GT vs RR: ಇಂದಿನ ಗುಜರಾತ್-ರಾಜಸ್ಥಾನ್ ಪಂದ್ಯದ ಪಿಚ್ ರಿಪೋರ್ಟ್ ಹೇಗಿದೆ?
IPL 2026: ಪಂದ್ಯಕ್ಕೆ ಯಾವುದೇ ಮಳೆ ಭೀತಿ ಎದುರಾಗಿಲ್ಲ. ಪಂದ್ಯದ ವೇಳೆ ಸುಮಾರು 30°C ತಾಪಮಾನವಿರುತ್ತದೆ. ಮತ್ತು ಗಂಟೆಗೆ 13 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಸಂಜೆ 7:30 ರ ಹೊತ್ತಿಗೆ, ಆಕಾಶವು ಸ್ಪಷ್ಟವಾಗಿರುತ್ತದೆ ಮತ್ತು ತಾಪಮಾನವು 29°C ಗೆ ಸ್ವಲ್ಪ ಇಳಿಯಲಿದೆ.
Narendra Modi Stadium -
Source : Narendra Modi Stadium
ಅಹಮದಾಬಾದ್, ಎ. 4: ಇಂದು(ಶನಿವಾರ) ರಾತ್ರಿ ನಡೆಯುವ ಐಪಿಎಲ್(IPL 2026) ಪಂದ್ಯದಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಗುಜರಾತ್ ಟೈಟಾನ್ಸ್(GT vs RR) ತಂಡ ರಾಜಸ್ಥಾನ್ ರಾಯಲ್ಸ್ ಸವಾಲು ಎದುರಿಸಲು ಸಜ್ಜಾಗಿದೆ. ಮೇಲ್ನೋಟಕ್ಕೆ ರಾಜಸ್ಥಾನ ರಾಯಲ್ಸ್ ಫೇವರಿಟ್ ಆಗಿ ಕಾಣುತ್ತಿದೆ. ಈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡಗಳ ಮಾಹಿತಿ ಇಲ್ಲಿದೆ.
ಗುಜರಾತ್ ತಂಡದಲ್ಲಿ ಕಗಿಸೊ ರಬಾಡ, ಪ್ರಸಿದ್ಧಕೃಷ್ಣ ಮತ್ತು ಮೊಹಮದ್ ಸಿರಾಜ್, ರಶೀದ್ ಖಾನ್ ಅವರಂತದ ಅಂತಾರಾಷ್ಟ್ರೀಯ ಅನುಭವಿ ಬೌಲಿಂಗ್ ಪಡೆ ಕಾಣುತ್ತಿದ್ದರೂ, ಬ್ಯಾಟರ್‌ಸ್ನೇಹಿ ಪಿಚ್‌ನಲ್ಲಿ ವೈಭವ ಸೂರ್ಯವಂಶಿ ಅವರನ್ನು ಕಟ್ಟಿಹಾಕುುದು ಅಷ್ಟು ಸುಲಭವಲ್ಲ. ಕಳೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಬ್ಬರಿಸಿದ್ದ ಸೂರ್ಯವಂಶಿ, 15 ಎಸೆತಗಳಲ್ಲಿ 50 ರನ್ ಸಿಡಿಸಿದ್ದರು.
ರಾಯಲ್ಸ್‌ನ ಪ್ರಮುಖ ವೇಗಿಗಳಾದ ನಾಂಡ್ರೆ ಬರ್ಗರ್ ಮತ್ತು ಜೋಫ್ರಾ ಆರ್ಚರ್ ಅವರು ಟೈಟನ್ಸ್‌ನ ಅಗ್ರ ಬ್ಯಾಟರ್‌ಗಳಾದ ಗಿಲ್, ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಟರ್ ಅವರನ್ನು ಕಠಿಣ ಪರೀಕ್ಷೆಗೊಡ್ಡುವುದಂತೂ ಖಚಿತ. ಜತೆಗೆ ತಂಡದ ಬ್ಯಾಟಿಂಗ್ ಸರದಿ ಪ್ರಬಲವಾಗಿದೆ. ನಾಯಕ ರಿಯಾನ್ ಪರಾಗ್, ಭಾರತ ತಂಡದ ಆಟಗಾರರಾದ ರವೀಂದ್ರ ಜಡೇಜ, ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೇಲ್, ಹೆಟ್‌ಮೈರ್ ಅವರನ್ನು ಹೊಂದಿದೆ.
