IPL 2026: ಗೆದ್ದರೂ 12 ಲಕ್ಷ ರೂ. ದಂಡಕ್ಕೆ ಗುರಿಯಾದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್
Axar Patel fined for slow over-rate: "ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಸಂಖ್ಯೆ 55 ರ ಸಂದರ್ಭದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ" ಎಂದು ಐಪಿಎಲ್ ತನ್ನ ಹೇಳಿಕೆ ತಿಳಿಸಿದೆ.
Axar Patel fined for slow over-rate -
ಧರ್ಮಶಾಲಾ, ಮೇ 12: ಸೋಮವಾರ ಧರ್ಮಶಾಲಾದಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್(DC vs PBKS) ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ 2026(IPL 2026) ರ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್(Axar Patel fined for slow over-rate) ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಡೆಲ್ಲಿ ತಂಡವು ಮೂರು ವಿಕೆಟ್‌ಗಳ ರೋಮಾಂಚಕ ಗೆಲುವು ಸಾಧಿಸಿ ತಮ್ಮ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದರೂ ಈ ದಂಡ ವಿಧಿಸಲಾಗಿದೆ.
ಈ ಋತುವಿನಲ್ಲಿ ಅನೇಕ ನಾಯಕರು ಶಿಸ್ತು ಕ್ರಮ ಎದುರಿಸಿದ್ದಾರೆ. ಈ ಹಿಂದೆ ದಂಡ ವಿಧಿಸಲಾದವರಲ್ಲಿ ಶ್ರೇಯಸ್ ಅಯ್ಯರ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಸೇರಿದ್ದಾರೆ. ಈ ಹಿಂದೆ, ಪುನರಾವರ್ತಿತ ಅಪರಾಧದ ಸಂದರ್ಭದಲ್ಲಿ ನಾಯಕನನ್ನು ಅಮಾನತುಗೊಳಿಸುವ ನಿಯಮವನ್ನು ಬಿಸಿಸಿಐ ಹೊಂದಿತ್ತು. ಆದರೆ 2025 ರಲ್ಲಿ ಅದನ್ನು ಕೈಬಿಡಲಾಯಿತು.
"ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಸಂಖ್ಯೆ 55 ರ ಸಂದರ್ಭದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ" ಎಂದು ಐಪಿಎಲ್ ತನ್ನ ಹೇಳಿಕೆ ತಿಳಿಸಿದೆ.
ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಈ ಋತುವಿನಲ್ಲಿ ಮಾಡಿದ ಮೊದಲ ಓವರ್-ರೇಟ್ ಅಪರಾಧ ಇದಾಗಿದ್ದು, ಇದು ಕನಿಷ್ಠ ಓವರ್-ರೇಟ್ ಉಲ್ಲಂಘನೆಗಳಿಗೆ ಸಂಬಂಧಿಸಿದೆ ಎಂದು ಲೀಗ್ ಸ್ಪಷ್ಟಪಡಿಸಿದೆ. ಇದರ ಪರಿಣಾಮವಾಗಿ, ಅಕ್ಷರ್ 12 ಲಕ್ಷ ರೂಪಾಯಿಗಳ ದಂಡವನ್ನು ಪಾವತಿ ಮಾಡಬೇಕಿದೆ. 211 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ವೇಳೆ ಡೆಲ್ಲಿ ಕ್ಯಾಪಿಟಲ್ಸ್,ಗೆ ನಾಯಕ ಅಕ್ಷರ್ 56 ರನ್ ಬಾರಿಸಿ ನೆರವಾದರು.
ಯುರೋಪಿಯನ್ ಟಿ20 ಲೀಗ್‌ನಲ್ಲಿ ತಂಡ ಖರೀದಿಸಿದ ರಾಹುಲ್ ದ್ರಾವಿಡ್
ಅಕ್ಷರ್ ಬಳಿಕ ಡೇವಿಡ್ ಮಿಲ್ಲರ್ ಪ್ರತಿದಾಳಿ ನಡೆಸಿ 51 ರನ್ ಗಳಿಸುವ ಮೂಲಕ ಡೆಲ್ಲಿ ತಂಡಕ್ಕೆ ನೆರವಾದರು. ಅಂತಿಮವಾಗಿ ಅಶುತೋಷ್ ಶರ್ಮಾ ಮತ್ತು ಮಾಧವ್ ತಿವಾರಿ ಅವರ ಕೊಡುಗೆಯಿಂದಾಗಿ ಡೆಲ್ಲಿ ತಂಡ ಕೇವಲ 19 ಓವರ್‌ಗಳಲ್ಲಿ 7 ವಿಕೆಟ್‌ಗೆ 216 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.
ಇದಕ್ಕೂ ಮೊದಲು, ಪಂಜಾಬ್ ಕಿಂಗ್ಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 5 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತ್ತು. ಪ್ರಿಯಾಂಶ್ ಆರ್ಯ 33 ಎಸೆತಗಳಲ್ಲಿ 56 ರನ್ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರೆ, ಪ್ರಭ್ಸಿಮ್ರನ್ ಸಿಂಗ್ 78 ರನ್‌ಗಳ ಆರಂಭಿಕ ಜೊತೆಯಾಟದಲ್ಲಿ 18 ರನ್ ಗಳಿಸಿದರು. ಆರಂಭಿಕ ಆಟಗಾರರು ನಿರ್ಗಮಿಸಿದ ನಂತರ, ನಾಯಕ ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ ಅಜೇಯ 59 ರನ್ ಗಳಿಸಿದರು. ಕೂಪರ್ ಕೊನೊಲಿ ಕೂಡ 27 ಎಸೆತಗಳಲ್ಲಿ 38 ರನ್ ಗಳಿಸಿ ಪ್ರಮುಖ ಕೊಡುಗೆ ನೀಡಿದರು.