ಕೇವಲ ಚಹಾ, ಬಿಸ್ಕತ್ತು ತಿನ್ನುವುದಕ್ಕೆ ಸಚಿವನಾಗಿದ್ದೆ; ಟಿಎಂಸಿ ವಿರುದ್ಧ ಮನೋಜ್ ತಿವಾರಿ ಆರೋಪ
Manoj Tiwary slams TMC: 18 ವರ್ಷದ ಇಂಡಿಯಾ ಜರ್ನಿಯಲ್ಲಿ ತಿವಾರಿ ಆಡಿದ್ದು ಕೇವಲ 12 ಏಕದಿನ ಪಂದ್ಯಗಳನ್ನು ಮಾತ್ರ. ಇದರಲ್ಲಿ ತಲಾ ಒಂದು ಶತಕ ಮತ್ತು ಅರ್ಧಶಕ ಒಳಗೊಂಡಿದೆ. ಬೌಲಿಂಗ್ನಲ್ಲಿಯೂ ಮಿಂಚಿದ್ದ ಅವರು 5 ವಿಕೆಟ್ ಉರುಳಿಸಿದ್ದಾರೆ. ಮೂರು ಟಿ20 ಪಂದ್ಯಗಳನ್ನು ಆಡಿದ್ದಾರೆ. 98 ಐಪಿಎಲ್ ಪಂದ್ಯ ಆಡಿ 1695 ರನ್ ಕಲೆಹಾಕಿದ್ದಾರೆ.
Manoj Tiwary slams TMC -
ಕೋಲ್ಕತಾ, ಮೇ 7: 2026 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ(2026 West Bengal Assembly Elections)ಯಲ್ಲಿ ಪಕ್ಷದ ಸೋಲಿನ ನಂತರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ರಾಜೀನಾಮೆ ನೀಡಿದ ಒಂದು ದಿನದ ನಂತರ, ಮಾಜಿ ಕ್ರಿಕೆಟಿಗ ಮತ್ತು ನಿರ್ಗಮಿತ ಕ್ರೀಡಾ ಮತ್ತು ಯುವ ವ್ಯವಹಾರಗಳ ರಾಜ್ಯ ಸಚಿವ ಮನೋಜ್ ತಿವಾರಿ(Manoj Tiwary) ಅವರು ಪಕ್ಷದ ಶ್ರೇಣಿಯ(Manoj Tiwary slams TMC) ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನನಗೆ ಸಚಿವ ಸ್ಥಾನ ನೀಡಿದ್ದು ಕೇವಲ ಚಹಾ ಮತ್ತು ಬಿಸ್ಕತ್ತು ತಿನ್ನುವುದಕ್ಕೆ ಎಂದು ಆರೋಪಿಸಿದ್ದಾರೆ. ಅದನ್ನು ಹೊರತುಪಡಿಸಿ, ನನಗೆ ಕ್ರೀಡಾ ಇಲಾಖೆಯಲ್ಲಿ ಬೇರೆ ಯಾವುದೇ ಕೆಲಸವಿರಲಿಲ್ಲ ಎಂದಿದ್ದಾರೆ.
ರಾಜ್ಯದ ಕ್ರೀಡಾ ಮೂಲಸೌಕರ್ಯವನ್ನು ಕೂಲಂಕಷವಾಗಿ ಪರಿಶೀಲಿಸುವ ಮಹತ್ವಾಕಾಂಕ್ಷೆಯೊಂದಿಗೆ 2021 ರಲ್ಲಿ ರಾಜಕೀಯಕ್ಕೆ ಸೇರಿದ ತಿವಾರಿ, ತಮ್ಮ ಸಚಿವ ಖಾತೆಯನ್ನು ಕೇವಲ ಲಾಲಿಪಾಪ್ ಎಂದು ಬಣ್ಣಿಸಿದರು. "ಗೆಲುವಿನ ನಂತರ ನನ್ನನ್ನು ರಾಜ್ಯ ಸಚಿವರನ್ನಾಗಿ ಮಾಡಿದಾಗ, ಈ ಇಲಾಖೆಯಲ್ಲಿ ಸಾಕಷ್ಟು ಅಭಿವೃದ್ಧಿ ಮತ್ತು ಸುಧಾರಣೆ ತರಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಿದ್ದೆ ಆದರೆ ಅರೂಪ್ ಬಿಸ್ವಾಸ್ ಅಲ್ಲಿ ಯಾವುದೇ ಒಳ್ಳೆಯ ಕೆಲಸ ನಡೆಯಲು ಬಿಡುತ್ತಿರಲಿಲ್ಲ. ಚಹಾ ಮತ್ತು ಬಿಸ್ಕತ್ತು ತಿನ್ನುವುದನ್ನು ಹೊರತುಪಡಿಸಿ, ನನಗೆ ಕ್ರೀಡಾ ಇಲಾಖೆಯಲ್ಲಿ ಬೇರೆ ಯಾವುದೇ ಕೆಲಸವಿರಲಿಲ್ಲ" ಎಂದು ತಿವಾರಿ ಫೇಸ್‌ಬುಕ್ ವೀಡಿಯೊದಲ್ಲಿ ಹೇಳಿದ್ದಾರೆ.
