IPL 2026 Points Table: ಕೆಕೆಆರ್ ಮಣಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದ ಸನ್‌ರೈಸರ್ಸ್
SRH vs KKR: ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ತವರಿನಂಗಳದಲ್ಲಿ ಶುಕ್ರವಾರ ಪಂಜಾಬ್ ಕಿಂಗ್ಸ್ ಎದುರು ಕಣಕ್ಕಿಳಿಯಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ತಂಡವು ರಾಜಸ್ಥಾನ ರಾಯಲ್ಸ್ ಎದುರು ಹೀನಾಯವಾಗಿ ಸೋತಿತ್ತು. ಅದರಿಂದಾಗಿ ಎರಡನೇ ಪಂದ್ಯದಲ್ಲಿ ತನ್ನ ಎಲ್ಲ ವಿಭಾಗಗಳಲ್ಲಿಯೂ ಬಲವರ್ಧನೆ ಮಾಡಿಕೊಳ್ಳುವ ಅಗತ್ಯ ಇದೆ.
Nitish Kumar Reddy -
ಕೋಲ್ಕತಾ, ಎ. 3: ಗುರುವಾರ ನಡೆದಿದ್ದ ಐಪಿಎಲ್(IPL 2026) ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್(SRH vs KKR) ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ 65 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಇದು ಹೈದರಾಬಾದ್‌ಗೆ ಹಾಲಿ ಆವೃತ್ತಿಯಲ್ಲಿ ಒಲಿದ ಮೊದಲ ಗೆಲುವಾದರೆ, ಕೋಲ್ಕತಾಗೆ ಸತತ ಎರಡನೇ ಸೋಲು.
ಸನ್‌ರೈಸರ್ಸ್ ತಂಡ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ(IPL 2026 Points Table) ಖಾತೆ ತೆರೆಯಿತು. ಸದ್ಯ 2 ಅಂಕದೊಂದಿಗೆ 6ನೇ ಸ್ಥಾನಿಯಾಗಿದೆ. ಸತತ ಎರಡು ಸೋಲು ಕಂಡ ಕೆಕೆಆರ್ 9ನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ 10ನೇ ಸ್ಥಾನದಲ್ಲಿದೆ. ರಾಜಸ್ಥಾನ್ ಮತ್ತು ಆರ್‌ಸಿಬಿ ಮೊದಲ ಎರಡು ಸ್ಥಾನ ಪಡೆದಿದೆ. ಉಳಿದಂತೆ ಡೆಲ್ಲಿ ಕ್ಯಾಪಿಟಲ್, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಕ್ರಮವಾಗಿ 3, 4 ಮತ್ತು 5ನೇ ಸ್ಥಾನದಲ್ಲಿದೆ.
ಪಂದ್ಯದ ಬಗ್ಗೆ ಹೇಳುವುದಾದರೆ, ಟಾಸ್ ಸೋತು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಎಚ್ ತಂಡ ಆರಂಭಿಕ ಬ್ಯಾಟರ್‌ಗಳಾದ ಅಭಿಷೇಕ್ ಶರ್ಮಾ (48) ಹಾಗೂ ಟ್ರಾವಿಸ್ ಹೆಡ್ (46) ಸ್ಫೋಟಕ 81 ರನ್‌ಗಳ ಜೊತೆಯಾಟ ಮತ್ತು ಆ ಬಳಿಕ ಹೆನ್ರಿಚ್ ಕ್ಲಾಸೆನ್(52) ಬಾರಿಸಿದ ಅರ್ಧಶತಕದ ನೆರವಿನಿಂದ 8 ವಿಕೆಟ್‌ಗೆ 226 ರನ್ ಬಾರಿಸಿತು.
227 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಕೆಕೆಆರ್ ತಂಡಕ್ಕೆ ಫಿನ್ ಅಲೆನ್ ಸ್ಫೋಟಕ ಆರಂಭ ನೀಡಿದರು. ನಂತರ ಬಂದ ಅಂಗ್‌ಕ್ರಿಷ್ ರಘುವಂಶಿ (52) ಹಾಗೂ ರಿಂಕು ಸಿಂಗ್ (35) ಹೋರಾಟ ನಡೆಸಿದರು. ಆದರೆ ಉಳಿದ ಬ್ಯಾಟರ್‌ಗಳ ವೈಫಲ್ಯದಿಂದ ತಂಡ 16 ಓವರ್‌ಗಳಿಗೆ 161 ರನ್‌ಗಳಿಗೆ ಆಲೌಟ್ ಆಗುವ ಮೂಲಕ 65 ರನ್‌ಗಳ ಸೋಲು ಅನುಭವಿಸಿತು. ಎಸ್‌ಆರ್‌ಎಚ್ ಪರ ಹಿರಿಯ ಬೌಲರ್ ಜಯದೇವ್ ಉನಾದ್ಕತ್ 3 ವಿಕೆಟ್ ಪಡೆದು ಮಿಂಚಿದರೆ, ನಿತೀಶ್ ಕುಮಾರ್ ಹಾಗೂ ಇಶಾನ್ ಮಲಿಂಗಾ ತಲಾ ಎರಡು ವಿಕೆಟ್ ಪಡೆದುಕೊಂಡರು.
IPL 2026: ವರುಣ್ ಚಕ್ರವರ್ತಿ ಬೌಲಿಂಗ್ ವೈಫಲ್ಯಕ್ಕೆ ನೈಜ ಕಾರಣ ತಿಳಿಸಿದ ಅಭಿಷೇಕ್ ನಾಯರ್!
ಇಂದಿನ ಪಂದ್ಯ
ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ತವರಿನಂಗಳದಲ್ಲಿ ಶುಕ್ರವಾರ ಪಂಜಾಬ್ ಕಿಂಗ್ಸ್ ಎದುರು ಕಣಕ್ಕಿಳಿಯಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ತಂಡವು ರಾಜಸ್ಥಾನ ರಾಯಲ್ಸ್ ಎದುರು ಹೀನಾಯವಾಗಿ ಸೋತಿತ್ತು. ಅದರಿಂದಾಗಿ ಎರಡನೇ ಪಂದ್ಯದಲ್ಲಿ ತನ್ನ ಎಲ್ಲ ವಿಭಾಗಗಳಲ್ಲಿಯೂ ಬಲವರ್ಧನೆ ಮಾಡಿಕೊಳ್ಳುವ ಅಗತ್ಯ ಇದೆ. ಧೋನಿ ಅವರು ಮೀನಖಂಡದ ಸ್ನಾಯುಸೆಳೆತದಿಂದಾಗಿ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಗುವಾಹಟಿಗೆ ತಂಡದೊಂದಿಗೆ ತೆರಳಿರಲಿಲ್ಲ. ಈ ಪಂದ್ಯದಲ್ಲಿಯೂ ಅವರು ಆಡುವುದಿಲ್ಲ.