ಭಾರತ vs ವೆಸ್ಟ್ ಇಂಡೀಸ್ ಏಕದಿನ ಪಂದ್ಯಗಳ ದಾಖಲೆಗಳು
India vs West Indies ODI Records: ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣವು ಭಾನುವಾರ (ಸೆಪ್ಟೆಂಬರ್ 27) ಸರಣಿಯ ಮೊದಲ ಪಂದ್ಯವನ್ನು ಆಯೋಜಿಸಲಿದ್ದು, ಮುಂದಿನ ಎರಡು ಪಂದ್ಯಗಳು ಸೆಪ್ಟೆಂಬರ್ 30 ರಂದು ಗುವಾಹಟಿಯಲ್ಲಿ ಮತ್ತು ಅಕ್ಟೋಬರ್ 3 ರಂದು ನ್ಯೂ ಚಂಡೀಗಢದಲ್ಲಿ ನಡೆಯಲಿವೆ.
India Vs West Indies ODI Records -
ತಿರುವನಂತಪುರಂ, ಸೆ.25: ಶುಭಮನ್ ಗಿಲ್ ನೇತೃತ್ವದ ಭಾರತ ತಂಡವು ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 3 ರವರೆಗೆ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶಾಯ್ ಹೋಪ್ ನೇತೃತ್ವದ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ತಲಾ ಎರಡು ಬಾರಿ ಏಕದಿನ ವಿಶ್ವಕಪ್ ಗೆದ್ದಿರುವ ಈ ಎರಡೂ ತಂಡಗಳ ನಡುವಿನ ಮೂರು 50-ಓವರ್‌ಗಳ ಪಂದ್ಯಗಳು ಭಾರತದ ಮೂರು ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿವೆ.
ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣವು ಭಾನುವಾರ (ಸೆಪ್ಟೆಂಬರ್ 27) ಸರಣಿಯ ಮೊದಲ ಪಂದ್ಯವನ್ನು ಆಯೋಜಿಸಲಿದ್ದು, ಮುಂದಿನ ಎರಡು ಪಂದ್ಯಗಳು ಸೆಪ್ಟೆಂಬರ್ 30 ರಂದು ಗುವಾಹಟಿಯಲ್ಲಿ ಮತ್ತು ಅಕ್ಟೋಬರ್ 3 ರಂದು ನ್ಯೂ ಚಂಡೀಗಢದಲ್ಲಿ ನಡೆಯಲಿವೆ. 24 ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡ ಭಾರತದಲ್ಲಿ ಏಕದಿನ ಸರಣಿ ಗೆದ್ದಿಲ್ಲ. ಈ ಬಾರಿಯಾದರೂ ಸರಣಿ ಗೆಲ್ಲುತ್ತಾ ಎಂದು ಕಾದು ನೋಡಬೇಕಿದೆ. ಇದಕ್ಕೂ ಮುನ್ನ ಉಭಯ ತಂಡಗಳ ನಡುವಣ ಏಕದಿನ ದಾಖಲೆಗಳ ಹಿನ್ನೋಟ ಇಲ್ಲಿದೆ.
ಅತಿ ಹೆಚ್ಚು ಗೆಲುವುಗಳು: ಭಾರತ (142 ಏಕದಿನ ಪಂದ್ಯಗಳಲ್ಲಿ 72 ಗೆಲುವುಗಳು).
ಅತಿ ಹೆಚ್ಚು ಮೊತ್ತ: ಡಿಸೆಂಬರ್ 8, 2011 ರಂದು ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ಭಾರತವು 50 ಓವರ್‌ಗಳಲ್ಲಿ ಗಳಿಸಿದ 418/5.
ಅತಿ ಕಡಿಮೆ ಮೊತ್ತ: ನವೆಂಬರ್ 16, 1993 ರಂದು ಅಹಮದಾಬಾದ್‌ನಲ್ಲಿ ಭಾರತವು 28.3 ಓವರ್‌ಗಳಲ್ಲಿ 100ಕ್ಕೆ ಆಲೌಟ್.
ಅತಿ ದೊಡ್ಡ ಗೆಲುವು (ರನ್‌ಗಳ ಅಂತರದಲ್ಲಿ): ಅಕ್ಟೋಬರ್ 29, 2018 ರಂದು ಮುಂಬೈನ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ಭಾರತವು ವೆಸ್ಟ್ ಇಂಡೀಸ್ ವಿರುದ್ಧ 224 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸಿತು (ಗುರಿ: 378).
24 ವರ್ಷಗಳ ಬಳಿಕ ಭಾರತದಲ್ಲಿ ಏಕದಿನ ಸರಣಿ ಗೆಲ್ಲಲು ವೆಸ್ಟ್ ಇಂಡೀಸ್ ಕಾತರ
ಅತಿ ದೊಡ್ಡ ಗೆಲುವು (ವಿಕೆಟ್‌ಗಳ ಅಂತರದಲ್ಲಿ): ಮೇ 3, 1997 ರಂದು ಬ್ರಿಡ್ಜ್‌ಟೌನ್‌ನಲ್ಲಿ ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧ 10 ವಿಕೆಟ್‌ಗಳ ಅಂತರದ ಭರ್ಜರಿ ಜಯ ಸಾಧಿಸಿತು (ಗುರಿ: 200).
