2027ರ ಮಹಿಳಾ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಅಕ್ಟೋಬರ್ 28ಕ್ಕೆ ಸಾಧ್ಯತೆ!
2027ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಅಕ್ಟೋಬರ್ 28 ರಂದು ಕೇರಳದ ಕೊಚ್ಚಿಯಲ್ಲಿ ನಡೆಯುವ ಸಾಧ್ಯತೆ ಇದೆ. ಇನ್ನು ಐದನೇ ಆವೃತ್ತಿಯ ಟೂರ್ನಿ ಪಂದ್ಯಗಳನ್ನು ನಡೆಸುವ ಸ್ಥಳಗಳನ್ನು ಅಂತಿಮಗೊಳಿಸುವುದು ಬಾಕಿ ಇದೆ. ಮುಂದಿನ ಕೆಲವೇ ದಿನಗಳಲ್ಲಿ ಬಿಸಿಸಿಐ ಅಂತಿಮಗೊಳಸಲಿದೆ.
2027ರ ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ದಿನಾಂಕ ಪ್ರಕಟ. -
ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ (WPL) 2027ರ ಆಟಗಾರ್ತಿಯರ ಹರಾಜು ಅಕ್ಟೋಬರ್ 28ರಂದು ಕೇರಳದ ಕೊಚ್ಚಿಯಲ್ಲಿ ನಡೆಯುವ ಸಾಧ್ಯತೆಯಿದೆ. ಮುಂಬರುವ ಐದನೇ ಆವೃತ್ತಿಯ ಟೂರ್ನಿಗೆ ಆತಿಥ್ಯ ವಹಿಸುವ ಸ್ಥಳಗಳ ಆಯ್ಕೆ ಪ್ರಕ್ರಿಯೆಯನ್ನೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂದುವರಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಡಬ್ಲ್ಯುಟಿಎಲ್ ಆಡಳಿತ ಮಂಡಳಿಯು ವರ್ಚುವಲ್ ಸಭೆಯಲ್ಲಿ ಟೂರ್ನಿಯ ಆತಿಥ್ಯ ಸ್ಥಳಗಳ ಕುರಿತು ಚರ್ಚೆ ನಡೆಸಿದೆ. ಐದನೇ ಆವೃತ್ತಿಗಾಗಿ ಈಗಾಗಲೇ ಪಂದ್ಯಗಳನ್ನು ಆಯೋಜಿಸಿರುವ ಕ್ರೀಡಾಂಗಣಗಳ ಜೊತೆಗೆ ಹೊಸ ಮೈದಾನಗಳನ್ನೂ ಪರಿಗಣಿಸಲು ಬಿಸಿಸಿಐ ಮುಂದಾಗಿದೆ. 2026ರ ಟೂರ್ನಿ ಮುಂಬೈ ಮತ್ತು ವಡೋದರಾದಲ್ಲಿ ನಡೆದಿತ್ತು. ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆದಿತ್ತು.
ಮುಂಬೈನ ಬ್ರಬೋರ್ನ್ ಸ್ಟೇಡಿಯಂ ಅನ್ನು 2027ರ ಡಬ್ಲ್ಯುಪಿಎಲ್ ಟೂರ್ನಿಯ ಒಂದು ಆತಿಥ್ಯ ಸ್ಥಳವನ್ನಾಗಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಎರಡನೇ ನಗರವಾಗಿ ವಡೋದರಾ ಅಥವಾ ವಾರಣಾಸಿಯಲ್ಲಿ ಯಾವ ನಗರವನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಬಿಸಿಸಿಐ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿರುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
IND vs AFG: ಸಂಜು ಸ್ಯಾಮ್ಸನ್ ಬಗ್ಗೆ ಆಶಾದಾಯಕ ಹೇಳಿಕೆ ನೀಡಿದ ಸುನೀಲ್ ಗವಾಸ್ಕರ್!
2026ರ ಟೂರ್ನಿಯ ಫೈನಲ್ ಪಂದ್ಯಕ್ಕೆ ವಡೋದರಾದ ಕೊಟಂಬಿ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು.
