ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

DC vs RCB: ಇಂದಿನ ಆರ್‌ಸಿಬಿ vs ಡೆಲ್ಲಿ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಭೀತಿ ಇದೆಯೇ?

DC vs RCB match weather forecast: ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಇದುವರೆಗೆ 100 ಟಿ20 ಪಂದ್ಯಗಳು ನಡೆದಿದ್ದು ಈ ಪೈಕಿ ಶೇ.51ರಷ್ಟು ಚೇಸಿಂಗ್‌ ನಡೆಸಿದ ತಂಡಗಳು ಗೆಲುವು ಖಂಡಿದೆ. ಶೇ.46 ಮೊದಲು ಬ್ಯಾಟಿಂಗ್‌ ನಡೆಸಿದ ತಂಡ ಜಯಿಸಿದೆ.

ಇಂದಿನ ಆರ್‌ಸಿಬಿ vs ಡೆಲ್ಲಿ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಭೀತಿ ಇದೆಯೇ?

arun jaitley stadium weather -

Abhilash BC
Abhilash BC Apr 27, 2026 8:14 AM

ನವದೆಹಲಿ, ಎ.27: ಸೋಮವಾರದ ಹೈವೋಲ್ಟೇಜ್‌ ಐಪಿಎಲ್‌(IPL 2026) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌(DC vs RCB) ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ. ಇದೇ ಕ್ರೀಡಾಂಗಣದಲ್ಲಿ ಡೆಲ್ಲಿ ತಂಡವು ಶನಿವಾರ ನಡೆದ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ 264 ರನ್‌ಗಳ ಬೃಹತ್ ಮೊತ್ತ ಪೇರಿಸಿಯೂ ಸೋಲು ಕಂಡಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿಯೂ ಹೈಸ್ಕೋರಿಂಗ್‌ ನಿರೀಕ್ಷೆ ಮಾಡಬಹುದು. ಪಂದ್ಯದ ಹವಾಮಾನ(DC vs RCB match weather forecast) ವರದಿ ಹೇಗಿದೆ ಎಂಬ ವರದಿ ಇಲ್ಲಿದೆ.

ಹವಾಮಾನ ವರದಿ

ಪಂದ್ಯ ಆರಂಭದ ವೇಳೆ ತಾಪಮಾನವು ಸುಮಾರು 28–29°C ಇರುತ್ತದೆ. ಸ್ವಲ್ಪ ತೇವಾಂಶವಿರಬಹುದು ಮತ್ತು ಪಂದ್ಯದ ನಂತರ ಇಬ್ಬನಿ ರೂಪುಗೊಳ್ಳಬಹುದು. ಇದು ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲರ್‌ಗಳಿಗೆ ಸ್ವಲ್ಪ ಕಷ್ಟಕರವಾಗಬಹುದು. ಪರಿಣಾಮವಾಗಿ, ಟಾಸ್ ಗೆದ್ದ ತಂಡವು ಮೊದಲು ಫೀಲ್ಡಿಂಗ್ ಮಾಡಿಕೊಂಡರೆ ಉತ್ತಮ. ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ. ಪಂದ್ಯ ಆರಂಭಕ್ಕೂ ಮುನ್ನ ಹಗಲಿನಲ್ಲಿ ತಾಪಮಾನ 40°C ರಷ್ಟು ಇರಲಿದೆ.

ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಇದುವರೆಗೆ 100 ಟಿ20 ಪಂದ್ಯಗಳು ನಡೆದಿದ್ದು ಈ ಪೈಕಿ ಶೇ.51ರಷ್ಟು ಚೇಸಿಂಗ್‌ ನಡೆಸಿದ ತಂಡಗಳು ಗೆಲುವು ಖಂಡಿದೆ. ಶೇ.46 ಮೊದಲು ಬ್ಯಾಟಿಂಗ್‌ ನಡೆಸಿದ ತಂಡ ಜಯಿಸಿದೆ.

ಆರ್‌ಸಿಬಿ ಪರ ವಿರಾಟ್ ಕೊಹ್ಲಿ, ದೇವದತ್ತ ಪಡಿಕ್ಕಲ್, ನಾಯಕ ರಜತ್, ಟಿಮ್ ಡೇವಿಡ್, ಜಿತೇಶ್ ಶರ್ಮಾ, ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್ ಅವರು ರನ್‌ಗಳ ಹೊಳೆ ಹರಿಸುತ್ತಲೇ ಇದ್ದಾರೆ. ಬ್ಯಾಟಿಂಗ್‌ ಸ್ನೇಹಿ ಡೆಲ್ಲಿ ಪಿಚ್‌ನಲ್ಲಿ ಇವರನ್ನು ಕಟ್ಟಿ ಹಾಕುವ ಸವಾಲು ಕ್ಯಾಪಿಟಲ್ಸ್‌ ಬೌಲರ್‌ಗಳ ಮುಂದಿದೆ. ಕಳೆದ ಪಂದ್ಯದಂತೆ ಕ್ಯಾಚ್‌ಗಳನ್ನು ಕೈಚೆಲ್ಲಿದರೆ ಮತ್ತೊಂದು ಸೋಲಿಗೆ ತುತ್ತಾಗಬಹುದು.

DC vs RCB: ಇಂದಿನ ಡೆಲ್ಲಿ vs ಆರ್‌ಸಿಬಿ ಪಂದ್ಯದಲ್ಲಿ ಆಟಗಾರರು ನಿರ್ಮಿಸಬಹುದಾದ ದಾಖಲೆಗಳಿವು

ಸಂಭಾವ್ಯ ತಂಡ

ಡೆಲ್ಲಿ ಕ್ಯಾಪಿಟಲ್ಸ್‌: ಪೃಥ್ವಿ ಶಾ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್ (ನಾಯಕ), ಡೇವಿಡ್ ಮಿಲ್ಲರ್, ಕೈಲ್ ಜೇಮಿಸನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಟಿ ನಟರಾಜನ್, ದುಷ್ಮಂತ ಚಮೀರ.

ಇಂಪ್ಯಾಕ್ಟ್‌ ಆಟಗಾರ: ಸಮೀರ್ ರಿಜ್ವಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಜೇಕೋಬ್ ಬೆಥೆಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಮಂಗೇಶ್ ಯಾದವ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ

ಇಂಪ್ಯಾಕ್ಟ್ ಪ್ಲೇಯರ್: ದೇವದತ್ ಪಡಿಕ್ಕಲ್.