ಭಾರತ vs ಇಂಗ್ಲೆಂಡ್ T20I ಸರಣಿಯ ಪೂರ್ಣ ವೇಳಾಪಟ್ಟಿ, ಸಮಯ, ಪ್ರಸಾರದ ವಿವರ ಇಲ್ಲಿದೆ
India vs England T20I series: ಐರ್ಲೆಂಡ್ ವಿರುದ್ಧ 2-0 ಅಂತರದ T20I ಸರಣಿ ಸೋಲಿನ ನಂತರ ಭಾರತ ಸರಣಿಗೆ ಮರಳುತ್ತಿದೆ, ಐಸಿಸಿ ಪುರುಷರ T20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಏಳು ರನ್‌ಗಳ ಸೋಲಿನ ನಂತರ ಇಂಗ್ಲೆಂಡ್ ಮೊದಲ ಬಾರಿಗೆ ಟಿ20 ಸರಣಿಯನ್ನಾಡಲಿದೆ.
India Vs England T20I Series -
ಲಂಡನ್, ಜೂ.30: ವಿಶ್ವದ ನಂ. 1 ಟಿ20ಐ ತಂಡ ಭಾರತ ತಂಡವು ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ(India Vs England T20I Series) ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಎಲ್ಲಾ ಐದು ಪಂದ್ಯಗಳು ಇಂಗ್ಲೆಂಡ್‌ನಲ್ಲಿ ನಡೆಯಲಿದ್ದು, ಸರಣಿಯ ಉದ್ಘಾಟನಾ ಪಂದ್ಯ ಬುಧವಾರ (ಜುಲೈ 1) ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಮೈದಾನದಲ್ಲಿ ನಡೆಯಲಿದೆ.
ಐರ್ಲೆಂಡ್ ವಿರುದ್ಧ 2-0 ಅಂತರದ T20I ಸರಣಿ ಸೋಲಿನ ನಂತರ ಭಾರತ ಸರಣಿಗೆ ಮರಳುತ್ತಿದೆ, ಐಸಿಸಿ ಪುರುಷರ T20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಏಳು ರನ್‌ಗಳ ಸೋಲಿನ ನಂತರ ಇಂಗ್ಲೆಂಡ್ ಮೊದಲ ಬಾರಿಗೆ ಟಿ20 ಸರಣಿಯನ್ನಾಡಲಿದೆ. ಇಂಗ್ಲೆಂಡ್ ತಂಡವು ತನ್ನ ತವರಿನ ಅಭಿಮಾನಿಗಳ ಮುಂದೆ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾತರದಿಂದ ಕಾಯುತ್ತಿದ್ದರೆ, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ತಂಡವು ತನ್ನ ಮೊದಲ ಟಿ20ಐ ಸರಣಿ ಗೆಲುವನ್ನು ದಾಖಲಿಸುವ ಗುರಿಯನ್ನು ಹೊಂದಿದೆ.
ಭಾರತ-ಇಂಗ್ಲೆಂಡ್ ಟಿ20ಐ ಸರಣಿಯ ಸ್ಥಳಗಳು
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎಲ್ಲಾ ಐದು ಟಿ20 ಪಂದ್ಯಗಳು ವಿಭಿನ್ನ ಸ್ಥಳಗಳಲ್ಲಿ ನಡೆಯಲಿವೆ. ಸರಣಿಯ ಆರಂಭಿಕ ಪಂದ್ಯ ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಮೈದಾನದಲ್ಲಿ ನಡೆಯಲಿದ್ದು, ಎರಡನೇ ಟಿ20ಐ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿದೆ. ಉಳಿದ ಮೂರು ಪಂದ್ಯಗಳು ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್, ಬ್ರಿಸ್ಟಲ್‌ನ ಕೌಂಟಿ ಮೈದಾನ ಮತ್ತು ಸೌತಾಂಪ್ಟನ್‌ನ ರೋಸ್ ಬೌಲ್‌ನಲ್ಲಿ ನಡೆಯಲಿವೆ.