ಪಿಚ್ ರಿಪೋರ್ಟ್
ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣವು ಚೇಸಿಂಗ್ ನಡೆಸುವ ತಂಡಗಳಿಗೆ ಸೂಕ್ತ ಮೈದಾನವಲ್ಲ. 2025 ರ ಟೂರ್ನಿಯಲ್ಲಿ ಇಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳು ಜಯಿಸಿದೆ. ವೇಗಿಗಳಿಗೆ ಈ ಪಿಚ್ ನೆರವು ನೀಡುವ ನಿರೀಕ್ಷೆಯಿದೆ.
ಹವಾಮಾನ ವರದಿ
ಪಂದ್ಯಕ್ಕೆ ಯಾವುದೇ ಮಳೆ ಭೀತಿ ಎದುರಾಗಿಲ್ಲ. ಪಂದ್ಯದ ವೇಳೆ ಸುಮಾರು 30°C ತಾಪಮಾನವಿರುತ್ತದೆ. ಮತ್ತು ಗಂಟೆಗೆ 13 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಸಂಜೆ 7:30 ರ ಹೊತ್ತಿಗೆ, ಆಕಾಶವು ಸ್ಪಷ್ಟವಾಗಿರುತ್ತದೆ ಮತ್ತು ತಾಪಮಾನವು 29°C ಗೆ ಸ್ವಲ್ಪ ಇಳಿಯಲಿದೆ. ರಾತ್ರಿ ಮುಂದುವರೆದಂತೆ, ತಾಪಮಾನವು ಕ್ರಮೇಣ ರಾತ್ರಿ 8:30 ಕ್ಕೆ 28°C ಮತ್ತು ರಾತ್ರಿ 9:30 ಕ್ಕೆ 27°C ಗೆ ಇಳಿಯಲಿದೆ. ಒಟ್ಟಾರೆಯಾಗಿ, ಪಂದ್ಯದ ಸಮಯದಲ್ಲಿ ಹವಾಮಾನವು ಆಹ್ಲಾದಕರವಾಗಿರಲಿದೆ
DC vs MI: ಡಬಲ್ ಹೆಡರ್ ಪಂದ್ಯದಲ್ಲಿ ಮುಂಬೈ ಸವಾಲಿಗೆ ಡೆಲ್ಲಿ ಸಜ್ಜು
ಮುಖಾಮುಖಿ ದಾಖಲೆ
ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಇದುವರೆಗೂ 8 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಗುಜರಾತ್ 6 ಪಂದ್ಯ ಗೆದ್ದಿದರೆ, ರಾಜಸ್ಥಾನ್ 2 ಪಂದ್ಯ ಮಾತ್ರ ಗೆದ್ದಿದೆ.
ಸಂಭಾವ್ಯ ಆಡುವ ಬಳಗ
ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿ.ಕೀ.), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಅಶೋಕ್ ಶರ್ಮಾ, ಮೊಹಮ್ಮದ್ ಸಿರಾಜ್.
ಇಂಪ್ಯಾಕ್ಟ್ ಪ್ಲೇಯರ್: ಪ್ರಸಿದ್ಧ್ ಕೃಷ್ಣ
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್ (ನಾಯಕ), ಧ್ರುವ ಜುರೆಲ್ (ವಿ.ಕೀ.), ಶಿಮ್ರಾನ್ ಹೆಟ್ಮೆಯರ್, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಸಂದೀಪ್ ಶರ್ಮಾ, ರವಿ ಬಿಷ್ಣೋಯ್, ಬ್ರಿಜೇಶ್ ಶರ್ಮಾ
ಇಂಪ್ಯಾಕ್ಟ್ ಪ್ಲೇಯರ್: ಡೊನೊವನ್ ಫೆರೇರಾ
ಪಂದ್ಯ ಆರಂಭ: ರಾತ್ರಿ 7.30.
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್.