IND vs SL: ನಾಲ್ಕನೇ ದಿನವೂ ಪ್ರಾಬಲ್ಯ ಸಾಧಿಸಿದ ಭಾರತ, ಗೆಲುವಿನ ಸನಿಹದಲ್ಲಿ ಶುಭಮನ್ ಗಿಲ್ ಪಡೆ!
IND vs SL 1st Test Day 4 Highlights: ರಿಷಭ್ ಪಂತ್ ಅರ್ಧಶತಕ ಹಾಗೂ ಮಾನವ್ ಸುತಾರ್ ಅವರ ಸ್ಪಿನ್ ಮೋಡಿಯ ಬಲದಿಂದ ಭಾರತ ತಂಡ ನಾಲ್ಕನೇ ದಿನವೂ ಮೇಲುಗೈ ಸಾಧಿಸಿದೆ. ಭಾರತ ತಂಡ 193 ರನ್‌ಗಳಿಗೆ ದ್ವಿತೀಯ ಇನಿಂಗ್ಸ್‌ನಲ್ಲಿ ಆಲ್‌ಔಟ್ ಆಗಿತ್ತು. ಬಳಿಕ 372 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ, ನಾಲ್ಕನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿದೆ.
ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಗೆಲುವಿನ ಸನಿಹದಲ್ಲಿ ಭಾರತ. -
ಗಾಲೆ: ಕುಲ್ದೀಪ್ ಯಾದವ್ (Kuldeep yadav) ಅರ್ಧಶತಕ ಹಾಗೂ ಮಾನವ್ ಸುತಾರ್ (Manav Suthar) ಅವರ ಸ್ಪಿನ್ ಮೋಡಿಯ ಬಲದಿಂದ ಭಾರತ ತಂಡ, ಮೊದಲನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವೂ ಮೇಲುಗೈ ಸಾಧಿಸಿ ಗೆಲುವಿನ ಸನಿಹ ಬಂದಿದೆ. ಭಾರತ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 193 ರನ್‌ಗಳಿಗೆ ಆಲ್‌ಔಟ್ ಆಗಿ ಶ್ರೀಲಂಕಾ ತಂಡಕ್ಕೆ 372 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡ ನಾಲ್ಕನೇ ದಿನದಾಟದ ಅಂತ್ಯಕ್ಕೆ 34 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 84 ರನ್‌ಗಳನು ಗಳಿಸಿದೆ ಹಾಗೂ ಸೋಲಿನ ಭೀತಿಗೆ ಸಿಲುಕಿದೆ. ಐದನೇ ಹಾಗೂ ಕೊನೆಯ ದಿನವಾದ ಬುಧವಾರ ಭಾರತ ತಂಡಕ್ಕೆ ಗೆಲುವು ಸಾಧಿಸಲು ಇನ್ನು ಕೇವಲ 6 ವಿಕೆಟ್‌ಗಳು ಮಾತ್ರ ಅಗತ್ಯವಿದೆ.
ಇಲ್ಲಿನ ಗಾಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡದ ಪರ ಬ್ಯಾಟಿಂಗ್‌ಗೆ ಕಠಿಣವಾಗಿದ್ದ ಪಿಚ್‌ನಲ್ಲಿ ಬಹುತೇಕ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ ಅವರು ಬ್ಯಾಟಿಂಗ್‌ನಲ್ಲಿ ವಿಫಲರಾದರು. ಆದರೆ, ಕೆಎಲ್ ರಾಹುಲ್ (35 ರನ್), ದೇವದತ್ ಪಡಿಕ್ಕಲ್ (44 ರನ್) ಹಾಗೂ ರಿಷಭ್ ಪಂತ್ (66 ರನ್) ಅವರು ಉತ್ತಮ ಪ್ರದರ್ಶನ ತೋರಿದರ ಫಲವಾಗಿ ಭಾರತ ತಂಡ 200ರ ಸನಿಹ ತಲುಪಲು ಸಾಧ್ಯವಾಯಿತು.
ʻನನ್ನನ್ನು ಉಳಿಸಿದ್ದಕ್ಕಾಗಿ ನಿಮಗೆ ಧನ್ಯವಾದʼ: ದೇವದತ್ ಪಡಿಕ್ಕಲ್‌ರನ್ನು ಅಪ್ಪಿಕೊಂಡ ಕೆಎಲ್ ರಾಹುಲ್!
ಶ್ರೀಲಂಕಾ ತಂಡದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಆಸಿತಾ ಫರ್ನಾಂಡೊ ಅವರು 4 ವಿಕೆಟ್ ಕಿತ್ತರೆ, ಪ್ರಭತ್ ಜಯಸೂರ್ಯ 3 ವಿಕೆಟ್‌ಗಳನ್ನು ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಭಾರತ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೂ ಪ್ರಥಮ ಇನಿಂಗ್ಸ್‌ನಲ್ಲಿ 178 ರನ್‌ಗಳ ಮುನ್ನಡೆ ನೆರವಿಗೆ ಬಂದಿತು. ಅಂತಿಮವಾಗಿ ಟೀಮ್ ಇಂಡಿಯಾ, ಎದುರಾಳಿ ಶ್ರೀಲಕಾ ತಂಡಕ್ಕೆ 372 ರನ್‌ಗಳ ಗುರಿಯನ್ನು ನೀಡಿತು.
Stumps on Day 4 in Galle! 🏟️
— BCCI (@BCCI) August 18, 2026
Sri Lanka 84/4 in the 2nd innings#TeamIndia 6⃣ wickets away from victory in the opening #SLvIND Test.
