ಜಿಂಬಾಬ್ವೆ ವಿರುದ್ಧದ ಟಿ20, ಏಕದಿನ ಸರಣಿಗೆ ಭಾರತ ಮಹಿಳಾ ತಂಡ ಆತಿಥ್ಯ
India womens vs Zimbabwe womens: ಅಕ್ಟೋಬರ್ 16 ರಿಂದ 20 ರವರೆಗೆ ರಾಯ್‌ಪುರದಲ್ಲಿ ಮೂರು ಪಂದ್ಯಗಳ ಟಿ20ಐ ಸರಣಿಯೊಂದಿಗೆ ಪ್ರವಾಸ ಆರಂಭವಾಗಲಿದ್ದು, ಅಕ್ಟೋಬರ್ 23 ರಿಂದ 28 ರವರೆಗೆ ಮೂರು ಏಕದಿನ ಪಂದ್ಯಗಳಿಗಾಗಿ ಬರೋಡಾಗೆ ತೆರಳಲಿದೆ.
India women’s team -
ನವದೆಹಲಿ, ಮೇ 7: ಭಾರತ ಮಹಿಳಾ ತಂಡವು(India womens vs Zimbabwe womens) 2026 ರ ಅಕ್ಟೋಬರ್‌ನಲ್ಲಿ ರಾಯ್‌ಪುರ ಮತ್ತು ಬರೋಡಾದಲ್ಲಿ ನಡೆಯಲಿರುವ ತಲಾ ಮೂರು ಏಕದಿನ ಮತ್ತು ಟ20 ಪಂದ್ಯಗಳಿಗೆ ಜಿಂಬಾಬ್ವೆಯನ್ನು ಆತಿಥ್ಯ ವಹಿಸಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ.
ಅಕ್ಟೋಬರ್ 16 ರಿಂದ 20 ರವರೆಗೆ ರಾಯ್‌ಪುರದಲ್ಲಿ ಮೂರು ಪಂದ್ಯಗಳ ಟಿ20ಐ ಸರಣಿಯೊಂದಿಗೆ ಪ್ರವಾಸ ಆರಂಭವಾಗಲಿದ್ದು, ಅಕ್ಟೋಬರ್ 23 ರಿಂದ 28 ರವರೆಗೆ ಮೂರು ಏಕದಿನ ಪಂದ್ಯಗಳಿಗಾಗಿ ಬರೋಡಾಗೆ ತೆರಳಲಿದೆ. 2025 ರ ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್ ಗೆದ್ದ ನಂತರ ಭಾರತ ತಂಡ ತವರಿನಲ್ಲಿ ಆಡುತ್ತಿರುವ ಮೊದಲ ಏಕದಿನ ಪಂದ್ಯ ಇದಾಗಿದೆ.
ಭಾರತ vs ಜಿಂಬಾಬ್ವೆ ಸರಣಿಯ ಪೂರ್ಣ ವೇಳಾಪಟ್ಟಿ
1ನೇ ಟಿ20ಐ - ಅಕ್ಟೋಬರ್ 16 - ಸಂಜೆ 7 ಗಂಟೆ - ರಾಯ್ಪುರ
2ನೇ ಟಿ20ಐ - ಅಕ್ಟೋಬರ್ 18 - ಸಂಜೆ 7 ಗಂಟೆ - ರಾಯ್ಪುರ
3ನೇ ಟಿ20ಐ - ಅಕ್ಟೋಬರ್ 20 - ಸಂಜೆ 7 ಗಂಟೆ - ರಾಯ್ಪುರ
1ನೇ ಏಕದಿನ ಪಂದ್ಯ - ಅಕ್ಟೋಬರ್ 23 - ಮಧ್ಯಾಹ್ನ 2 ಗಂಟೆ - ಬರೋಡಾ
2ನೇ ಏಕದಿನ ಪಂದ್ಯ - ಅಕ್ಟೋಬರ್ 25 - ಮಧ್ಯಾಹ್ನ 2 ಗಂಟೆ - ಬರೋಡಾ
3ನೇ ಏಕದಿನ ಪಂದ್ಯ - ಅಕ್ಟೋಬರ್ 28 - ಮಧ್ಯಾಹ್ನ 2 ಗಂಟೆ - ಬರೋಡಾ
ಈ ಸರಣಿಗೂ ಮುನ್ನ ಭಾರತ ತಂಡ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಡಲಿದೆ. ತಂಡದಲ್ಲಿ ಕರ್ನಾಟಕದ ಸ್ಪಿನ್–ಆಲ್‌ರೌಂಡರ್ ಶ್ರೇಯಾಂಕಾ ಪಾಟೀಲ ಸ್ಥಾನ ಪಡೆದಿದ್ದಾರೆ. ಕಳೆದ ಶನಿವಾರ 15 ಆಟಗಾರ್ತಿಯರ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿತ್ತು. ಪಂದ್ಯಾವಳಿ ಜೂನ್ 12ರಿಂದ ಟೂರ್ನಿ ಆರಂಭವಾಗಲಿದೆ.
Vinesh Phogat: ಏಷ್ಯನ್ ಕ್ರೀಡಾಕೂಟ; ವಿನೇಶ್‌ಗೆ ಅರ್ಹತೆ ನೀಡದ ಭಾರತೀಯ ಕುಸ್ತಿ ಒಕ್ಕೂಟ
ಭಾರತ ಮಹಿಳಾ ಟಿ20 ವಿಶ್ವಕಪ್ ತಂಡ
ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ಜಿಮಿಮಾ ರಾಡ್ರಿಗಸ್, ಭಾರತಿ ಫೂಲ್‌ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್‌ಕೀಪರ್), ಶ್ರೀಚರಣಿ, ಯಷ್ಟಿಕಾ ಭಾಟಿಯಾ (ವಿಕೆಟ್‌ಕೀಪರ್), ನಂದಿನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಠಾಕೂರ್, ಕ್ರಾಂತಿ ಗೌಡ್, ಶ್ರೇಯಾಂಕಾ ಪಾಟೀಲ, ರಾಧಾ ಯಾದವ್.