ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂದಿನ ಭಾರತ-ಪಾಕ್‌ ಮಹಿಳಾ ಟಿ20 ವಿಶ್ವಕಪ್‌ಗೆ ಭಾರೀ ಮಳೆ ಭೀತಿ

IND-W vs PAK-W weather report: ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಟಿ20 ಸರಣಿ ಸೋಲಿನ ನಂತರ ಭಾರತ ತಂಡ ಈ ಪಂದ್ಯಕ್ಕೆ ಪದಾರ್ಪಣೆ ಮಾಡುತ್ತಿದೆ. ಅಭ್ಯಾಸ ಪಂದ್ಯದಲ್ಲಿಯೂ ಭಾರತ ಸೋಲು ಕಂಡಿತ್ತು. ಆದರೆ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಗೆಲುವು ಸಾಧಿಸುವ ಭರವಸೆಯಲ್ಲಿದೆ.

ಇಂದಿನ ಭಾರತ-ಪಾಕ್‌ ಮಹಿಳಾ ಟಿ20 ವಿಶ್ವಕಪ್‌ಗೆ ಭಾರೀ ಮಳೆ ಭೀತಿ

IND-W vs PAK-W weather report -

Abhilash BC
Abhilash BC Jun 14, 2026 11:53 AM

ಬರ್ಮಿಂಗ್‌ಹ್ಯಾಮ್, ಜೂ.14: ಐಸಿಸಿ ಮಹಿಳಾ ಟಿ20 ವಿಶ್ವಕಪ್‌(Womens T20 World Cup 2026)ನಲ್ಲಿ ಭಾರತ ಮತ್ತು ಬದ್ಧವೈರಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಕ್ಷಣಗಣನೆ ಶರುವಾಗಿದೆ. ಕಳೆದ ವರ್ಷ ಏಕದಿನ ವಿಶ್ವಕಪ್‌ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದ್ದ ಹರ್ಮನ್‌ಪ್ರೀತ್‌ ಕೌರ್‌ ಪಡೆ ಈಗ ಟಿ20 ವಿಶ್ವಕಪ್‌ ಮೇಲೆ ಕಣ್ಣಿಟ್ಟಿದೆ.

ಈ ಪಂದ್ಯಕ್ಕೆ ಮಳೆ ಭೀತಿಯೂ ಎದುರಾಗಿದೆ. ಅಕ್ಯೂವೆದರ್ ಪ್ರಕಾರ, ಪಂದ್ಯ ನಡೆಯುವ ಸಮಯದಲ್ಲಿ ಮೋಡ ಕವಿದ ವಾತಾವರಣವಿದ್ದು ಶೇ.30ರಷ್ಟು ಮಳೆ ಸಾಧ್ಯತೆಯಿದೆ. ಒಂದೊಮ್ಮೆ ಪಂದ್ಯ ಮಳೆಯಿಂದ ರದ್ದಾದರೆ ಮೀಸಲು ದಿನ ಇರದ ಕಾರಣ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.

ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಟಿ20 ಸರಣಿ ಸೋಲಿನ ನಂತರ ಭಾರತ ತಂಡ ಈ ಪಂದ್ಯಕ್ಕೆ ಪದಾರ್ಪಣೆ ಮಾಡುತ್ತಿದೆ. ಅಭ್ಯಾಸ ಪಂದ್ಯದಲ್ಲಿಯೂ ಭಾರತ ಸೋಲು ಕಂಡಿತ್ತು. ಆದರೆ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಗೆಲುವು ಸಾಧಿಸುವ ಭರವಸೆಯಲ್ಲಿದೆ.

ಮತ್ತೊಂದೆಡೆ, ಪಾಕಿಸ್ತಾನ ಮಹಿಳಾ ತಂಡವು ವಿಶ್ವಕಪ್‌ಗೂ ಮುನ್ನ ತಮ್ಮ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಸೋತಿದ್ದು, ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತ ತಂಡವನ್ನು ಎದುರಿಸುವಾಗ ಉತ್ತಮ ಪ್ರದರ್ಶನ ನೀಡುವ ಗುರಿಯನ್ನು ಹೊಂದಿದೆ. ಪಂದ್ಯದ ಗಂಭೀರತೆಯನ್ನು ಪರಿಗಣಿಸಿ ಎರಡೂ ತಂಡಗಳು ಭಾರಿ ಒತ್ತಡದಲ್ಲಿದೆ.

ಇಂಡೋ-ಪಾಕ್ ಮಹಿಳಾ​ ಟಿ20 ಕದನ; ವಿಜಯ ಪತಾಕೆ ಹಾರಿಸಲಿ ಹರ್ಮನ್‌ ಪಡೆ

ಟಿ20ಯಲ್ಲಿ ಪಾಕ್‌ ವಿರುದ್ಧ ಭಾರತ 13-3 ಗೆಲುವಿನ ದಾಖಲೆ ಹೊಂದಿದ್ದು, ಇದೇ ವಿಶ್ವಾಸದಲ್ಲಿ ಭಾನುವಾರದ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ತಂಡದಲ್ಲಿ ಸ್ಮೃತಿ ಮಂಧನಾ, ಶಫಾಲಿ, ಜೆಮಿಮಾ, ರಿಚಾ, ದೀಪ್ತಿ, ಕನ್ನಡತಿ ಶ್ರೇಯಾಂಕ ಸೇರಿದಂತೆ ಪ್ರಮುಖರಿದ್ದಾರೆ.



ಸಂಭಾವ್ಯ ಆಡುವ ಬಳಗ

ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್, ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಕ್ರಾಂತಿ ಗೌಡ್, ನಂದನಿ ಶರ್ಮಾ, ರಾಧಾ ಯಾದವ್.

ಪಾಕಿಸ್ತಾನ: ಮುನೀಬಾ ಅಲಿ, ಗುಲ್ ಫಿರೋಜಾ, ಆಯೇಶಾ ಜಾಫರ್, ಅಲಿಯಾ ರಿಯಾಜ್, ಫಾತಿಮಾ ಸನಾ (ನಾಯಕ), ಸೈರಾ ಜಬೀನ್, ನತಾಲಿಯಾ ಪರ್ವೈಜ್, ತುಬಾ ಹಸನ್, ಸಾದಿಯಾ ಇಕ್ಬಾಲ್, ಡಯಾನಾ ಬೇಗ್, ನಶ್ರಾ ಸಂಧು.

ಪಂದ್ಯ ಆರಂಭ: ಸಂಜೆ 7 ಗಂಟೆಗೆ

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌.