ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 New Schedule: ಮೇ 17ರಿಂದ ಐಪಿಎಲ್‌ ಪಂದ್ಯ ಪುನಾರಂಭ; ಜೂನ್‌ 3ಕ್ಕೆ ಫೈನಲ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಪಂದ್ಯಗಳು ಮೇ 17ರಿಂದಲೇ ಮತ್ತೆ ಪುನಾರಂಭಗೊಳ್ಳಲಿದೆ. ಸೋಮವಾರ ಬಿಸಿಸಿಐ ಉಳಿದಿರುವ ಪಂದ್ಯಗಳ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಶನಿವಾರ (ಮೇ 17) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದೊಂದಿಗೆ ಪುನರಾರಂಭಗೊಳ್ಳಲಿದೆ.

ಮೇ 17ರಿಂದ  ಐಪಿಎಲ್‌ ಪಂದ್ಯ ಪುನಾರಂಭ; ಜೂನ್‌ 3ಕ್ಕೆ ಫೈನಲ್‌

Profile Abhilash BC May 12, 2025 10:52 PM

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಘರ್ಷ ಏರ್ಪಟ್ಟಿದ್ದರಿಂದ ಅರ್ಧದಲ್ಲೇ ಸ್ಥಗಿತಗೊಂಡಿದ್ದ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2025) ಪಂದ್ಯಗಳು ಮೇ 17ರಿಂದಲೇ ಮತ್ತೆ ಪುನಾರಂಭಗೊಳ್ಳಲಿದೆ. ಸೋಮವಾರ ಬಿಸಿಸಿಐ ಉಳಿದಿರುವ ಪಂದ್ಯಗಳ ಪರಿಷ್ಕೃತ ವೇಳಾಪಟ್ಟಿಯನ್ನು(IPL 2025 New Schedule) ಪ್ರಕಟಿಸಿದ್ದು, ಶನಿವಾರ (ಮೇ 17) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದೊಂದಿಗೆ ಪುನರಾರಂಭಗೊಳ್ಳಲಿದೆ. ಜೂನ್ 3 ರಂದು ಫೈನಲ್ ಪಂದ್ಯ ನಡೆಯಲಿದೆ.

ಕಳೆದ ಗುರುವಾರ(ಮೇ 8)ದಂದು ಡೆಲ್ಲಿ-ಪಂಜಾಬ್‌ ನಡುವಿನ ಪಂದ್ಯ ಅರ್ಧಕ್ಕೇ ಸ್ಥಗಿತಗೊಂಡ ಬಳಿಕ ಶುಕ್ರವಾರ ಇಡೀ ಟೂರ್ನಿಯನ್ನೇ ಮೊಟಕುಗೊಳಿಸಲಾಗಿತ್ತು. ಆಟಗಾರರು, ಪ್ರೇಕ್ಷಕರ ಸುರಕ್ಷತೆ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿದ್ದರಿಂದ ಟೂರ್ನಿ ಪುನಾರಂಭಗೊಂಡಿದೆ.

ಆರು ಸ್ಥಳಗಳಲ್ಲಿ ಒಟ್ಟು 17 ಪಂದ್ಯಗಳು ನಡೆಯಲಿವೆ. ಪ್ಲೇಆಫ್ ಪಂದ್ಯಗಳ ಸ್ಥಳಗಳನ್ನು ಲೀಗ್‌ ಪಂದ್ಯದ ಬಳಿಕ ಬಹಿರಂಗಪಡಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಕ್ವಾಲಿಫೈಯರ್ 1 – ಮೇ 29, ಎಲಿಮಿನೇಟರ್ ಮೇ 30, ಕ್ವಾಲಿಫೈಯರ್ 2 – ಜೂನ್ 1, ಫೈನಲ್ ಜೂನ್ 3 ರಂದು ನಡೆಯಲಿದೆ.