ಇಂಗ್ಲೆಂಡ್ ಮೊದಲ ಟಿ20ಗೆ ಸಂಜುಗೆ ಕೊಕ್, ಸೂರ್ಯವಂಶಿ ಪದಾರ್ಪಣೆ?
ಭಾರತ-ಇಂಗ್ಲೆಂಡ್ ಟಿ20 ಪಂದ್ಯಗಳ ಸಮಯ
ಮೊದಲ, ಮೂರನೇ ಮತ್ತು ನಾಲ್ಕನೇ ಟಿ20 ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 10 ಗಂಟೆಗೆ ಆರಂಭವಾಗಲಿದ್ದು, ಎರಡನೇ ಮತ್ತು ಐದನೇ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7:00 ಗಂಟೆಗೆ ಆರಂಭವಾಗಲಿವೆ.
ಭಾರತ vs ಇಂಗ್ಲೆಂಡ್ ಟಿ20ಐ ಸರಣಿಯ ಪೂರ್ಣ ವೇಳಾಪಟ್ಟಿ
ಜುಲೈ 1 ಬುಧವಾರ-1ನೇ ಟಿ20ಐ; ರಿವರ್‌ಸೈಡ್ ಮೈದಾನ, ಚೆಸ್ಟರ್-ಲೆ-ಸ್ಟ್ರೀಟ್ ರಾತ್ರಿ 10:00
ಜುಲೈ 4 ಶನಿವಾರ- 2ನೇ ಟಿ20ಐ; ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್ ಸಂಜೆ 07:00
ಜುಲೈ 7 ಮಂಗಳವಾರ- 3ನೇ ಟಿ20ಐ; ಟ್ರೆಂಟ್ ಬ್ರಿಡ್ಜ್, ನಾಟಿಂಗ್‌ಹ್ಯಾಮ್ ರಾತ್ರಿ 10:00
ಜುಲೈ 9 ಗುರುವಾರ- 4ನೇ ಟಿ20ಐ; ಕೌಂಟಿ ಮೈದಾನ, ಬ್ರಿಸ್ಟಲ್ ರಾತ್ರಿ 10:00
ಜುಲೈ 11 ಶನಿವಾರ- 5ನೇ ಟಿ20ಐ; ದಿ ರೋಸ್ ಬೌಲ್, ಸೌತಾಂಪ್ಟನ್ ಸಂಜೆ 07:00
ಆಂಗ್ಲರ ನಾಡಿನಲ್ಲಿ ಟೆಸ್ಟ್ ಸರಣಿ ಗೆದ್ದ ನ್ಯೂಜಿಲೆಂಡ್, ಸೋಲಿನೊಂದಿಗೆ ಬೆನ್ ಸ್ಟೋಕ್ಸ್ ವಿದಾಯ!
ಉಭಯ ತಂಡಗಳು
ಭಾರತ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ಸೂರ್ಯಾಂಶ್ ಶೆಡ್ಗೆ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ವಿ.ಕೀ.), ಅಕ್ಸರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್ (ವಿ.ಕೀ.), ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ.
ಇಂಗ್ಲೆಂಡ್: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಸೋನಿ ಬೇಕರ್, ಟಾಮ್ ಬ್ಯಾಂಟನ್ (ವಿ.ಕೀ.), ಜಾಕೋಬ್ ಬೆಥೆಲ್, ಜೋಸ್ ಬಟ್ಲರ್ (ವಿ.ಕೀ.), ಜೇಮ್ಸ್ ಕೋಲ್ಸ್, ಜೋರ್ಡಾನ್ ಕಾಕ್ಸ್ (ವಿ.ಕೀ.), ಸ್ಯಾಮ್ ಕರನ್, ಲಿಯಾಮ್ ಡಾಸನ್, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಆದಿಲ್ ರಶೀದ್, ಫಿಲ್ ಸಾಲ್ಟ್ (ವಿ.ಕೀ.), ಜೋಶ್ ಟಂಗ್, ಲ್ಯೂಕ್ ವುಡ್.