ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿರಾಟ್‌ ಕೊಹ್ಲಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಸಕ್ಸಸ್‌ಗೆ ಕಾರಣ ತಿಳಿಸಿದ ಶ್ರೀಶಾಂತ್!‌

ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿಯವರು ಪಂದ್ಯದ ಸಮಯದಲ್ಲಿ ತೋರುವ ಆಕ್ರಮಣಕಾರಿ ಮನೋಭಾವದ ಬಗ್ಗೆ ಮಾತನಾಡಿರುವ ಶ್ರೀಶಾಂತ್‌, ಅದು ದುರಹಂಕಾರವಲ್ಲ ಉತ್ಸಾಹ ಎಂದಿದ್ದಾರೆ. ಅವರು ಜಾಗತಿಕ ಕ್ರಿಕೆಟ್‌ ಲೋಕದಲ್ಲಿ ಉತ್ತುಂಗಕ್ಕೇರಲು ಅವರ ಆಕ್ರಮಣಶೀಲತೆ ಮತ್ತು ಉತ್ಸಾಹವು ಮುಖ್ಯ ಕಾರಣ ಎಂದಿದ್ದಾರೆ.

ವಿರಾಟ್‌ ಕೊಹ್ಲಿಯ ಸಕ್ಸಸ್‌ಗೆ ಪ್ರಮುಖ ಕಾರಣ ತಿಳಿಸಿದ ಶ್ರೀಶಾಂತ್‌!

ವಿರಾಟ್‌ ಕೊಹ್ಲಿಯನ್ನು ಶ್ಲಾಘಿಸಿದ ಎಸ್‌ ಶ್ರೀಶಾಂತ್‌.

Profile Ramesh Kote Aug 15, 2025 11:14 PM

ನವದೆಹಲಿ: ಭಾರತ ತಂಡದ ಮಾಜಿ ವೇಗಿ ಎಸ್‌ ಶ್ರೀಶಾಂತ್‌ ( S Sreesanth) ಆಧುನಿಕ ಬ್ಯಾಟಿಂಗ್‌ ದಿಗ್ಗಜ ವಿರಾಟ್‌ ಕೊಹ್ಲಿಯವರ (Virat Kohli) ಆಕ್ರಮಣಕಾರಿ ಆಟದ ಶೈಲಿಯನ್ನು ಶ್ಲಾಘಿಸಿದ್ದಾರೆ. ವಿರಾಟ್‌ ಕೊಹ್ಲಿಯವರ ಈ ಗುಣ ಅವರ ಯಶಸ್ಸಿಗೆ ಕಾರಣವಾದ ಹಲವು ಅಂಶಗಳಲ್ಲಿ ಒಂದಾಗಿದೆ. ದೇಶದ ಹಲವು ದಿಗ್ಗಜ ಆಟಗಾರರ ಮಧ್ಯೆ ಕೊಹ್ಲಿಯವರು ಈ ಎತ್ತರಕ್ಕೆ ಬೆಳೆಯಲು ಅವರ ಆಕ್ರಮಣಶೀಲತೆ ಬಹುಮುಖ್ಯ ಪಾತ್ರ ವಹಿಸಿದೆ ಎಂದು ಕೇರಳ ಮೂಲದ ಶ್ರೀಶಾಂತ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರಾಟ್‌ ಕೊಹ್ಲಿ ಅವರು ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಅವರು ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ.

ಈ ಬಗ್ಗೆ ಯೂಟ್ಯೂಬ್‌ ಚಾನೆಲ್‌ವೊಂದರಲ್ಲಿ ಮಾತನಾಡಿದ ಶ್ರೀಶಾಂತ್, "ವಿರಾಟ್‌ ಕೊಹ್ಲಿಯವರ ಉತ್ಸಾಹವನ್ನು ಯಾರೂ ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದು ಆದರೆ ನಾನು ಅದನ್ನು ಆಕ್ರಮಣಶೀಲತೆ ಮತ್ತು ಪ್ಯಾಷನ್ ಎಂದು ಕರೆಯುತ್ತೇನೆ. ವಿರಾಟ್ ಕೊಹ್ಲಿ ಆಕ್ರಮಣಕಾರಿಯೇ? ಇಲ್ಲ. ಅವರು ಗೀಳು ಹಿಡಿದಿದ್ದಾರೆ ಎಂದು ನಾನು ಭಾವಿಸುತ್ತೇನೆ. ವಿರಾಟ್ ಅವರ ಆಕ್ರಮಣಶೀಲತೆ, ಜನರು ಹೇಳುತ್ತಾರೆ ಬಹಳಷ್ಟು. ಅವರು ಆ ಆಕ್ರಮಣಶೀಲತೆಯನ್ನು ಕಡಿಮೆ ಮಾಡಿದರೆ, ಅವರು ಅದೇ ಆಟಗಾರನಾಗುವುದಿಲ್ಲ ಎಂದು ನಾನು ಹೇಳುತ್ತೇನೆ, ಭಾರತದ ಮಾಜಿ ನಾಯಕನ ವರ್ತನೆ ದುರಹಂಕಾರವಲ್ಲ, ಬದಲಿಗೆ ಆಟದ ಮೇಲಿನ ಆಳವಾದ ಪ್ರೀತಿ," ಎಂದು ಹೇಳಿದ್ದಾರೆ.

