IPL 2025 Points Table: ಒಂದು ಅಂಕ ಗಳಿಸಿ 5ನೇ ಸ್ಥಾನದಲ್ಲೇ ಮುಂದುವರಿದ ಡೆಲ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಗ್ರಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ದ್ವಿತೀಯ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಮೂರನೇ ಮತ್ತು ಗುಜರಾತ್ ಟೈಟಾನ್ಸ್ ನಾಲ್ಕನೇ ಸ್ಥಾನದಲ್ಲಿದೆ. ಇಂದು ನಡೆಯುವ ಪಂದ್ಯದಲ್ಲಿ ಗುಜರಾತ್ ಮತ್ತು ಮುಂಬೈ ತಂಡಗಳು ಸೆಣಸಾಟ ನಡೆಸಲಿದೆ. ಮುಂಬೈ ಗೆದ್ದರೆ ಮತ್ತೆ ಅಗ್ರಸ್ಥಾನಕ್ಕೇರಲಿದೆ.

ಹೈದರಾಬಾದ್: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಹಾಲಿ ರನ್ನರ್‌ಅಪ್ ಸನ್‌ರೈಸರ್ಸ್ ಹೈದರಾಬಾದ್(DC vs SRH) ವಿರುದ್ಧದ ಐಪಿಎಲ್(IPL 2025) ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಪ್ಯಾಟ್ ಕಮಿನ್ಸ್ ಬಳಗ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿತು. ಅತ್ತ ಸೋಲುವ ಪಂದ್ಯದಿಂದ ಪಾರಾದ ಡೆಲ್ಲಿ ಒಂದು ಅಂಕ ಗಳಿಸಿ ತನ್ನ ಪ್ಲೇ-ಆಫ್ ಅವಕಾಶವನ್ನು ವೃದ್ಧಿಸಿಕೊಂಡಿತು. ಸದ್ಯ ಡೆಲ್ಲಿ ಅಂಕಪಟ್ಟಿಯಲ್ಲಿ(IPL 2025 Points Table) 13 ಅಂಕದೊಂದೊಂದಿಗೆ 5ನೇ ಸ್ಥಾನದಲ್ಲಿದೆ. ಇನ್ನುಳಿದ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯ ಗೆದ್ದರೆ ತಂಡದ ಪ್ಲೇ-ಆಫ್ ಸ್ಥಾನ ಖಚಿತಗೊಳ್ಳಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಗ್ರಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ದ್ವಿತೀಯ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಮೂರನೇ ಮತ್ತು ಗುಜರಾತ್ ಟೈಟಾನ್ಸ್ ನಾಲ್ಕನೇ ಸ್ಥಾನದಲ್ಲಿದೆ. ಇಂದು ನಡೆಯುವ ಪಂದ್ಯದಲ್ಲಿ ಗುಜರಾತ್ ಮತ್ತು ಮುಂಬೈ ತಂಡಗಳು ಸೆಣಸಾಟ ನಡೆಸಲಿದೆ. ಮುಂಬೈ ಗೆದ್ದರೆ ಮತ್ತೆ ಅಗ್ರಸ್ಥಾನಕ್ಕೇರಲಿದೆ.
ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಈ ಹಿಂದಿಂನಂತೆ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್, ಪ್ರಸಿದ್ಧ್ ಕೃಷ್ಣ ಪರ್ಪಲ್ ಕ್ಯಾಪ್ ಹೊಂದಿದ್ದಾರೆ.
ಇದನ್ನೂ ಓದಿ IPL 2025: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪ್ರಭ್‌ಸಿಮ್ರನ್ ಸಿಂಗ್ ತಂದೆ!
ಸೋಮವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡ ನಾಯಕ ಪ್ಯಾಟ್ ಕಮ್ಮಿನ್ಸ್ (16ಕ್ಕೆ 3) ಸಹಿತ ಹೈದರಾಬಾದ್ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 137 ರನ್‌ಗಳಿಸಿತು. ಚೇಸಿಂಗ್ ನಡೆಸಲು ಹೈದರಾಬಾದ್ ಸಜ್ಜಾಗಿದ್ದ ವೇಳೆ ಮಳೆ ಅಡ್ಡಿಪಡಿಸಿತು. ಇದರಿಂದ ಪಂದ್ಯ ರದ್ದುಗೊಂಡು ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡವು.