India vs South Africa Live Score: ಮಹಿಳಾ ವಿಶ್ವಕಪ್ ಫೈನಲ್‌ಗೆ ಮಳೆ ಅಡ್ಡಿ; ಟಾಸ್ ವಿಳಂಬ
Women's World Cup Final: ಮಳೆಯಿಂದ ಪಂದ್ಯ ಅರ್ಧಕ್ಕೆ ನಿಂತರೆ ಮೀಸಲು ದಿನವಾದ ಸೋಮವಾರ(ನ.3) ಪಂದ್ಯ ನಿಂತದಲ್ಲಿಂದ ಆರಂಭಗೊಳ್ಳಲಿದೆ. ಎರಡೂ ದಿನ ಹೆಚ್ಚುವರಿ ಸಮಯ ಕೂಡ ನೀಡಲಾಗಿದೆ. ಫಲಿತಾಂಶ ನಿರ್ಧಾರಕ್ಕೆ ಉಭಯ ತಂಡಗಳು ಕನಿಷ್ಠ 20 ಓವರ್ ಆಡಬೇಕು. ಮೀಸಲೂ ದಿನವೂ ಮಳೆ ಅಡ್ಡಿಪಡಿಸಿದರೆ, ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.
-
Abhilash BC
Nov 2, 2025 2:30 PM
ನವಿ ಮುಂಬೈ: ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಭಾರತ ಮತ್ತು ದಕ್ಷಿಣ ಆಫ್ರಿಕಾ(India vs South Africa Live Score) ನಡುವಣ ಮಹಿಳಾ ವಿಶ್ವಕಪ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಸದ್ಯ ನವಿ ಮುಂಬೈನಲ್ಲಿ ಜೋರು ಮಳೆ ಸುರಿಯುತ್ತಿದ್ದು ಟಾಸ್ ವಿಳಂಬವಾಗಲಿದೆ. ಮೈದಾನಕ್ಕೆ(Mumbai Weather Update) ಕವರ್‌ಗಳನ್ನು ಹಾಕಲಾಗಿದೆ. ಸದ್ಯ ಮಳೆ ನಿಲ್ಲುವ ಸೂಚನೆ ಕಾಣುವಂತಿಲ್ಲ. ಫೈನಲ್ ಪಂದ್ಯದ ಮಳೆ ನಿಯಮ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಇಂದು ಮಳೆಯಿಂದ ಪಂದ್ಯ ಅರ್ಧಕ್ಕೆ ನಿಂತರೆ ಮೀಸಲು ದಿನವಾದ ಸೋಮವಾರ(ನ.3) ಪಂದ್ಯ ನಿಂತಲ್ಲಿಂದ ಆರಂಭಗೊಳ್ಳಲಿದೆ. ಎರಡೂ ದಿನ ಹೆಚ್ಚುವರಿ ಸಮಯ ಕೂಡ ನೀಡಲಾಗಿದೆ. ಫಲಿತಾಂಶ ನಿರ್ಧಾರಕ್ಕೆ ಉಭಯ ತಂಡಗಳು ಕನಿಷ್ಠ 20 ಓವರ್ ಆಡಬೇಕು. ಮೀಸಲೂ ದಿನವೂ ಮಳೆ ಅಡ್ಡಿಪಡಿಸಿದರೆ, ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.
ಉಭಯ ತಂಡಗಳ ಫೈನಲ್ ಹಾದಿ
ಭಾರತ
ಶ್ರೀಲಂಕಾ ಎದುರು 59 ರನ್ ಗೆಲುವು
ಪಾಕಿಸ್ತಾನ ವಿರುದ್ಧ 88 ರನ್ ಜಯ
ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್ ಸೋಲು
ಆಸ್ಟ್ರೇಲಿಯಾ ವಿರುದ್ಧ 3 ವಿಕೆಟ್ ಸೋಲು
ಇಂಗ್ಲೆಂಡ್ ಎದುರು 4 ರನ್ ಸೋಲು
ನ್ಯೂಜಿಲೆಂಡ್ ವಿರುದ್ಧ 53 ರನ್ ಗೆಲುವು
ಬಾಂಗ್ಲಾದೇಶ ಎದುರಿನ ಪಂದ್ಯ ರದ್ದು
ಸೆಮಿಫೈನಲ್
ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಜಯ
ಇದನ್ನೂ ಓದಿ Women's World Cup final: ಚಾರಿತ್ರಿಕ ವಿಶ್ವಕಪ್ ಟ್ರೋಫಿಗೆ ಭಾರತ-ದಕ್ಷಿಣ ಆಫ್ರಿಕಾ ಆಟಗಾರ್ತಿಯರ ಸೆಣಸು
ದಕ್ಷಿಣ ಆಫ್ರಿಕಾ
ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಸೋಲು
ನ್ಯೂಜಿಲೆಂಡ್ ಎದುರು 6 ವಿಕೆಟ್ ಜಯ
ಭಾರತ ವಿರುದ್ಧ 3 ವಿಕೆಟ್ ಜಯ
ಬಾಂಗ್ಲಾದೇಶ ಎದುರು 3 ವಿಕೆಟ್ ಗೆಲುವು
ಶ್ರೀಲಂಕಾ ವಿರುದ್ಧ 10 ವಿಕೆಟ್ ಜಯ
ಪಾಕಿಸ್ತಾನ ಎದುರು 150 ರನ್ ಗೆಲುವು
ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್ ಸೋಲು
ಸೆಮಿಫೈನಲ್
ಇಂಗ್ಲೆಂಡ್ ಎದುರು 125 ರನ್ ಜಯ