Scorecard ▶️ https://t.co/M9LVyCAp8y pic.twitter.com/Fhu9YGYeC1
ಬಳಿಕ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡ, ನಾಲ್ಕನೇ ದಿನದಾಟದ ಅಂತ್ಯಕ್ಕೆ 34 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 84 ರನ್‌ಗಳನ್ನು ಕಲೆ ಹಾಕಿದೆ ಹಾಗೂ ಸೋಲಿನ ಭೀತಿಗೆ ಒಳಗಾಗಿದೆ. ಭಾರತ ತಂಡ ಈ ಪಂದ್ಯವನ್ನು ಗೆಲ್ಲಲು ಕೊನೆಯ ದಿನವಾದ ಬುಧವಾರ ಆರು ವಿಕೆಟ್‌ಗಳನ್ನು ಪಡೆಯಬೇಕಾದ ಅಗತ್ಯವಿದೆ. ಐದನೇ ದಿನ ಮೊದಲನೇ ಸೆಷನ್‌ನಲ್ಲಿ ಪಿಚ್ ಬ್ಯಾಟಿಂಗ್‌ಗೆ ಕಠಿಣವಾಗಲಿದ್ದು, ಭಾರತೀಯ ಬೌಲರ್‌ಗಳು ಪರಿಣಾಮಕಾರಿಯಾಗಿ ಬೌಲ್ ಮಾಡಿದರೆ ಭಾರತ ತಂಡ ಬಹುಬೇಗ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆಯಲಿದೆ.
IND vs SL: 100 ಟೆಸ್ಟ್ ಸಿಕ್ಸರ್‌ಗಳನ್ನು ಸಿಡಿಸಿ ದೊಡ್ಡ ದಾಖಲೆ ಬರೆದ ರಿಷಭ್ ಪಂತ್!
ದ್ವಿತೀಯ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡ, ಓಪನರ್ ನಿಶಾನ್ ಮಧುಶಂಕ ಅವರನ್ನು ಬಹುಬೇಗ ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್‌ಗೆ ಇವರು ವಿಕೆಟ್ ಒಪ್ಪಿಸಿದರು. ನಂತರ ಇವರಿಗೆ ಕೈ ಜೋಡಿಸಿದ ಮಾನವ್ ಸುತಾರ್ ಅವರು ಪಸಿಂದು ಸೂರ್ಯಬಂಡಾರ ಮತ್ತು ಲಹಿರು ಉದಾರಾ ಅವರ ವಿಕೆಟ್‌ಗಳನ್ನು ಕಿತ್ತರು. ಇವರ ಜೊತೆಗೆ ಪ್ರಸಿಧ್ ಕೃಷ್ಣ ಅವರು ಕಮಿಂದು ಮೆಂಡಿಸ್ ಅವರನ್ನು ಔಟ್ ಮಾಡಿದರು.
ರಿಷಭ್ ಪಂತ್ ನಿರ್ಣಾಯಕ ಅರ್ಧಶತಕ
ಭಾರತ ತಂಡದ ಪರ ನಾಲ್ಕನೇ ದಿನ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದ ರಿಷಭ್ ಪಂತ್, ತಮ್ಮ ನೈಜ ಶೈಲಿಯಲ್ಲಿ ಬ್ಯಾಟ್ ಬೀಸಿದರು. ಅವರು ಆಡಿದ 69 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 66 ರನ್‌ಗಳನ್ನು ಬಾರಿಸಿದರು. ಆ ಮೂಲಕ ಭರ್ಜರಿ ಫಾರ್ಮ್‌ಗೆ ಮರಳುವ ಭರವಸೆಯನ್ನು ಮೂಡಿಸಿದ್ದಾರೆ.
FIFTY for Rishabh Pant! ✅
— BCCI (@BCCI) August 18, 2026
He brings up his 20th Test half-century as #TeamIndia move closer to 160. 👍
Updates ▶️ https://t.co/WHXkfnivbw#SLvIND pic.twitter.com/qq6IlmSHbL
284 ರನ್‌ಗೆ ಆಲ್‌ಔಟ್ ಆಗಿದ್ದ ಶ್ರೀಲಂಕಾ
ಇದಕ್ಕೂ ಮುನ್ನ ಪ್ರಥಮ ಇನಿಂಗ್ಸ್‌ನಲ್ಲಿ ಆತಿಥೇಯ ಶ್ರೀಲಂಕಾ ತಂಡ 284 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಸೋನಲ್ ದಿನುಷಾ ಶತಕ ಹಾಗೂ ನಿರೋಶನ್ ಡಿಕ್ವೆಲ್ಲಾ ಅವರು 80 ರನ್‌ಗಳನ್ನು ಗಳಿಸಿದ್ದರು. ಭಾರತದ ಪರ ಮಾನವ್ ಸುತಾರ್ 4 ವಿಕೆಟ್ ಕಿತ್ತಿದ್ದರೆ, ರವೀಂದ್ರ ಜಡೇಜಾ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡಿದ್ದ ಭಾರತ ತಂಡ, ದೇವದತ್ ಪಡಿಕ್ಕಲ್ (167 ರನ್) ಅವರ ಶತಕದ ಬಲದಿಂದ ಪ್ರಥಮ ಇನಿಂಗ್ಸ್‌ನಲ್ಲಿ 462 ರನ್‌ಗಳನ್ನು ಕಲೆ ಹಾಕಿತ್ತು.