ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ರಾಹುಲ್‌ ದ್ರಾವಿಡ್‌ ವಿಶ್ವ ದಾಖಲೆ ಸರಿಗಟ್ಟಿದ ಜೋ ರೂಟ್‌

ಬಿರುಸಿನ ಬ್ಯಾಟಿಂಗ್‌ ಮೂಲಕ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಪಂತ್‌ ಈ ಸಾಧನೆಗೈದ ವಿಶ್ವದ ಕೇವಲ 2ನೇ ವಿಕೆಟ್‌ ಕೀಪರ್‌ ಎನ್ನುವ ಹಿರಿಮೆ ಗಳಿಸಿದ್ದಾರೆ. ಪಂತ್‌ಗೂ ಮುನ್ನ ಜಿಂಬಾಬ್ವೆಯ ಆ್ಯಂಡಿ ಫ್ಲವರ್‌ 2001ರಲ್ಲಿ ದ.ಆಫ್ರಿಕಾ ವಿರುದ್ಧ ಕ್ರಮವಾಗಿ 142 ಹಾಗೂ ಔಟಾಗದೆ 199 ರನ್‌ ಗಳಿಸಿದ್ದರು.

ದ್ರಾವಿಡ್‌ ವಿಶ್ವ ದಾಖಲೆ ಸರಿಗಟ್ಟಿದ ಜೋ ರೂಟ್‌

Profile Abhilash BC Jun 24, 2025 10:42 AM

ಲೀಡ್ಸ್‌: ಭಾರತ(IND vs ENG) ವಿರುದ್ಧದ ಮೊದಲ ಟೆಸ್ಟ್‌ನ ಮೂರನೇ ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್‌ ತಂಡದ ಅನುಭವಿ ಆಟಗಾರ ಜೋ ರೂಟ್‌(Joe Root) ಅವರು ಕ್ಯಾಚ್‌ ಒಂದನ್ನು ಹಿಡಿಯುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ ಹಿಡಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಮೊದಲ ಸ್ಥಾನಕ್ಕೇರಿದ್ದಾರೆ. ಈ ಮೂಲಕ 210 ಕ್ಯಾಚ್‌ಗಳೊಂದಿಗೆ ರಾಹುಲ್‌ ದ್ರಾವಿಡ್‌(Rahul Dravid) ಹೆಸರಿನಲ್ಲಿರುವ ವಿಶ್ವ ದಾಖಲೆಯನ್ನು ರೂಟ್‌ ಸರಿಗಟ್ಟಿದ್ದಾರೆ. ಶಾರ್ದೂಲ್‌ ಠಾಕೂರ್‌ ಅವರ ಕ್ಯಾಚ್‌ ಹಿಡಿಯುವ ಮೂಲಕ ರೂಟ್‌ ಈ ವಿಶೇಷ ಮೈಲಿಗಲ್ಲು ತಲುಪಿದರು. ರೂಟ್‌ ದ್ವಿತೀಯ ಪಂದ್ಯದಲ್ಲಿ ಇನ್ನೊಂದು ಕ್ಯಾಚ್‌ ಹಿಡಿದರೆ ದ್ರಾವಿಡ್‌ ದಾಖಲೆ ಪತನಗೊಳ್ಳಲಿದೆ.

ಇತ್ತಂಡಗಳ ನಡುವಣ ಮೊದಲ ಟೆಸ್ಟ್‌ ಪಂದ್ಯ ಅಂತಿಮ ಹಂತಕ್ಕೆ ಬಂದು ನಿಂತಿದೆ. ಮಂಗಳವಾರ ಅಂತಿಮ ದಿನವಾಗಿದ್ದು, ಇಂಗ್ಲೆಂಡ್‌ ಗೆಲುವಿಗೆ 350 ರನ್‌ ಅಗತ್ಯವಿದ್ದರೆ, ಭಾರತಕ್ಕೆ 10 ವಿಕೆಟ್‌ ಬೇಕಿದೆ. ಹೀಗಾಗಿ ಕ್ಲೈಮ್ಯಾಕ್ಸ್‌ ಭಾರೀ ಕುತೂಹಲ ಮೂಡಿಸಿದೆ. ಭಾರತದ 371 ರನ್‌ ಗುರಿ ಬೆನ್ನಟ್ಟುತ್ತಿರುವ ಇಂಗ್ಲೆಂಡ್‌ 4ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 21 ರನ್‌ ಗಳಿಸಿದೆ.