ಅತ್ಯಲ್ಪ ಅಂತರದ ಗೆಲುವು (ರನ್‌ಗಳ ಆಧಾರದಲ್ಲಿ): ಮೇ 20, 2006 ರಂದು ಕಿಂಗ್‌ಸ್ಟನ್‌ನಲ್ಲಿ ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧ 1 ರನ್ ಅಂತರದ ಜಯ ಸಾಧಿಸಿತು (ಗುರಿ: 199).
ಅತ್ಯಲ್ಪ ಅಂತರದ ಗೆಲುವು (ವಿಕೆಟ್‌ಗಳ ಆಧಾರದಲ್ಲಿ): ನವೆಂಬರ್ 29, 2011 ರಂದು ಕಟಕ್‌ನಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ 1 ವಿಕೆಟ್ ಅಂತರದ ಜಯ ಸಾಧಿಸಿತು (ಗುರಿ: 212).
ಅತಿ ಹೆಚ್ಚು ರನ್‌ಗಳು: ಭಾರತದ ವಿರಾಟ್ ಕೊಹ್ಲಿ 43 ಏಕದಿನ ಪಂದ್ಯಗಳಲ್ಲಿ 2261 ರನ್‌ಗಳು.
ಗರಿಷ್ಠ ಸ್ಕೋರ್: ಡಿಸೆಂಬರ್ 8, 2011 ರಂದು ಇಂದೋರ್‌ನಲ್ಲಿ ಭಾರತದ ವೀರೇಂದ್ರ ಸೆಹ್ವಾಗ್ ಅವರಿಂದ 149 ಎಸೆತಗಳಲ್ಲಿ 219 ರನ್‌ಗಳು.
ಫಲ ನೀಡಿದ ಅಂತಿಮ ಕ್ಷಣದ ಬದಲಾವಣೆ; ಭಾರತಕ್ಕೆ ಶೂಟಿಂಗ್‌ನಲ್ಲಿ ಮೊದಲ ಚಿನ್ನ ಗೆದ್ದ ಕಮಲ್‌ಜೀತ್-ಸುರುಚಿ ಜೋಡಿ
ಗರಿಷ್ಠ ಸರಾಸರಿ: ಭಾರತದ ವಿರಾಟ್ ಕೊಹ್ಲಿ ಅವರಿಂದ 66.50.
ಗರಿಷ್ಠ ಸ್ಟ್ರೈಕ್ ರೇಟ್ (ಕನಿಷ್ಠ 250 ಎಸೆತಗಳು): ವೆಸ್ಟ್ ಇಂಡೀಸ್‌ನ ಶಿಮ್ರಾನ್ ಹೆಟ್ಮೆಯರ್ ಅವರಿಂದ 115.92.
ಅತಿ ಹೆಚ್ಚು ಶತಕಗಳು: ವಿರಾಟ್ ಕೊಹ್ಲಿ 43 ಪಂದ್ಯಗಳಲ್ಲಿ 9 ಶತಕಗಳು.
ಅತಿ ಹೆಚ್ಚು ಅರ್ಧಶತಕಗಳು: ರೋಹಿತ್ ಶರ್ಮಾ 37 ಏಕದಿನ ಪಂದ್ಯಗಳಲ್ಲಿ 12 ಅರ್ಧಶತಕಗಳು.
ಅತಿ ಹೆಚ್ಚು ಬಾರಿ ಶೂನ್ಯಕ್ಕೆ (ಡಕ್) ಔಟ್: ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ಭಾರತದ ಸಚಿನ್ ತೆಂಡೂಲ್ಕರ್ ತಲಾ 5 ಬಾರಿ.
ಅತಿ ಹೆಚ್ಚು ಸಿಕ್ಸರ್‌ಗಳು: ರೋಹಿತ್ ಶರ್ಮಾ ಅವರಿಂದ 37 ಏಕದಿನ ಪಂದ್ಯಗಳಲ್ಲಿ 35 ಸಿಕ್ಸರ್‌ಗಳು.
ಒಂದು ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳು: ನವೆಂಬರ್ 2002ರಲ್ಲಿ ವೆಸ್ಟ್ ಇಂಡೀಸ್ ತಂಡದ ಭಾರತ ಪ್ರವಾಸದ ವೇಳೆ, 7 ಪಂದ್ಯಗಳಲ್ಲಿ ಕ್ರಿಸ್ ಗೇಲ್ 455 ರನ್‌ಗಳು.
ಅತಿ ಹೆಚ್ಚು ವಿಕೆಟ್‌ಗಳು: ರವೀಂದ್ರ ಜಡೇಜಾ ಮತ್ತು ವೆಸ್ಟ್ ಇಂಡೀಸ್‌ನ ಕೋರ್ಟ್ನಿ ವಾಲ್ಷ್ ತಲಾ 44 ವಿಕೆಟ್‌ಗಳು.