ಪರಿಷ್ಕೃತ ವೇಳಾಪಟ್ಟಿ ಹೀಗಿದೆ

ಮೇ 17 ರಂದು ಸಂಜೆ 7:30 ಕ್ಕೆ ಆರ್‌ಸಿಬಿ vs ಕೆಕೆಆರ್, ಬೆಂಗಳೂರು

ಮೇ 18 ರಂದು ಸಂಜೆ 3:30 ಕ್ಕೆ ಆರ್‌ಆರ್ vs ಪಿಬಿಕೆಎಸ್, ಜೈಪುರ

ಮೇ 18 ರಂದು ಸಂಜೆ 7:30 ಕ್ಕೆ ದೆಹಲಿ vs ಗುಜರಾತ್‌, ದೆಹಲಿ

ಮೇ 19 ರಂದು ಸಂಜೆ 7:30 ಕ್ಕೆ ಎಲ್‌ಎಸ್‌ಜಿ vs ಎಸ್‌ಆರ್‌ಎಚ್, ಲಕ್ನೋ

ಮೇ 20 ರಂದು ಸಂಜೆ 7:30 ಕ್ಕೆ ಸಿಎಸ್‌ಕೆ vs ಆರ್‌ಆರ್, ದೆಹಲಿ

ಮೇ 21 ರಂದು ಸಂಜೆ 7:30 ಕ್ಕೆ ಮುಂಬೈ vs ದೆಹಲಿ, ಮುಂಬೈ

ಮೇ 22 ರಂದು ಸಂಜೆ 7:30 ಕ್ಕೆ ಗುಜರಾತ್‌ vs ಎಲ್‌ಎಸ್‌ಜಿ,ಅಹಮದಾಬಾದ್

ಮೇ 23 ರಂದು ಸಂಜೆ 7:30 ಕ್ಕೆ ಆರ್‌ಸಿಬಿ vs ಎಸ್‌ಆರ್‌ಎಚ್, ಬೆಂಗಳೂರು

ಮೇ 24 ರಂದು ಸಂಜೆ 7:30 ಕ್ಕೆ ಪಂಜಾಬ್‌ vs ಡೆಲ್ಲಿ, ಜೈಪುರ

ಮೇ 25 ರಂದು ಸಂಜೆ 3:30 ಕ್ಕೆ ಗುಜರಾತ್‌ vs ಸಿಎಸ್‌ಕೆ, ಅಹಮದಾಬಾದ್

ಮೇ 25 ರಂದು ಸಂಜೆ 7:30 ಕ್ಕೆ ಎಸ್‌ಆರ್‌ಎಚ್ vs ಕೆಕೆಆರ್ ದೆಹಲಿ

ಮೇ 26 ರಂದು ಸಂಜೆ 7:30 ಕ್ಕೆ ಪಂಜಾಬ್‌ vs ಮುಂಬೈ, ಜೈಪುರ

ಮೇ 27 ರಂದು ಸಂಜೆ 7:30 ಕ್ಕೆ ಎಲ್‌ಎಸ್‌ಜಿ vs ಆರ್‌ಸಿಬಿ ಲಕ್ನೋ

ಮೇ 29 ರಂದು ಸಂಜೆ 7:30 ಕ್ಕೆ ಕ್ವಾಲಿಫೈಯರ್ 1

ಮೇ 30 ರಂದು ಸಂಜೆ 7:30ಕ್ಕೆ ಎಲಿಮಿನೇಟರ್

ಜೂನ್ 1 ರಂದು ಸಂಜೆ 7:30 ಕ್ಕೆ ಕ್ವಾಲಿಫೈಯರ್ 2

ಜೂನ್ 3 ರಂದು ಸಂಜೆ 7:30ಕ್ಕೆ ಫೈನಲ್

ಕದನ ವಿರಾಮ ಬೆನ್ನಲ್ಲೇ ಶುಭಮನ್ ಗಿಲ್‌ ನೇತೃತ್ವದ ಗುಜರಾತ್‌ ಟೈಟಾನ್ಸ್, ತಂಡ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ತರಬೇತಿ ಪುನರಾರಂಭಿಸಿದೆ. ಸೋಮವಾರ ಕೆಲ ಆಟಗಾರರು ಮೈದಾನದಲ್ಲಿ ನೆಟ್‌ ಪ್ರ್ಯಾಕ್ಟೀಸ್‌ನಲ್ಲಿ ತೊಡಗಿಸಿಕೊಂಡರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.