ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಪ್ಲೇ ಆಫ್‌ ಪಂದ್ಯಕ್ಕೆ ಆರ್‌ಸಿಬಿ ಸೇರಿದ ಜಿಂಬಾಬ್ವೆಯ ಘಾತಕ ವೇಗಿ

ಜೂನ್‌ 11 ರಿಂದ ಆರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ತಯಾರಿಗಾಗಿ ಲುಂಗಿ ಎನ್​ಗಿಡಿ ಪ್ಲೇಆಫ್ ಪಂದ್ಯಗಳಿಗೂ ಮುನ್ನವೇ ದಕ್ಷಿಣ ಆಫ್ರಿಕಾಗೆ ತೆರಳಲಿದ್ದಾರೆ. ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಲುಂಗಿ ಎನ್‌ಗಿಡಿ ಆರ್‌ಸಿಬಿ ಪರ ಒಂದು ಪಂದ್ಯವನ್ನು ಆಡಿ ಮೂರು ವಿಕೆಟ್‌ ಪಡೆದಿದ್ದರು.

ಪ್ಲೇ ಆಫ್‌ ಪಂದ್ಯಕ್ಕೆ ಆರ್‌ಸಿಬಿ ಸೇರಿದ ಜಿಂಬಾಬ್ವೆಯ ಘಾತಕ ವೇಗಿ

Profile Abhilash BC May 19, 2025 2:21 PM

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(RCB) ತಂಡದ ವೇಗಿ ಲುಂಗಿ ಎನ್​ಗಿಡಿ(Lungi Ngidi) ಅವರು ಐಪಿಎಲ್‌(IPL 2025) ಲೀಗ್‌ ಪಂದ್ಯಗಳ ಬಳಿಕ ರಾಷ್ಟ್ರೀಯ ತಂಡದ ಕರ್ತವ್ಯ ನಿಮಿತ್ತ ಪ್ಲೇ ಆಫ್‌ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಜಿಂಬಾಬ್ವೆ ತಂಡದ ವೇಗಿ ಬ್ಲೆಸ್ಸಿಂಗ್‌ ಮುಜರಬಾನಿ(Blessing Muzurabani) ಆರ್‌ಸಿಬಿ ತಂಡ ಸೇರಲಿದ್ದಾರೆ. ಆದರೆ ಅವರು ಮೇ 25ರ ನಂತರವಷ್ಟೇ ಆಯ್ಕೆಗೆ ಅರ್ಹರಾಗಿದ್ದಾರೆ ಎಂದು ಐಪಿಎಲ್‌ ಆಡಲಿತ ಮಂಡಳಿ ತಿಳಿಸಿದೆ.

ಜೂನ್‌ 11 ರಿಂದ ಆರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ತಯಾರಿಗಾಗಿ ಲುಂಗಿ ಎನ್​ಗಿಡಿ ಪ್ಲೇಆಫ್ ಪಂದ್ಯಗಳಿಗೂ ಮುನ್ನವೇ ದಕ್ಷಿಣ ಆಫ್ರಿಕಾಗೆ ತೆರಳಲಿದ್ದಾರೆ. ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಲುಂಗಿ ಎನ್‌ಗಿಡಿ ಆರ್‌ಸಿಬಿ ಪರ ಒಂದು ಪಂದ್ಯವನ್ನು ಆಡಿದ್ದರು. ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯ ಇದಾಗಿತ್ತು. ಪಂದ್ಯದಲ್ಲಿ ಅವರು 3 ವಿಕೆಟ್‌ ಕಿತ್ತಿದ್ದರು. ಮುಜರಬಾನಿ 75 ಲಕ್ಷ ರೂ. ಮೂಲ ಬೆಲೆಗೆ ಆರ್‌ಸಿಬಿಯನ್ನು ಸೇರಲಿದ್ದಾರೆ.



28 ವರ್ಷದ ಮುಜರಬಾನಿ ಜಿಂಬಾಬ್ವೆ ಪರ ಇಲ್ಲಿಯವರೆಗೆ 70 ಟಿ20 ಪಂದ್ಯಗಳನ್ನು ಆಡಿದ್ದಾರೆ. 78 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಜಿಂಬಾಬ್ವೆ ಪರ 12 ಟೆಸ್ಟ್ ಮತ್ತು 55 ಏಕದಿನ ಪಂದ್ಯಗಳನ್ನು ಸಹ ಆಡಿದ್ದಾರೆ.

ಕನಸು ನನಸಾಗಿದೆ

ಐಪಿಎಲ್‌ ಆಡುವ ಅವಕಾಶ ಸಿಕ್ಕ ಸಂತಸವನ್ನು ವ್ಯಕ್ತಪಡಿಸಿರುವ ಮುಜುರಬಾನಿ, ಐಪಿಎಲ್‌ನಲ್ಲಿ ಆಡುವುದು ನನ್ನ ಕನಸಾಗಿತ್ತು. ಇದು ಈಗ ನನಸಾಗಿದೆ. ಪ್ರತಿಯೊಬ್ಬ ಕ್ರಿಕೆಟಿಗನೂ ಐಪಿಎಲ್ ಆಡಲು ಬಯಸುತ್ತಾರೆ. ಏಕೆಂದರೆ ಇದು ವಿಶ್ವದ ಅತ್ಯುತ್ತಮ (ಲೀಗ್)ಗಳಲ್ಲಿ ಒಂದಾಗಿದೆ. ನನ್ನನ್ನು ಆಯ್ಕೆ ಮಾಡಿರುವ ಆರ್‌ಸಿಬಿ ತಂಡಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.



ಇದನ್ನೂ ಓದಿ IPL 2025: ಐಪಿಎಲ್‌ನಲ್ಲಿ ನೂತನ ದಾಖಲೆ ಬರೆದ ಅಯ್ಯರ್‌; ಈ ಸಾಧನೆ ಮಾಡಿದ ಮೊದಲ ನಾಯಕ

ಒಂದು ವೇಳೆ ಮುಜುರಬಾನಿ ಆರ್‌ಸಿಬಿ ಪರ ಆಡುವ ಅವಕಾಶ ಪಡೆದರೆ, ಸಿಕಂದರ್ ರಾಜಾ, ರೇ ಪ್ರೈಸ್ ಮತ್ತು ಟಟೆಂಡಾ ತೈಬು ಬಳಿಕ ಐಪಿಎಲ್‌ ಆಡಿದ ನಾಲ್ಕನೇ ಜಿಂಬಾಬ್ವೆ ಆಟಗಾರನಾಗಲಿದ್ದಾರೆ.