ಭಾರತ ಏಕದಿನ ತಂಡಕ್ಕೆ ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾರ ಮಹತ್ವವನ್ನು ತಿಳಿಸಿದ ಸುರೇಶ್‌ ರೈನಾ!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕೊಹ್ಲಿ ಮರಳುವುದು ಯಾವಾಗ?

ವಿರಾಟ್ ಕೊಹ್ಲಿ ಟೆಸ್ಟ್ ಮತ್ತು ಟಿ20ಐಗೆ ನಿವೃತ್ತರಾದ ನಂತರ, ಸಾಕಷ್ಟು ಸಮಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಕೊನೆಯ ಬಾರಿ ಅವರು ನ್ಯೂಜಿಲೆಂಡ್‌ ವಿರುದ್ಧ ಐಸಿಸಿ ಚಾಂಪಿಯನ್‌ಷಿಪ್‌ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಆಡಿದ್ದರು. ಈ ಪಂದ್ಯವನ್ನು ಗೆದ್ದು ಭಾರತ ತಂಡ ಚಾಂಪಿಯನ್‌ ಆಗಿತ್ತು. ಇದಾದ ಬಳಿಕ ವಿರಾಟ್‌ ಕೊಹ್ಲಿ ಲಂಡನ್‌ನಲ್ಲಿ ನೆಲೆಸಿದ್ದಾರೆ.

ಇದರ ನಡುವೆ ಕೊಹ್ಲಿಯವರು ಏಕದಿನ ಕ್ರಿಕೆಟ್‌ ಮಾದರಿಗೂ ಗುಡ್‌ ಬೈ ಹೇಳುವ ಸಾಧ್ಯತೆ ಇದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಇದು ಕ್ರಿಕೆಟ್‌ ಪ್ರಿಯರಲ್ಲಿ ಕೊಹ್ಲಿಯವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಮರಳುವರೇ? ಅಥವಾ ಇಲ್ಲವೇ? ಎನ್ನುವ ಸಹಜ ಗೊಂದಲವನ್ನುಂಟು ಮಾಡುತ್ತಿದೆ. ಕೊಹ್ಲಿ 2027ರ ಏಕದಿನ ವಿಶ್ವಕಪ್ ಆಡಲು ಎದುರು ನೋಡುತ್ತಿದ್ದಾರೆ, ಅಲ್ಲಿ ಅವರು ತಂಡಕ್ಕೆ ಮೂರನೇ ಬಾರಿಗೆ ಚಾಂಪಿಯನ್ಸ್‌ ಪಟ್ಟ ಗೆದ್ದು ಕೊಡುವ ಆಸೆ ಹೊಂದಿದ್ದಾರೆಂದು ಹಲವರು ಭಾವಿಸಿದ್ದಾರೆ.

ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ ಲಂಡನ್‌ಗೆ ಶಿಫ್ಟ್‌ ಆಗಲು ಬಲವಾದ ಕಾರಣ ಇಲ್ಲಿದೆ!

ದೀರ್ಘಾವಧಿಯಿಂದ ಎಸ್‌ ಶ್ರೀಶಾಂತ್ ಕ್ರೀಡೆಯಿಂದ ದೂರವಿದ್ದಾರೆ. 2025ರ ಮೇನಲ್ಲಿ ಕೇರಳ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ಅವರನ್ನು ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಂದ ಮೂರು ವರ್ಷಗಳ ಕಾಲ ಅಮಾನತುಗೊಳಿಸಿತು. ಕೇರಳದ ಸಂಜು ಸ್ಯಾಮ್ಸನ್ ಅವರನ್ನು ಭಾರತದ ಚಾಂಪಿಯನ್ಸ್ ಟ್ರೋಫಿ ತಂಡದಿಂದ ಹೊರಗಿಟ್ಟ ವಿವಾದದ ಸಂದರ್ಭದಲ್ಲಿ ಕ್ರಿಕೆಟ್‌ ಮಂಡಳಿಯ ವಿರುದ್ಧ ಅವಹೇಳಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಬರಹ: ಕೆ. ಎನ್‌. ರಂಗು, ಚಿತ್ರದುರ್ಗ