Mitchell Starc: ಗಂಟೆಗೆ 176.5 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದರೇ ಮಿಚೆಲ್ ಸ್ಟಾರ್ಕ್?
ಒಂದೊಮ್ಮೆ ಸ್ಟಾರ್ಕ್ ಗಂಟೆಗೆ 176.5 ಕಿ.ಮೀ ವೇಗದಲ್ಲಿ ಬೌಲಿಂಗ್ ನಡೆಸಿದ್ದರೆ ಅದು ವಿಶ್ವ ದಾಖಲೆಯ ಎಸೆತವಾಗಲಿದೆ. ಸದ್ಯ ದಾಖಲೆ ಇರುವುದು ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಹೆಸರಿನಲ್ಲಿ. ಅವರು 2003ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 161.3 ಕಿ.ಮೀ ವೇಗದಲ್ಲಿ ಚೆಂಡೆಸೆದಿದ್ದರು.

-

ಪರ್ತ್: ಭಾನುವಾರದ ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ಏಕದಿನ ಪಂದ್ಯದಲ್ಲಿ ವೇಗಿ ಮಿಚೆಲ್ ಸ್ಟಾರ್ಕ್(Mitchell Starc) ಅವರು ರೋಹಿತ್ ಶರ್ಮಗೆ ಮಾಡಿದ ಒಂದು ಸ್ಫೆಲ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದು ಮಾಡಲಾರಂಭಿಸಿದೆ. ಹೌದು, ಸ್ಟಾರ್ಕ್ ಎಸೆತ ಇನಿಂಗ್ಸ್‌ನ ಮೊದಲ ಓವರ್‌ನ ಎಸೆತವೊಂದು ಗಂಟೆಗೆ 176.5 ಕಿ.ಮೀ ವೇಗದಲ್ಲಿ(World's fastest ball) ಎಸೆದಿದ್ದಾರೆ ಎನ್ನಲಾಗಿದೆ.
ಸ್ಟಾರ್ಕ್ 176.5 ಕಿ.ಮೀ ವೇಗದಲ್ಲಿ ಚೆಂಡೆದರು ಎಂದಾಗ ಕ್ರಿಕೆಟ್ ಅಭಿಮಾನಿಗಳು ಒಂದು ಷಣ ದಿಗ್ಭ್ರಮೆಗೊಂಡರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿಯೂ ಭಾರೀ ಕುತೂಹಲಕಾರಿ ಚರ್ಚೆಗಳು ನಡೆದವು. ಆದರೆ ಐಸಿಸಿ ಈ ಎಸೆತದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡದ ಕಾರಣ ಇದು ತಾಂತ್ರಿಕ ದೋಷದಿಂದ ಉಂಟಾದ ಸಮಸ್ಯೆ ಎನ್ನಲಾಗಿದೆ.
ಒಂದೊಮ್ಮೆ ಸ್ಟಾರ್ಕ್ ಗಂಟೆಗೆ 176.5 ಕಿ.ಮೀ ವೇಗದಲ್ಲಿ ಬೌಲಿಂಗ್ ನಡೆಸಿದ್ದರೆ ಅದು ವಿಶ್ವ ದಾಖಲೆಯ ಎಸೆತವಾಗಲಿದೆ. ಸದ್ಯ ದಾಖಲೆ ಇರುವುದು ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಹೆಸರಿನಲ್ಲಿ. ಅವರು 2003ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 161.3 ಕಿ.ಮೀ ವೇಗದಲ್ಲಿ ಚೆಂಡೆಸೆದಿದ್ದರು.
ಇದನ್ನೂ ಓದಿ Shubman Gill: ಏಕದಿನ ನಾಯಕತ್ವದೊಂದಿಗೆ ಹಲವು ದಾಖಲೆ ಬರೆದ ಗಿಲ್; ಮಳೆಯಿಂದ ಪಂದ್ಯ ಸ್ಥಗಿತ
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಎಸೆತದ ದಾಖಲೆ ಮಿಚೆಲ್ ಸ್ಟಾರ್ಕ್ ಹೆಸರಿನಲ್ಲಿದೆ. ಸ್ಟಾರ್ಕ್ 160.4 ಕಿ.ಮೀ ವೇಗದಲ್ಲಿ ಎಸೆದಿದ್ದಾರೆ.
ಭಾರತ ವಿರುದ್ಧದ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಸದ್ಯ 6 ಓವರ್‌ಗಳ ಸ್ಪೆಲ್‌ನಲ್ಲಿ ಒಂದು ಮೇಡನ್ ಸಹಿತ 22 ರನ್‌ಗೆ ಒಂದು ವಿಕೆಟ್ ಕೆಡವಿದ್ದಾರೆ. ವಿರಾಟ್ ಕೊಹ್ಲಿಗೆ ಬೌಲಿಂಗ್ ಅವರನ್ನು ಡಕ್ ಔಟ್ ಮಾಡಿದರು.