ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

2 ಕೆಟ್ಟ ಇನ್ನಿಂಗ್ಸ್‌ಗಳಿಂದ ಸಂಜು ಸ್ಯಾಮ್ಸನ್‌ರನ್ನು ಟೀಕಿಸಲು ಸಾಧ್ಯವಿಲ್ಲ: ಸಿಎಸ್‌ಕೆ ಕೋಚ್

ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ತಂಡ 5 ವಿಕೆಟ್‌ಗೆ 209 ರನ್‌ ಕಲೆಹಾಕಿತು. ಗುರಿ ಬೆನ್ನಟ್ಟಿದ ಪಂಜಾಬ್‌ ತಂಡ 18.4 ಓವರ್‌ಗಳಲ್ಲೇ ಜಯ ತನ್ನದಾಗಿಸಿಕೊಂಡಿತು. ಚೆನ್ನೈ ತಂಡಕ್ಕೆ ತನ್ನ ತವರು ಮೈದಾನ ಚೆಪಾಕ್‌ನಲ್ಲಿ ಎದುರಾದ ಸತತ 6ನೇ ಸೋಲಾಗಿದೆ.

2 ಕೆಟ್ಟ ಇನ್ನಿಂಗ್ಸ್‌ಗಳಿಂದ ಸಂಜುರನ್ನು ಟೀಕಿಸಲು ಸಾಧ್ಯವಿಲ್ಲ ಎಂದ ಕೋಚ್

Sanju Samson -

Abhilash BC
Abhilash BC Apr 4, 2026 11:17 AM

ಚೆನ್ನೈ, ಎ.4: ರಾಜಸ್ಥಾನ ರಾಯಲ್ಸ್‌ನಿಂದ ಸಿಎಸ್‌ಕೆ(CSK vs PBKS)ಗೆ ವಲಸೆ ಬಂದಿರುವ ಸಂಜು ಸ್ಯಾಮ್ಸನ್(Sanju Samson) ಮೇಲೆ ತಂಡ ಮತ್ತು ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅವರು ಈ ನಿರೀಕ್ಷೆಯನ್ನು ಹುಸಿಯಾಗಿಸಿದ್ದಾರೆ. ಆಡಿದ ಎರಡೂ ಪಂದ್ಯಗಳಲ್ಲಿಯೂ ಒಂದಂಕಿ ಕಲೆಹಾಕಿ ವೈಫಲ್ಯ ಎದುರಿಸಿದ್ದಾರೆ. ಹೀಗಿದ್ದರೂ ತಂಡದ ಮುಖ್ಯ ಕೋಚ್‌ ಸ್ಟೀಫನ್ ಫ್ಲೆಮಿಂಗ್(Stephen Fleming) ಅವರು ಸಂಜುಗೆ ಬೆಂಬಲ ಸೂಚಿಸಿದ್ದು ಕಳವಳಗಳನ್ನು ಕಡಿಮೆ ಮಾಡಿ ತಾಳ್ಮೆಯಿಂದಿರಿ ಎಂದು ಅಭಿಮಾನಿಗಳಿಗೆ ಒತ್ತಾಯಿಸಿದರು.

ಸಂಜು ಬ್ಯಾಟಿಂಗ್‌ ಫಾರ್ಮ್‌ ಬಗ್ಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸ್ಟೀಫನ್ ಫ್ಲೆಮಿಂಗ್, "ಅವರು(ಸಂಜು) ಪ್ರತಿ ಬಾರಿಯೂ ರನ್‌ ಗಳಿಸುವುದಿಲ್ಲ. ಆದರೆ, ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಚೆನ್ನಾಗಿ ತರಬೇತಿ ಪಡೆಯುತ್ತಿದ್ದಾರೆ. ಮತ್ತು ಅವರು ಆಟ ಆರಂಭಿಸಿದಾಗ, ಅವರು ಹೆಚ್ಚಾಗಿ ಪಂದ್ಯ ವಿಜೇತರಾಗಿರುತ್ತಾರೆ. ಆದ್ದರಿಂದ, ಎರಡು ಕೆಟ್ಟ ಇನ್ನಿಂಗ್ಸ್‌ಗಳನ್ನು ಮಂದಿಟ್ಟು ಟೀಕೆ ಮಾಡಬಾರದು" ಎಂದು ಹೇಳಿದರು.

ಗುವಾಹಟಿಯಲ್ಲಿ ತಮ್ಮ ಮಾಜಿ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಿದ್ದ ಮೊದಲ ಪಂದ್ಯದಲ್ಲಿ 7 ಎಸೆತಗಳಲ್ಲಿ 6 ರನ್ ಗಳಿಸಿ ನಾಂಡ್ರೆ ಬರ್ಗರ್‌ ಎಸೆತಕ್ಕೆ ಕ್ಲೀನ್‌ ಬೌಲ್ಡ್‌ ಆಗಿದ್ದರು. ಚೆಪಾಕ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ 7 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿದರು.

ಆ ಒಂದು ತಪ್ಪಿಗೆ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಭಾರೀ ದಂಡ ವಿಧಿಸಿದ ಬಿಸಿಸಿಐ

ಇತ್ತೀಚಿಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್‌ ಗೆಲುವಿನಲ್ಲಿ ಸಂಜು ಮಹತ್ವದ ಪಾತ್ರವಹಿಸಿದ್ದರು. ಸೂಪರ್‌-8, ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಆದರೆ ಐಪಿಎಲ್‌ನಲ್ಲಿ ವೈಫಲ್ಯ ಕಾಣುತ್ತಿದ್ದಾರೆ.

ಚೆನ್ನೈಗೆ 5 ವಿಕೆಟ್‌ ಸೋಲು

ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ತಂಡ 5 ವಿಕೆಟ್‌ಗೆ 209 ರನ್‌ ಕಲೆಹಾಕಿತು. ಗುರಿ ಬೆನ್ನಟ್ಟಿದ ಪಂಜಾಬ್‌ ತಂಡ 18.4 ಓವರ್‌ಗಳಲ್ಲೇ ಜಯ ತನ್ನದಾಗಿಸಿಕೊಂಡಿತು. ಚೆನ್ನೈ ತಂಡಕ್ಕೆ ತನ್ನ ತವರು ಮೈದಾನ ಚೆಪಾಕ್‌ನಲ್ಲಿ ಎದುರಾದ ಸತತ 6ನೇ ಸೋಲಾಗಿದೆ.

ಚೆನ್ನೈ ಪರ ಆಯುಶ್‌ ಮ್ಹಾತ್ರೆ(43 ಎಸೆತಕ್ಕೆ 73) ಅಬ್ಬರದ ಆಟದ ಮೂಲಕ ತಂಡವನ್ನು ಮೇಲೆತ್ತಿದರು. ಶಿವಂ ದುಬೆ 27 ಎಸೆತಕ್ಕೆ 45, ಸರ್ಫರಾಜ್‌ ಖಾನ್‌ 12 ಎಸೆತಕ್ಕೆ 32 ರನ್‌ ಸಿಡಿಸಿ ತಂಡವನ್ನು 200ರ ಗಡಿ ದಾಟಿಸಿದರು. ಪಂಜಾಬ್‌ ಪರ ವೈಶಾಕ್‌ 2 ವಿಕೆಟ್‌ ಕಿತ್ತರು.