇದರಿಂದಾಗಿ ಅವರು ಮಾನಸಿಕವಾಗಿ ಕುಗ್ಗಿದ್ದರು. ಆ ವರ್ಷದ ಕೊನೆಯಲ್ಲಿ ಅವರು, ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ತಮ್ಮ ವೈಫಲ್ಯವನ್ನು ಮೆಟ್ಟಿ ನಿಂತಿದ್ದರು ಹಾಗೂ ಬ್ಯಾಟಿಂಗ್‌ನಲ್ಲಿ ಬಲವಾಗಿ ಕಮ್‌ಬ್ಯಾಕ್ ಮಾಡಿದ್ದರು.
2027ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಟೀಮ್ ಇಂಡಿಯಾದ ಬೆಸ್ಟ್ ಪ್ಲೇಯಿಂಗ್ XI
ಇಂಗ್ಲೆಂಡ್ ಪ್ರವಾಸವನ್ನು ಮುಗಿಸಿಕೊಂಡು ತವರಿಗೆ ಬಂದಿದ್ದ ವಿರಾಟ್ ಕೊಹ್ಲಿ, ಮಾಜಿ ಆಲ್‌ರೌಂಡರ್ ರವಿ ಶಾಸ್ತ್ರಿ ಅವರನ್ನು ಭೇಟಿಯಾಗಿದ್ದರು ಹಾಗೂ ಅವರ ಬಳಿ ತಮ್ಮ ವೈಫಲ್ಯವನ್ನು ಮೆಟ್ಟಿ ನಿಲ್ಲಲು ಸಲಹೆ ಕೇಳಿದ್ದರು. ಈ ವೇಳೆ ರವಿ ಶಾಸ್ತ್ರಿ, ಸೀಮ್ ಬೌಲರ್‌ಗಳಿಗೆ ಕ್ರೀಸ್‌ನಿಂದ ಸ್ವಲ್ಪ ಮುಂದೆ ಬ್ಯಾಟ್ ಮಾಡಬೇಕೆಂದು ಸಲಹೆ ನೀಡಿದ್ದರು. ಅದರಂತೆ ಇವರ ಸಲಹೆಯನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿ ಅನುಸರಿಸಿ ಎಂಟು ಇನಿಂಗ್ಸ್‌ಗಳಿಂದ 86.50ರ ಸರಾಸರಿಯಲ್ಲಿ 692 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಈ ಟೆಸ್ಟ್ ಸರಣಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು.
ಬೌನ್ಸರ್ ಎದುರಿಸಲು ನಿಮಗೆ ಭಯ ಇದೆಯಾ?
"ಅವರು (ರವಿ ಶಾಸ್ತ್ರಿ) ತಂಡಕ್ಕೆ ಬಂದಾಗ, ನಾನು ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ವೈಫಲ್ಯತೆಯನ್ನು ಅನುಭವಿಸಿದ್ದೆ. ಆ ಸಮಯದಲ್ಲಿ ನಾನು ಅದರ ಬಗ್ಗೆ ತುಂಬಾ ಸೂಕ್ಷ್ಮ ಮನಸ್ಥಿತಿಯಲ್ಲಿದ್ದೆ. ಹಾಗಾಗಿ ಅವರು ತಕ್ಷಣವೇ ನನ್ನ ಮೇಲೆ ಒತ್ತಡ ಹೇರಲಿಲ್ಲ. ಮೊದಲು ಒಂದು ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕು ಮತ್ತು ನನಗೆ ಹೊಂದಿಕೊಳ್ಳಲು ಅವಕಾಶ ನೀಡಬೇಕು ಎಂಬುದನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು."
IND vs AFG: ಭಾರತ ತಂಡಕ್ಕೆ ಮೌಲ್ಯಯುತ ಆಟಗಾರನನ್ನು ಹೆಸರಿಸಿದ ಸುನೀಲ್ ಗವಾಸ್ಕರ್!
