ಒಂದೆಡೆ ಐಪಿಎಲ್ ಮ್ಯಾಚು, ಸ್ಟ್ಯಾಂಡ್‌ನಲ್ಲಿ ಜೋಡಿಗಳ ಚುಂಬನ !
ಒಂದೆಡೆ ಐಪಿಎಲ್ ಮ್ಯಾಚು, ಸ್ಟ್ಯಾಂಡ್‌ನಲ್ಲಿ ಜೋಡಿಗಳ ಚುಂಬನ !
-
Vishwavani News
Apr 4, 2022 12:15 PM
ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ ನ 2022 ರ ಆವೃತ್ತಿಯ 10ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪುಣೆಯ ಮಹಾ ರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಾದಾಡಿದೆ.
172 ರನ್ ಗುರಿ ಬೆನ್ನಟ್ಟುತ್ತಿರುವಾಗ ಅಪರೂಪದ ಘಟನೆ ನಡೆದಿದೆ. ಮೊಹಮ್ಮದ್ ಶಮಿ, ರಶೀದ್ ಖಾನ್ ಮತ್ತು ಲಾಕ್ ಫರ್ಗುಸನ್ ಡೆಲ್ಲಿ ಬ್ಯಾಟರ್ ಗಳಿಗೆ ಕಡಿವಾಣ ಹಾಕುವಲ್ಲಿ ನಿರತರಾಗಿದ್ದರೆ, ಸ್ಟ್ಯಾಂಡ್‌ನಲ್ಲಿ ಜೋಡಿಗಳು ಚುಂಬಿಸುತ್ತಿರುವುದನ್ನು ಕೂಡ ಗುರುತಿಸಲಾಗಿದೆ.
ಐಪಿಎಲ್‌ನಲ್ಲಿ ಕ್ಯಾಮೆರಾ ಆಪರೇಟರ್’ಗಳು ಕೇಂದ್ರ ಬಿಂದುವಾದರು. ಜೋಡಿ ಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಮೀಮ್ ಗಳೊಂದಿಗೆ ಹಬ್ಬವನ್ನೇ ಆಚರಿಸಿದ್ದಾರೆ.
ಗುಜರಾತ್‌ಗೆ ಎರಡನೇ ಗೆಲುವು ಆಗಿದ್ದರೆ, ದೆಹಲಿ ಈಗ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಸೋಲನ್ನು ಕಂಡಿದೆ.