15 ವರ್ಷಗಳ ಮಮತಾ ಬ್ಯಾನರ್ಜಿ ಸರ್ಕಾರ ಪತನಕ್ಕೆ ಮೆಸ್ಸಿ ಕಾರಣವಂತೆ!
2025 ರ ಕೊನೆಯಲ್ಲಿ ನಡೆದ ವಿವಾದಾತ್ಮಕ ಲಿಯೋನೆಲ್ ಮೆಸ್ಸಿ ಭೇಟಿಯನ್ನು ತಿವಾರಿ ಒಂದು ಮಹತ್ವದ ತಿರುವು ಎಂದು ನಿರ್ದಿಷ್ಟವಾಗಿ ಎತ್ತಿ ತೋರಿಸಿದರು. ಬಂಗಾಳ ಫುಟ್‌ಬಾಲ್‌ಗೆ ಒಂದು ಹೆಗ್ಗುರುತು ಕ್ಷಣವಾಗಬೇಕೆಂದು ಉದ್ದೇಶಿಸಲಾದ ಈ ಕಾರ್ಯಕ್ರಮ ಅರೂಪ್ ಬಿಸ್ವಾಸ್ ಅವರಿಂದ ಕಪ್ಪು ಚುಕ್ಕೆಯಾಯಿತು ಎಂದರು.
18 ವರ್ಷದ ಇಂಡಿಯಾ ಜರ್ನಿಯಲ್ಲಿ ತಿವಾರಿ ಆಡಿದ್ದು ಕೇವಲ 12 ಏಕದಿನ ಪಂದ್ಯಗಳನ್ನು ಮಾತ್ರ. ಇದರಲ್ಲಿ ತಲಾ ಒಂದು ಶತಕ ಮತ್ತು ಅರ್ಧಶಕ ಒಳಗೊಂಡಿದೆ. ಬೌಲಿಂಗ್ನಲ್ಲಿಯೂ ಮಿಂಚಿದ್ದ ಅವರು 5 ವಿಕೆಟ್ ಉರುಳಿಸಿದ್ದಾರೆ. ಮೂರು ಟಿ20 ಪಂದ್ಯಗಳನ್ನು ಆಡಿದ್ದಾರೆ. 98 ಐಪಿಎಲ್ ಪಂದ್ಯ ಆಡಿ 1695 ರನ್ ಕಲೆಹಾಕಿದ್ದಾರೆ.
ಬಂಗಾಳ ರಾಜ್ಯ ವಿಧಾನಸಭೆಯ 294 ಸ್ಥಾನಗಳ ಪೈಕಿ 293 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಭರ್ಜರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಾಂಗ್ಲನ್ನರ ಅಕ್ರಮ ಒಳನುಸುಳುವಿಕೆ, ಹಿಂದೂಗಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ಮಮತಾ ವಿಫಲ ಎಂಬ ಆರೋಪ, ಆಡಳಿತದಲ್ಲಿನ ಭ್ರಷ್ಟಾಚಾರದ ಆರೋಪ, ಅತಿಯಾದ ಓಲೈಕೆ ರಾಜಕಾರಣ, ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಟಿಎಂಸಿ ನಾಯಕರ ಕೀಳು ಹೇಳಿಕೆ, ಅಭಿವೃದ್ಧಿಯಲ್ಲಿ ಕುಂಠಿತ, ಸತತ 15 ವರ್ಷಗಳ ಆಡಳಿತ ವಿರೋಧಿ ಅಲೆಗೆ ಸಿಕ್ಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕಾರ ಕಳೆದುಕೊಂಡಿದ್ದಾರೆ.