"ಮುಂದಿನ ಎರಡು ಅಥವಾ ಎರಡೂವರೆ ತಿಂಗಳ ಅವಧಿಯಲ್ಲಿ ನಾವು ಸಾಕಷ್ಟು ವೈಟ್‌ಬಾಲ್ ಕ್ರಿಕೆಟ್ ಆಡಿದ್ದೆವು. ಇಂಗ್ಲೆಂಡ್‌ನಲ್ಲೂ ಆಡಿದ್ದೆವು, ಭಾರತದಲ್ಲೂ ಆಡಿದ್ದೆವು. ನಂತರ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಮುನ್ನ ಅವರು ನನಗೆ ಒಂದು ಸರಳ ಪ್ರಶ್ನೆ ಕೇಳಿದರು — ‘ಬೌನ್ಸರ್ ಎದುರಿಸಲು ನಿನಗೆ ಭಯವಿದೆಯೇ?’ ಅದಕ್ಕೆ ನಾನು, ‘ಇಲ್ಲ, ನನಗೆ ಯಾವುದೇ ಭಯವಿಲ್ಲ’ ಎಂದು ಉತ್ತರಿಸಿದೆ. ಆಗ ಅವರು, ‘ಹಾಗಾದರೆ ಕ್ರೀಸ್‌ನ ಹೊರಗೆ ನಿಂತು ಬ್ಯಾಟ್ ಮಾಡು’ ಎಂದು ಸಲಹೆ ನೀಡಿದರು," ಎಂದು ವಿರಾಟ್ ಕೊಹ್ಲಿ ಅವರು ತಮ್ಮ ಒನ್8 ಯೂಟ್ಯೂಬ್ ಚಾನೆಲ್‌ನ ಸಂವಾದದಲ್ಲಿ ನೆನಪಿಸಿಕೊಂಡರು.
ನನ್ನ ವಿಧಾನವನ್ನೇ ಅನುಸರಿಸಿದ್ದರೆ ವೃತ್ತಿ ಜೀವನ ಮುಗಿಯುತ್ತಿತ್ತು
"ನನ್ನ ವಿಚಾರಕ್ಕೆ ಬಂದರೆ, ನನಗೆ ಗೊತ್ತಿರುವ ವಿಧಾನವನ್ನೇ ಅನುಸರಿಸಿ, ಅದನ್ನು ಕಾಪಾಡಿಕೊಳ್ಳಬೇಕು ಎಂಬ ಮನಸ್ಥಿತಿಯಲ್ಲಿ ನಾನು ಇದ್ದಿದ್ದರೆ, ನನ್ನ ವೃತ್ತಿಜೀವನ ಅಲ್ಲಿಯೇ ಮುಗಿದು ಹೋಗುತ್ತಿತ್ತು. ಆದರೆ ಅವರು (ಶಾಸ್ತ್ರಿ) ಯಾವುದೇ ಹಿಂಜರಿಕೆಯಿಲ್ಲದೆ ನನಗೆ ಆ ಸಲಹೆ ನೀಡಿದ್ದರು. ಅದೇ ವೇಳೆ ನಾನು ಕೂಡ, ‘ಸರಿ, ಇದರಿಂದ ನನ್ನ ಪ್ರದರ್ಶನ ಉತ್ತಮವಾಗುವುದಾದರೆ ನಾನು ಅದನ್ನು ಪ್ರಯತ್ನಿಸುತ್ತೇನೆ’ ಎಂದು ಮನಸ್ಸು ಮಾಡಿದ್ದೆ."
2027ರ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಆಡಬಲ್ಲ ಮೂವರು ಯುವ ಆಟಗಾರರು!
"ನಂತರ 2014-15ರ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದೆ. ಆ ಸರಣಿಯಲ್ಲಿ ನಾನು 700 ರನ್‌ಗಳನ್ನು ಗಳಿಸಿದೆ. ಕ್ರೀಸ್‌ನ ಹೊರಗೆ ನಿಂತು ಬ್ಯಾಟ್ ಮಾಡುತ್ತಿದ್ದೆ. ಲೆನ್ತ್ ಬಾಲ್‌ಗಳನ್ನು ರೈಸ್ ದಿ ಹ್ಯಾಂಡ್ ಮೂಲಕ ಡ್ರೈವ್ ಮಾಡುತ್ತಿದ್ದೆ. ನನ್ನ ವೃತ್ತಿಜೀವನದಲ್ಲಿ ನಾನು ಈ ರೀತಿಯ ಬ್ಯಾಟಿಂಗ್ ಅನ್ನು ಹಿಂದೆಂದೂ ಮಾಡಿರಲಿಲ್ಲ. ಆಗ ನನಗೆ, ‘ವಾವ್! ಇದು ಎಂತಹ ಬದಲಾವಣೆ’ ಎಂಬ ಅನುಭವವಾಯಿತು. ಇದು ಕೋಚ್ ಮತ್ತು ಆಟಗಾರನ ನಡುವಿನ ಅಪಾರ ನಂಬಿಕೆಯ ಮಟ್ಟವನ್ನು ತೋರಿಸುತ್ತದೆ," ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.