IPL 2025 Points Table: ಮುಂಬೈ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ
ಭಾನುವಾರ ಡಬಲ್ ಹೆಡರ್ ಪಂದ್ಯ ನಡೆಯುವ ಕಾರಣ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಲಿದೆ. ದಿನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಈಗಾಗಲೆ ಪ್ರಶಸ್ತಿ ರೇಸ್ನಿಂದ ಹೊರಬಿದ್ದಿರುವ ರಾಜಸ್ಥಾನ್ ವಿರುದ್ಧ ಸೆಣಸಾಟ ನಡೆಸಿದರೆ, ರಾತ್ರಿಯ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ.


ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದಿದ್ದ ಅತ್ಯಂತ ರೋಚಕ ಐಪಿಎಲ್(IPL 2025) ಪಂದ್ಯದಲ್ಲಿ ತವರಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಬದ್ಧ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್(RCB vs CSK) ತಂಡವನ್ನು 2 ರನ್ ಅಂತರದಿಂದ ಮಣಿಸಿ ಅಂಕಪಟ್ಟಿಯಲ್ಲಿ(IPL 2025 Points Table) ಆಗ್ರ ಸ್ಥಾನಕ್ಕೆ ಏರಿದೆ. ಆಡಿದ 11 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿರುವ ರಜತ್ ಪಾಟೀದಾರ್ ಪಡೆ 16 ಅಂಕಗಳಿಸಿ ತನ್ನ ಪ್ಲೇ-ಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಸೋಲು ಕಂಡ ಚೆನ್ನೈ ಕೊನೆಯ ಸ್ಥಾನದಲ್ಲೇ ಮುಂದುವರಿಯಿತು.
ಆರ್‌ಸಿಬಿ ಗೆಲುವಿನಿಂದ ಈ ಹಿಂದೆ ಅಗ್ರಸ್ಥಾನಿಯಾಗಿದ್ದ ಮುಂಬೈ ಇಂಡಿಯನ್ಸ್ ದ್ವಿತೀಯ ಸ್ಥಾನಕ್ಕೆ ಜಾರಿದೆ. ಭಾನುವಾರ ಡಬಲ್ ಹೆಡರ್ ಪಂದ್ಯ ನಡೆಯುವ ಕಾರಣ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಲಿದೆ. ದಿನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಈಗಾಗಲೆ ಪ್ರಶಸ್ತಿ ರೇಸ್ನಿಂದ ಹೊರಬಿದ್ದಿರುವ ರಾಜಸ್ಥಾನ್ ವಿರುದ್ಧ ಸೆಣಸಾಟ ನಡೆಸಿದರೆ, ರಾತ್ರಿಯ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ.
ಆರೆಂಜ್ ಕ್ಯಾಪ್ ಪಡೆದ ಕೊಹ್ಲಿ
ಚೆನ್ನೈ ವಿರುದ್ಧ ಅರ್ಧಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಅವರು ಸಾಯಿ ಸುದರ್ಶನ್ ಅವರನ್ನು ಹಿಂದಿಕ್ಕಿ ಮತ್ತೆ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ 505 ರನ್ ಗಳಿಸಿದ್ದರೆ, ಸಾಯಿ ಸುರ್ದಶನ್ 504 ರನ್ ಗಳಿಸಿದ್ದಾರೆ. ಉಭಯ ಆಟಗಾರರ ಮಧ್ಯೆ ಈ ಕ್ಯಾಪ್‌ಗಾಗಿ ಸದ್ಯ ಭಾರೀ ಪೈಪೋಟಿ ಏರ್ಪಟ್ಟಿದೆ.
ಅತ್ಯಧಿಕ ವಿಕೆಟ್ ಕಿತ್ತ ಪರ್ಪಲ್ ಕ್ಯಾಪ್ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. 19 ವಿಕೆಟ್ ಕಿತ್ತಿರುವ ಗುಜರಾತ್ ಟೈಟಾನ್ಸ್ ತಂಡದ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಪರ್ಪಲ್ ಕ್ಯಾಪ್ ಹೊಂದಿದ್ದಾರೆ.
ಅಂಕಪಟ್ಟಿ ಹೀಗಿದೆ
IPL 2025 POINTS TABLE. 📈
— Mufaddal Vohra (@mufaddal_vohra) May 3, 2025
- RCB back ruling at No.1 spot. 🔥 pic.twitter.com/zsiOBuRPCC