ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rcb Sale: ಆರ್‌ಸಿಬಿ ಖರೀದಿ ರೇಸ್‌ನಲ್ಲಿ ನಿಖಿಲ್‌ ಕಾಮತ್‌, ರಂಜನ್‌ ಪೈ!

ಮೂಲಗಳ ಪ್ರಕಾರ ಆರ್‌ಸಿಬಿಯನ್ನು ಬರೋಬ್ಬರಿ 2 ಬಿಲಿಯನ್‌ ಡಾಲರ್‌(ಅಂದಾಜು 17700 ಕೋಟಿ ರು.ಗೆ) ಗೆ ಮಾರಾಟ ಮಾಡಲು ಡಿಯಾಜಿಯೋ ಮುಂದಾಗಿದೆ. ಫೋರ್ಬ್ಸ್ ವರದಿ ಪ್ರಕಾರ, ಪೂನಾವಾಲಾ ಮತ್ತು ಕುಟುಂಬದ ನಿವ್ವಳ ಮೌಲ್ಯ 1.7 ಲಕ್ಷ ಕೋಟಿ ಇದೆ. ಇನ್ನು ರಂಜನ್‌ ಪೈ 24000 ಕೋಟಿ, 22000 ಕೋಟಿ ನಿವ್ವಳ ಮೌಲ್ಯ ಹೊಂದಿದ್ದಾರೆ.

ಆರ್‌ಸಿಬಿ ಖರೀದಿ ರೇಸಲ್ಲಿ ಕನ್ನಡಿಗ ಬಿಲಿಯನೇರ್‌ ಉದ್ಯಮಿಗಳು

ನಿಖಿಲ್‌ ಕಾಮತ್‌ ಮತ್ತು ರಂಜನ್‌ ಪೈ -

Abhilash BC
Abhilash BC Nov 8, 2025 9:58 AM

ಬೆಂಗಳೂರು: ಹಾಲಿ ಐಪಿಎಲ್‌ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ಮಾರಾಟಕ್ಕಿದೆ(Rcb Sale) ಎನ್ನುವ ಸುದ್ದಿ ಈಗಾಗಲೇ ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಫ್ರ್ಯಾಂಚೈಸಿ ಮಾಲೀಕರಾದ ಯುನೈಟೆಡ್‌ ಸ್ಪಿರಿಟ್ಸ್‌ ಲಿ. (ಯುಎಸ್‌ಎಲ್‌), ರಾಯಲ್‌ ಚಾಲೆಂಜರ್ಸ್‌ ಸ್ಪೋರ್ಟ್ಸ್‌ ಪ್ರೈ.ಲಿ.ನಲ್ಲಿ ಮಾಡಿರುವ ಹೂಡಿಕೆಗಳಿಗೆ ಸಂಬಂಧಿಸಿ ವಿವರವಾದ ಮೌಲ್ಯಮಾಪನಕ್ಕೆ ಮುಂದಾಗಿದೆ. ಇದರ ಬೆನ್ನಲ್ಲೇ ಕನ್ನಡಿಗ ಬಿಲಿಯನೇರ್‌ ಉದ್ಯಮಿಗಳು ತಂಡ ಖರೀದಿಗೆ ಮುಂದಾಗಿದ್ದಾರೆ.

ಸೀರಮ್ ಇನ್‌ಸ್ಟಿಟ್ಯೂಟ್‌ ಸಿಇಒ ಅದಾರ್ ಪೂನಾವಾಲಾ, ಅದಾನಿ ಗ್ರೂಪ್ ಮತ್ತು ರವಿ ಜೈಪುರಿಯಾ ಆರ್‌ಸಿಬಿ ಖರೀದಿಗೆ ಒಲವು ಹೊಂದಿದ್ದಾರೆ ಎನ್ನಲಾಗಿತ್ತು. ಇದೀಗ ಈ ರೇಸ್‌ಗೆ ಕನ್ನಡಿಗರ ಎಂಟ್ರಿ ಆಗಿದೆ. ಜೆರೋದಾ ಸಂಸ್ಥೆಯ ಸಹ ಸ್ಥಾಪಕ ನಿಖಿಲ್‌ ಕಾಮತ್‌(Nikhil Kamath) ಹಾಗೂ ಮಣಿಪಾಲ್‌ ಎಜುಕೇಶನ್‌ ಮತ್ತು ಮೆಡಿಕಲ್‌ ಗ್ರೂಪ್‌ (ಎಂಇಎಂಜಿ) ಮುಖ್ಯಸ್ಥ ರಂಜನ್‌ ಪೈ(Ranjan Pai) ಆರ್‌ಸಿಬಿ ಖರೀದಿಸಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಐಪಿಎಲ್ ಫ್ರಾಂಚೈಸಿಗಳ ಪೈಕಿ ಆರ್‌ಸಿಬಿಯು ಅತಿ ಹೆಚ್ಚು ಬ್ರಾಂಡ್ ಮೌಲ್ಯವನ್ನು ಹೊಂದಿದ್ದು, ಇದರ ಮೌಲ್ಯ 2300 ಕೋಟಿ ರೂ. ಇದೆ.

