IPL 2025: ಗಾಯಾಳು ವಂಶ್ ಬೇಡಿ ಚೆನ್ನೈ ತಂಡ ಸೇರಿದ ಸ್ಫೋಟಕ ಟಿ20 ಬ್ಯಾಟರ್
ವಂಶ್ ಬೇಡಿ ಎಡಗಾಲಿನ ಅಸ್ಥಿರಜ್ಜು ಸಮಸ್ಯೆಗೆ ತುತ್ತಾಗಿದ್ದರು. ಇದೀಗ ಅವರ ಸ್ಥಾನಕ್ಕೆ ಆಯ್ಕೆಯಾಗಿರುವ 26 ವರ್ಷದ ಉರ್ವಿಲ್, ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 28 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಇದುವರೆಗೆ ಉರ್ವಿಲ್ 47 ಟಿ20ಯಲ್ಲಿ 1,162 ರನ್ ಕಲೆಹಾಕಿದ್ದಾರೆ.


ಚೆನ್ನೈ: ಐಪಿಎಲ್ 18ನೇ(IPL 2025) ಆವೃತ್ತಿಯಿಂದ ಈಗಾಗಲೇ ಹೊರಬಿದ್ದಿರುವ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡ ಗುಜರಾತ್‌ನ ಉರ್ವಿಲ್ ಪಟೇಲ್(Urvil Patel) ಅವರನ್ನು ಗಾಯಾಳು ವಿಕೆಟ್ ಕೀಪರ್-ಬ್ಯಾಟರ್ ವಂಶ್ ಬೇಡಿ(Vansh Bedi) ಸ್ಥಾನಕ್ಕೆ ಬದಲಿ ಆಟಗಾರನಾಗಿ ಸೇರಿಸಿಕೊಂಡಿದೆ. ಈ ಮೂಲಕ ಹಾಲಿ ಆವೃತ್ತಿಯಲ್ಲಿ ಚೆನ್ನೈ ಗೆಲುವು ಸಾಧಿಸಿದಕ್ಕಿಂತ ಹೆಚ್ಚಾಗಿ ಬದಲಿ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಂತಾಗಿದೆ.. ಉರ್ವಿಲ್ ಪಟೇಗೂ ಮುನ್ನ ಆಯುಷ್ ಮಹಾತ್ರೆ, ಡಿವಾಲ್ಡ್ ಬ್ರೆವಿಸ್ ಬದಲಿ ಆಟಗಾರರಾಗಿ ಸಿಎಸ್‌ಕೆ ತಂಡ ಕೂಡಿಕೊಂಡಿದ್ದರು
ವಂಶ್ ಬೇಡಿ ಎಡಗಾಲಿನ ಅಸ್ಥಿರಜ್ಜು ಸಮಸ್ಯೆಗೆ ತುತ್ತಾಗಿದ್ದರು. ಇದೀಗ ಅವರ ಸ್ಥಾನಕ್ಕೆ ಆಯ್ಕೆಯಾಗಿರುವ 26 ವರ್ಷದ ಉರ್ವಿಲ್, ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 28 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಇದುವರೆಗೆ ಉರ್ವಿಲ್ 47 ಟಿ20ಯಲ್ಲಿ 1,162 ರನ್ ಕಲೆಹಾಕಿದ್ದಾರೆ. 2023ರ ಆವೃತ್ತಿಯಲ್ಲಿ ಗುಜರಾತ್ ತಂಡದ ಭಾಗವಾಗಿದ್ದರು. ಮೂಲಬೆಲೆ 30 ಲಕ್ಷಕ್ಕೆ ಸಿಎಸ್‌ಕೆ ಸೇರಿದ್ದಾರೆ.
ಇದನ್ನೂ ಓದಿ IPL 2025 Points Table: ಒಂದು ಅಂಕ ಗಳಿಸಿ 5ನೇ ಸ್ಥಾನದಲ್ಲೇ ಮುಂದುವರಿದ ಡೆಲ್ಲಿ
ಕನ್ನಡಿಗ ಸ್ಮರಣ್ ಔಟ್
ಕರ್ನಾಟಕ ಎಡಗೈ ಬ್ಯಾಟರ್ ಆರ್.ಸ್ಮರಣ್ ಕೂಡ ಗಾಯಗೊಂಡು ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಅವರು ಗಾಯಾಳು ಆಡಂ ಜಂಪಾ ಸ್ಥಾನಕ್ಕೆ ಬದಲಿ ಆಟಗಾರನಾಗಿ ಸನ್‌ರೈಸರ್ಸ್ ತಂಡ ಸೇರಿದ್ದರು. ಆದರೆ ಒಂದೂ ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಸ್ಮರಣ್ ಬದಲಿಗೆ ವಿದರ್ಭದ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಹರ್ಷ್ ದುಬೆ ಟೂರ್ನಿಯ ಉಳಿದ ಭಾಗಕ್ಕೆ ಸನ್‌ರೈಸರ್ಸ್ ತಂಡ ಸೇರಿದ್ದಾರೆ. ಕಳೆದ ರಣಜಿ ಟ್ರೋಫಿಯಲ್ಲಿ 476 ರನ್ ಜತೆಗೆ 69 ವಿಕೆಟ್ ಪಡೆದಿದ್ದ 22 ವರ್ಷದ ಹರ್ಷ್ ದುಬೆ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಹೈದರಾಬಾದ್ ಮತ್ತು ಚೆನ್ನೈ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಬದಲಿಯಾಗಿ ತಂಡ ಸೇರಿದ ಆಟಗಾರರಿಗೆ ಇನ್ನುಳಿದ ಪಂದ್ಯಗಳಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.