ವಾರಾಣಸಿಯಲ್ಲಿ ನಿರ್ಮಾಣವಾಗಿರುವ ಹೊಸ ಕ್ರೀಡಾಂಗಣವೂ 2027ರ ಆತಿಥ್ಯಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ. ಆದರೆ 2027ರ ಜನವರಿಯೊಳಗೆ ಕ್ರೀಡಾಂಗಣ ಸಿದ್ಧವಾಗಬೇಕಾಗಿದೆ. ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಬಿಸಿಸಿಐ ಅಧಿಕಾರಿಗಳು ಕ್ರೀಡಾಂಗಣದ ಪರಿಶೀಲನೆ ನಡೆಸುವ ನಿರೀಕ್ಷೆಯಿದೆ.
ಹೊಸ ಕ್ರೀಡಾಂಗಣವಾಗಿರುವ ಹಿನ್ನೆಲೆಯಲ್ಲಿ, ಡಬ್ಲ್ಯುಪಿಎಲ್ ಪಂದ್ಯಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಪರಿಶೀಲಿಸಲು ಅಲ್ಲಿ ದೇಶಿ ಅಥವಾ ಅಭ್ಯಾಸ ಪಂದ್ಯಗಳನ್ನು ನಡೆಸುವ ಬಗ್ಗೆಯೂ ಬಿಸಿಸಿಐ ಚಿಂತನೆ ನಡೆಸುತ್ತಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣವೂ ಸಂಭಾವ್ಯ ಆತಿಥ್ಯ ಸ್ಥಳಗಳ ಪಟ್ಟಿಯಲ್ಲಿ ಚರ್ಚೆಗೆ ಬಂದಿದೆ. ಆದರೆ ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ಸ್ಥಳೀಯ ಅಧಿಕಾರಿಗಳಿಂದ ಹಲವು ಅನುಮತಿ ಪಡೆಯಬೇಕಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮೂರನೇ ಟಿ20ಐನಲ್ಲಿ ವೈಭವ್ ಸೂರ್ಯವಂಶಿ ಆಡ್ತಾರಾ? ಬಿಗ್ ಅಪ್‌ಡೇಟ್ ನೀಡಿದ ಶ್ರೇಯಸ್ ಅಯ್ಯರ್!
2024ರಲ್ಲಿ ಬೆಂಗಳೂರು ಮತ್ತು ನವದೆಹಲಿಯಲ್ಲಿ ಡಬ್ಲ್ಯುಪಿಎಲ್ ಪಂದ್ಯಗಳು ನಡೆದಿದ್ದವು. ಆ ಆವೃತ್ತಿಯಲ್ಲೂ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಪಂದ್ಯಗಳಿಗೆ ಆತಿಥ್ಯ ವಹಿಸಿತ್ತು. 2027ರ ಆವೃತ್ತಿಯು ಡಬ್ಲ್ಯುಪಿಎಲ್ ಇತಿಹಾಸದ ಐದನೇ ಸೀಸನ್ ಆಗಲಿದೆ. 2023ರಲ್ಲಿ ಆರಂಭವಾದ ಲೀಗ್‌ನಲ್ಲಿ ಐದು ತಂಡಗಳು ಭಾಗವಹಿಸುತ್ತಿದ್ದವು. 2026ರಿಂದ ಟೂರ್ನಿಯನ್ನು ಜನವರಿ-ಫೆಬ್ರವರಿ ಅವಧಿಯಲ್ಲಿ ನಡೆಸಲಾಗುತ್ತಿದೆ. ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸುವುದಕ್ಕೂ ಮುನ್ನ ಬಿಸಿಸಿಐ ಆತಿಥ್ಯ ಸ್ಥಳಗಳ ಯೋಜನೆಯನ್ನು ಅಂತಿಮಗೊಳಿಸಬೇಕಾಗಿದೆ.
ಡಬ್ಲ್ಯುಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಲಾ ಎರಡು ಬಾರಿ ಪ್ರಶಸ್ತಿ ಗೆದ್ದು ಅತ್ಯಂತ ಯಶಸ್ವಿ ತಂಡಗಳಾಗಿವೆ. ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕೂ ಆವೃತ್ತಿಗಳಲ್ಲೂ ಫೈನಲ್ ತಲುಪಿದ್ದರೂ, ಇದುವರೆಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜಯಂಟ್ಸ್ ಲೀಗ್‌ನ ಇತರ ಎರಡು ತಂಡಗಳಾಗಿವೆ.