ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs GT: ಕೊಹ್ಲಿಯ ಕ್ಯಾಚ್‌ ಬಿಟ್ಟಿದ್ದು ಸೋಲಿಗೆ ಕಾರಣ ಎಂದ ನಾಯಕ ಶುಭಮನ್‌ ಗಿಲ್‌

IPL 2026: ಮೊಹಮ್ಮದ್‌ ಸಿರಾಜ್‌ ಓವರ್‌ನಲ್ಲಿ ಕೊಹ್ಲಿ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್‌ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದರು. ಆದರೆ ವಾಷಿಂಗ್ಟನ್‌ ಸುಂದರ್‌ ಸುಲಭವಾದ ಕ್ಯಾಚ್‌ ಪಡೆಯಲು ವಿಫಲರಾಗಿ ಕೊಹ್ಲಿಗೆ ಜೀವದಾನ ನೀಡಿದರು. ಇದರ ಸಂಪೂರ್ಣ ಲಾಭವೆತ್ತಿದ ಅವರು 81 ರನ್‌ ಬಾರಿಸಿದರು.

ಕೊಹ್ಲಿಯ ಕ್ಯಾಚ್‌ ಬಿಟ್ಟಿದ್ದು ತಂಡದ ಸೋಲಿಗೆ ಕಾರಣ; ಶುಭಮನ್‌ ಗಿಲ್‌

Shubman Gill -

Abhilash BC
Abhilash BC Apr 25, 2026 7:35 AM

ಬೆಂಗಳೂರು, ಎ.25: ಶುಕ್ರವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026)ನ, ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs GT) ವಿರುದ್ಧದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡ 5 ವಿಕೆಟ್‌ ಅಂತರದ ಸೋಲು ಕಂಡಿತ್ತು. ತಂಡದ ಸೋಲಿಗೆ ನಾಯಕ ಶುಭಮನ್ ಗಿಲ್(Shubman Gill) ಕಾರಣ ತಿಳಿಸಿದ್ದು, ಮಧ್ಯಮ ಹಂತದಲ್ಲಿ ಬೌಂಡರಿಗಳ ಕೊರತೆ ಮತ್ತು ಕೊಹ್ಲಿಯ ಕ್ಯಾಚ್‌ ಕೈಚೆಲ್ಲಿದ್ದು ಮುಳುವಾಯಿತು ಎಂದಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಗಿಲ್‌, "ಖಂಡಿತ. 16 ರಿಂದ 19ನೇ ಓವರ್‌ ತನಕ ನಾವು ಯಾವುದೇ ಬೌಂಡರಿಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಆ ಓವರ್‌ಗಳು ನಮಗೆ ನಿರ್ಣಾಯಕವಾಗಿದ್ದವು. ಪವರ್-ಪ್ಲೇ ಕೊನೆಯಲ್ಲಿ, ನಾವು ಉತ್ತಮ ಸ್ಥಿತಿಯಲ್ಲಿದ್ದೆವು. ಅಂತಿಮ ಹಂತದಲ್ಲಿ ಇದನ್ನು ಕಾಪಾಡಿಕೊಳ್ಳಲು ವಿಫಲರಾದೆವು. ಅದರಲ್ಲೂ ಮೊಹಮದ್ ಸಿರಾಜ್ ಬೌಲಿಂಗ್‌ನಲ್ಲಿ ಮಿಡ್‌ ವಿಕೆಟ್‌ನಲ್ಲಿದ್ದ ವಾಷಿಂಗ್ಟನ್ ಸುಂದರ್ ಅವರು ಕೊಹ್ಲಿ ಅವರ ಕ್ಯಾಚ್‌ ಬಿಟ್ಟಿದ್ದು ದುಬಾರಿಯಾಯಿತು" ಎಂದು ಹೇಳುವ ಮೂಲಕ ಸೋಲಿನ ಕಾರಣ ತಿಳಿಸಿದರು.

