ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

KKR vs SRH: ಒಂದೇ ಓವರ್‌ನಲ್ಲಿ 24 ರನ್‌ ಬಾರಿಸಿ ಜಂಟಿ ಐಪಿಎಲ್‌ ದಾಖಲೆ ಬರೆದ ಫಿನ್‌ ಅಲೆನ್‌

Most Runs In 1st Over Of An IPL Innings: ಐಪಿಎಲ್ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಒಟ್ಟಾರೆ ದಾಖಲೆ ಯಶಸ್ವಿ ಜೈಸ್ವಾಲ್ ಹೆಸರಿನಲ್ಲಿದೆ. ಐಪಿಎಲ್ 2023 ಪಂದ್ಯದಲ್ಲಿ ಕೆಕೆಆರ್ ಪರ ನಿತೀಶ್ ರಾಣಾ ಎಸೆದ ಆರ್‌ಆರ್ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಜೈಸ್ವಾಲ್ 26 ರನ್ ಗಳಿಸಿದ್ದರು.

ಒಂದೇ ಓವರ್‌ನಲ್ಲಿ 24 ರನ್‌ ಬಾರಿಸಿ ಐಪಿಎಲ್‌ ದಾಖಲೆ ಬರೆದ ಫಿನ್‌ ಅಲೆನ್‌

Finn Allen -

Abhilash BC
Abhilash BC Apr 3, 2026 7:06 AM

ಕೋಲ್ಕತಾ, ಎ.3: ಸನ್‌ರೈಸರ್ಸ್‌ ಹೈದಾರಾಬಾದ್‌ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಫಿನ್ ಅಲೆನ್ ಐಪಿಎಲ್‌ನಲ್ಲಿ ಜಂಟಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಫಿನ್ ಅಲೆನ್ ಮೊದಲ ಓವರ್‌ನಲ್ಲೆ ಅಬ್ಬರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 24 ರನ್ ಬಾರಿಸಿದರು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೊದಲ ಓವರ್‌ನಲ್ಲಿ ಅತೀ ಹೆಚ್ಚು ರನ್‌ ಕಲೆಹಾಕಿದ ಜಂಟಿ ಎರಡನೇ ಬ್ಯಾಟರ್‌ ಎನಿಸಿದರು. ಐಪಿಎಲ್ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಒಟ್ಟಾರೆ ದಾಖಲೆ ಯಶಸ್ವಿ ಜೈಸ್ವಾಲ್ ಹೆಸರಿನಲ್ಲಿದೆ. ಐಪಿಎಲ್ 2023 ಪಂದ್ಯದಲ್ಲಿ ಕೆಕೆಆರ್ ಪರ ನಿತೀಶ್ ರಾಣಾ ಎಸೆದ ಆರ್‌ಆರ್ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಜೈಸ್ವಾಲ್ 26 ರನ್ ಗಳಿಸಿದ್ದರು.

ಅಲೆನ್ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಪೃಥ್ವಿ ಶಾ ಕೂಡ ಐಪಿಎಲ್ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ 24 ರನ್ ಗಳಿಸಿದ್ದರು. ಐಪಿಎಲ್ 2021 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಪರ ಶಾ ಈ ಸಾಧನೆ ಮಾಡಿದ್ದರು.

KKR vs SRH: ನಿತೀಶ್‌ ರೆಡ್ಡಿ ಆಲ್‌ರೌಂಡರ್‌ ಆಟದಿಂದ ಸನ್‌ರೈಸರ್ಸ್‌ಗೆ ಮೊದಲನೇ ಜಯ!

ಇದಕ್ಕೂ ಮೊದಲು ಕೆಕೆಆರ್ ಪರ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ದಾಖಲೆ ಸುನಿಲ್‌ ನರೈನ್ ಹೆಸರಿನಲ್ಲಿತ್ತು. 2018 ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕೃಷ್ಣಪ್ಪ ಗೌತಮ್ ಎಸೆದ ಓವರ್‌ನಲ್ಲಿ 21 ರನ್ ಗಳಿಸಿದ್ದರು.

ಐಪಿಎಲ್‌ನ ಮೊದಲ ಓವರ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರು

ಯಶಸ್ವಿ ಜೈಸ್ವಾಲ್-26 ರನ್, ಕೆಕೆಆರ್ ವಿರುದ್ಧ– 2023

ಫಿನ್ ಅಲೆನ್- 24 ರನ್, ಎಸ್‌ಆರ್‌ಎಚ್ ವಿರುದ್ಧ– 2026ರಲ್ಲಿ

ಪೃಥ್ವಿ ಶಾ-24 ರನ್‌, ಕೆಎಆರ್‌ ವಿರುದ್ಧ-2021ರಲ್ಲಿ

ನಮನ್ ಓಜಾ-21 ರನ್ ಕೆಕೆಆರ್ ವಿರುದ್ಧ–2009ರಲ್ಲಿ

65 ರನ್‌ ಸೋಲು

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಸನ್‌ರೈಸರ್ಸ್‌ ಹೈದರಾಬಾದ್‌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 227 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಕೋಲ್ಕತಾ ನೈಟ್‌ ರೈಡರ್ಸ್‌ ಅಂಗ್‌ಕೃಷ್‌ ರಘುವಂಶಿ ಅವರ ಅರ್ಧಶತಕದ ಹೊರತಾಗಿಯೂ ಉನಾದ್ಕಟ್‌ ಬೌಲಿಂಗ್‌ಗೆ ನಲುಗಿ 16 ಓವರ್‌ಗಳಿಗೆ 161 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ 65 ರನ್‌ಗಳಿಂದ ಸೋಲು ಅನುಭವಿಸಿತು.