ಫ್ರ್ಯಾಂಚೈಸಿ ಮಾರಾಟದ ಬಗ್ಗೆ ಪ್ರತಿಕ್ರಿಯಿಸಲು ಆರ್‌ಸಿಬಿ ಮಾತೃಸಂಸ್ಥೆ ಡಿಯಾಜಿಯೊ ಈ ಹಿಂದೆ ನಿರಾಕರಿಸಿತ್ತು. ಆದರೆ ಇಈಗ ಉತ್ತಮ ಮೊತ್ತ ಸಿಕ್ಕರೆ ಮಾರಾಟ ಮಾಡಲು ಸಿದ್ಧ ಎಂದಿದೆ. ಐಪಿಎಲ್‌ನಲ್ಲಿ ಪುರುಷರ ಮತ್ತು ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ತಂಡಗಳನ್ನು ಈ ರಾಯಲ್‌ ಚಾಲೆಂಜರ್ಸ್‌ ಸ್ಪೋರ್ಟ್ಸ್‌ ಪ್ರೈ.ಲಿ. ನಿರ್ವಹಿಸುತ್ತಿದೆ.

ಇದನ್ನೂ ಓದಿ RCB Sale: ಆರ್‌ಸಿಬಿ ಖರೀದಿ ಅಖಾಡಕ್ಕೆ ಅದಾನಿ ಎಂಟ್ರಿ

ಮೂಲಗಳ ಪ್ರಕಾರ ಆರ್‌ಸಿಬಿಯನ್ನು ಬರೋಬ್ಬರಿ 2 ಬಿಲಿಯನ್‌ ಡಾಲರ್‌(ಅಂದಾಜು 17700 ಕೋಟಿ ರು.ಗೆ) ಗೆ ಮಾರಾಟ ಮಾಡಲು ಡಿಯಾಜಿಯೋ ಮುಂದಾಗಿದೆ. ಫೋರ್ಬ್ಸ್ ವರದಿ ಪ್ರಕಾರ, ಪೂನಾವಾಲಾ ಮತ್ತು ಕುಟುಂಬದ ನಿವ್ವಳ ಮೌಲ್ಯ 1.7 ಲಕ್ಷ ಕೋಟಿ ಇದೆ. ಇನ್ನು ರಂಜನ್‌ ಪೈ 24000 ಕೋಟಿ, 22000 ಕೋಟಿ ನಿವ್ವಳ ಮೌಲ್ಯ ಹೊಂದಿದ್ದಾರೆ.

ಕಡಿಮೆಯಾದ ಕ್ರೇಜ್‌

ಇಷ್ಟು ವರ್ಷ ಆರ್‌ಸಿಬಿ ಕಪ್‌ ಗೆದ್ದಿಲ್ಲ ಎನ್ನುವ ಕಾರಣಕ್ಕೆ ಆ ಪಾಟಿ ಕ್ರೇಜ್‌ ಇತ್ತು. ಈಗ ಕಪ್‌ ಗೆದ್ದಾಯಿತು. ವಿರಾಟ್‌ ಕೊಹ್ಲಿ ಸಹ ನಿವೃತ್ತಿ ಅಂಚಿನಲ್ಲಿದ್ದಾರೆ. ಹೀಗಾಗಿ ಕ್ರೇಜ್‌ ಕಡಿಮೆಯಾಗಲಿದೆ ಎನ್ನುವುದು ಕೆಲವರ ವಾದ. ಇನ್ನು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆದ ಕಾಲ್ತುಳಿತ ಪ್ರಕರಣದಿಂದಾಗಿ ತಂಡಕ್ಕೆ ಬೆಂಗಳೂರಿನಲ್ಲಿ ಕ್ರೀಡಾಂಗಣ ಸಿಗುವ ಬಗ್ಗೆಯೂ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಈ ಎಲ್ಲಾ ಅಂಶಗಳೂ ತಂಡ ಖರೀದಿ ವೇಳೆ ಪರಿಗಣನೆಗೆ ಬರಬಹುದು. ಆದ್ದರಿಂ ನಿರೀಕ್ಷೆಯ ಮೊತ್ತ ಸಿಗುವುದು ಅನುಮಾನ.