ಮೊಹಮ್ಮದ್‌ ಸಿರಾಜ್‌ ಓವರ್‌ನಲ್ಲಿ ಕೊಹ್ಲಿ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್‌ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದರು. ಆದರೆ ವಾಷಿಂಗ್ಟನ್‌ ಸುಂದರ್‌ ಸುಲಭವಾದ ಕ್ಯಾಚ್‌ ಪಡೆಯಲು ವಿಫಲರಾಗಿ ಕೊಹ್ಲಿಗೆ ಜೀವದಾನ ನೀಡಿದರು. ಇದರ ಸಂಪೂರ್ಣ ಲಾಭವೆತ್ತಿದ ಅವರು 81 ರನ್‌ ಬಾರಿಸಿದರು.

IPL 2026: : ಕ್ರಿಸ್ ಗೇಲ್, ರೋಹಿತ್ ಶರ್ಮಾ ನಂತರ ಸಿಕ್ಸರ್‌ ದಾಖಲೆ ಬರೆದ ವಿರಾಟ್ ಕೊಹ್ಲಿ

ಸಾಯಿ ಸುದರ್ಶನ್ ಅಮೋಘ ಆಟದ ನೆರವಿನಿಂದ ಗುಜರಾತ್ ಟೈಟನ್ಸ್‌ ತಂಡ ಸವಾಲಿನ ಮೊತ್ತ ದಾಖಲಿಸಿತ್ತು. ಮೊದಲ ವಿಕೆಟ್‌ಗೆ ನಾಯಕ ಶುಭಮನ್ ಗಿಲ್ (32, 24 ಎಸೆತ) ಜೊತೆ 128 ರನ್ (76 ಎಸೆತ) ಸೇರಿಸಿ ಒಳ್ಳೆಯ ಬುನಾದಿ ಒದಗಿಸಿಕೊಟ್ಟರು. ಸಾಯಿ ಐಪಿಎಲ್‌ನಲ್ಲಿ ಅತಿ ವೇಗವಾಗಿ 2000 ರನ್ ಪೂರೈಸಿದ ಶ್ರೇಯಕ್ಕೆ ಪಾತ್ರರಾದರು.

206 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ, ವಿರಾಟ್‌ ಕೊಹ್ಲಿ (81 ರನ್) ಹಾಗೂ ದೇವದತ್‌ ಪಡಿಕ್ಕಲ್‌ (‌55 ರನ್‌) ಅವರ ಅರ್ಧಶತಕಗಳ ಬಲದಿಂದ 18.5 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ ಗೆಲುವು ದಾಖಲಿಸಿತು. ಈ ಸೀಸನ್‌ನಲ್ಲಿ ತವರಿನ ಅಂಗಣದಲ್ಲಿ ಕೊನೆಯ ಪಂದ್ಯವನ್ನು ಗೆದ್ದು ಅಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿತು. ಮುಂದಿನ ಎರಡು ತವರು ಪಂದ್ಯವನ್ನು ರಾಯ್ಪುದರಲ್ಲಿ ಆಡಲಿದೆ.

IPL 2026: : ಕ್ರಿಸ್ ಗೇಲ್, ರೋಹಿತ್ ಶರ್ಮಾ ನಂತರ ಸಿಕ್ಸರ್‌ ದಾಖಲೆ ಬರೆದ ವಿರಾಟ್ ಕೊಹ್ಲಿ

ಗೆಲುವಿನಿಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಪಂದ್ಯಕ್ಕೂ ಮುನ್ನ ಮೂರನೇ ಸ್ಥಾನಿಯಾಗಿತ್ತು. ಸದ್ಯ ಆರ್‌ಸಿಬಿ ಆಡಿದ 7 ಪಂದ್ಯಗಳಲ್ಲಿ 5 ಗೆಲುವು 2 ಸೋಲಿನೊಂದಿಗೆ 10 ಅಂಕ ಗಳಿಸಿದೆ. ತಂಡದ ರನ್‌ರೇಟ್‌(+1.101) ಕೂಡ ಉತ್ತಮವಾಗಿದೆ.