ನಾಲ್ಕನೇ ದಿನದಾಟದಲ್ಲಿ ಕೆ.ಎಲ್‌.ರಾಹುಲ್‌ ಹಾಗೂ ರಿಷಭ್‌ ಪಂತ್‌ರ ಶತಕಗಳು ಭಾರತಕ್ಕೆ ನೆರವಾದರು. ಈ ಜೋಡಿ 4ನೇ ವಿಕೆಟ್‌ಗೆ 195 ರನ್‌ ಸೇರಿಸಿತು. ಪಂತ್‌ 118 ರನ್‌ ಗಳಿಸಿ ಔಟಾದರೆ, ರಾಹುಲ್‌ 137 ರನ್‌ ಕಲೆಹಾಕಿದರು. ಇವರಿಬ್ಬರ ವಿಕೆಟ್‌ ಪತನಗೊಂಡ ಬಳಿಕ ಭಾರತ ದಿಢೀರ್‌ ಕುಸಿತ ಕಂಡಿತು. 333ಕ್ಕೆ 4 ವಿಕೆಟ್‌ನಿಂದ 364 ರನ್‌ಗೆ ಅಂದರೆ 31 ರನ್‌ಗೆ ಕೊನೆ 6 ವಿಕೆಟ್‌ ಕಳೆದುಕೊಂಡಿತು. ಕರುಣ್‌ ನಾಯರ್‌ 20, ಜಡೇಜಾ ಅಜೇಯ 25 ರನ್‌ ಗಳಿಸಿದರು.

ಇದನ್ನೂ ಓದಿ ENG vs IND: ಟೆಸ್ಟ್‌ನಲ್ಲಿ ಮೊದಲ ಬಾರಿಗೆ ಪಂದ್ಯದಲ್ಲಿ 5 ಶತಕ ದಾಖಲಿಸಿದ ಭಾರತ

ದಾಖಲೆ ಬರೆದ ಪಂತ್‌

ಬಿರುಸಿನ ಬ್ಯಾಟಿಂಗ್‌ ಮೂಲಕ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಪಂತ್‌ ಈ ಸಾಧನೆಗೈದ ವಿಶ್ವದ ಕೇವಲ 2ನೇ ವಿಕೆಟ್‌ ಕೀಪರ್‌ ಎನ್ನುವ ಹಿರಿಮೆ ಗಳಿಸಿದ್ದಾರೆ. ಪಂತ್‌ಗೂ ಮುನ್ನ ಜಿಂಬಾಬ್ವೆಯ ಆ್ಯಂಡಿ ಫ್ಲವರ್‌ 2001ರಲ್ಲಿ ದ.ಆಫ್ರಿಕಾ ವಿರುದ್ಧ ಕ್ರಮವಾಗಿ 142 ಹಾಗೂ ಔಟಾಗದೆ 199 ರನ್‌ ಗಳಿಸಿದ್ದರು. ಇದು ಮಾತ್ರವದಲ್ಲದೆ ಇಂಗ್ಲೆಂಡ್‌ನಲ್ಲಿ ಒಂದೇ ಟೆಸ್ಟ್‌ನಲ್ಲಿ 2 ಶತಕ ಬಾರಿಸಿದ ಮೊದಲ ಭಾರತೀಯ ಎನ್ನುವ ದಾಖಲೆಯನ್ನೂ ಬರೆದಿದ್ದಾರೆ.