ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Chinthamani News: ಕನಂಪಲ್ಲಿಯಲ್ಲಿ ಅಕ್ರಮ ವೇಶ್ಯಾವಾಟಿಕೆ ಜಾಲ ಭೇದಿಸಿದ ಪೊಲೀಸರು: ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳೆಯರು, ಓರ್ವ ಗ್ರಾಹಕ ಬಂಧನ

ಕನಂಪಲ್ಲಿಯಲ್ಲಿ ಅಕ್ರಮ ವೇಶ್ಯಾವಾಟಿಕೆ ಜಾಲ ಭೇದಿಸಿದ ಪೊಲೀಸರು

ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಅಪರಾಧ ದಳದ ಕೆಂಚಾರಹಳ್ಳಿ ಪಿಎಸ್‌ಐ ಶ್ಯಾಮಲಾ ಹಾಗೂ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವರಾಜ್ ಎಸ್. ನೇತೃತ್ವದ ತಂಡ ಕನಂಪಲ್ಲಿಯಿಂದ ಕಲ್ಲಹಳ್ಳಿಗೆ ಹೋಗುವ ರಸ್ತೆಯಲ್ಲಿರುವ ಮನೆಯ ಮೇಲೆ ದಾಳಿ ನಡೆಸಿತು. ಪರಿಶೀಲನೆ ವೇಳೆ ಮನೆಯಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಯುತ್ತಿರುವುದು ದೃಢಪಟ್ಟಿದ್ದು, ದಂಧೆ ನಡೆಸುತ್ತಿದ್ದ 55 ವರ್ಷದ ಮನೆ ಮಾಲಕಿ, 32 ವರ್ಷದ ಮತ್ತೊಬ್ಬ ಮಹಿಳೆ ಹಾಗೂ ಆಶ್ರಯ ಬಡಾವಣೆ ನಿವಾಸಿ ಗ್ರಾಹಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ರಸಪ್ರಶ್ನೆ ಸ್ಪರ್ಧೆ: ಟಿಸಿಎಸ್ ಇನ್‌ಕ್ವಿಜಿಟಿವ್ 2026 ಸ್ಪರ್ಧೆಯಲ್ಲಿ ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ವಿಜೇತರು

ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದ ಟಿಸಿಎಸ್

ಬೆಂಗಳೂರಿನ ಹೊಸ ಆವಿಷ್ಕಾರ ಸಾಮರ್ಥ್ಯ ಮತ್ತು ಸಮಸ್ಯೆ ಪರಿಹರಿಸುವ ಉತ್ಸಾಹ ಪ್ರದರ್ಶಿಸಿದ ವಿದ್ಯಾರ್ಥಿಗಳು, ತಮ್ಮ ಅತ್ಯುತ್ತಮ ತಂಡದ ಕೆಲಸ ಹಾಗೂ ಚುರುಕಾದ ಜ್ಞಾನದ ಮೂಲಕ ಸೆಮಿಫೈನಲ್ಸ್‌ ನಲ್ಲಿ ಭಾಹವಹಿಸುವ ಅರ್ಹತೆ ಪಡೆದುಕೊಂಡಿದ್ದಾರೆ. ಇಲ್ಲಿ ಅವರು ದೇಶದ ವಿವಿಧ ಭಾಗಗಳಿಂದ ಆಗಮಿಸುವ ವಿಜೇತ ತಂಡಗಳೊಂದಿಗೆ ಸ್ಪರ್ಧಿಸಲಿದ್ದಾರೆ.

Gubbi News: ವಿದ್ಯಾರ್ಥಿಗಳು ಸಮಯದ ಸದ್ಬಳಕೆ ಮಾಡಿಕೊಂಡು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕು

ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪರಿಚಯಾತ್ಮಕ ಕಾರ್ಯಕ್ರಮ

ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ, ಅದು ಉತ್ತಮ ವ್ಯಕ್ತಿತ್ವ, ಸಂಸ್ಕಾರ ಮತ್ತು ಸಮಾಜ ಮುಖಿ ಬದುಕಿನ ಅಡಿಪಾಯವಾಗಿದೆ. ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆ, ಪರಿಶ್ರಮ ಮತ್ತು ಪ್ರಾಮಾಣಿಕತೆಯನ್ನು ಜೀವನದ ಮೌಲ್ಯಗಳಾಗಿ ಅಳವಡಿಸಿಕೊಂಡರೆ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಸಾಧಿಸಬಹುದು

Bengaluru News: ಬಸ್ ಹತ್ತಲು ಬಂದ ಭಿಕ್ಷುಕನನ್ನು ಕಾಲಿನಿಂದ ಒದ್ದು ಬೀಳಿಸಿದ್ದ ಕಂಡಕ್ಟರ್‌ ಅಮಾನತು

ಭಿಕ್ಷುಕನನ್ನು ಕಾಲಿನಿಂದ ಒದ್ದಿದ್ದ ಬಿಎಂಟಿಸಿ ಕಂಡಕ್ಟರ್‌ ಸಸ್ಪೆಂಡ್‌

BMTC Conductor suspended: ​ನೆಲಮಂಗಲ ಟೋಲ್ ಬಳಿ ಬಸ್ ಹತ್ತಲು ಬಂದ ವ್ಯಕ್ತಿಗೆ ನಿರ್ವಾಹಕ ಕಾಲಿನಿಂದ ಒದ್ದು ಬೀಳಿಸಿದ ದೃಶ್ಯ ಬೈಕ್ ಸವಾರರೊಬ್ಬರ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ನಿರ್ವಾಹಕನ ವಿರುದ್ಧ ಬಿಎಂಟಿಸಿ ಶಿಸ್ತುಕ್ರಮ ಕೈಗೊಂಡಿದೆ.

Gubbi News: ಕಂದಾಯ ಇಲಾಖೆ ವಿರುದ್ಧ ರೈತರು ದಿಢೀರ್ ಪ್ರತಿಭಟನೆ

ಕಂದಾಯ ಇಲಾಖೆ ವಿರುದ್ಧ ರೈತರು ದಿಢೀರ್ ಪ್ರತಿಭಟನೆ

ದಲಿತ ಮುಖಂಡ ಅದಲಗೆರೆ ಈಶ್ವರಯ್ಯ  ಮಾತನಾಡಿ, ಸುಮಾರು ಎರಡು ತಲೆ ಮಾರುಗಳಿಂದ ರೈತರು ಜಮೀನಿನ್ನು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜಮೀನು ದುರಾಸ್ತಿ ಮಾಡುವ ಸಂದರ್ಭದಲ್ಲಿ ಒಂದೊಂದು ಜಮೀನಿನಲ್ಲೂ ಹತ್ತು ಕುಂಟೆ ,ಇಪ್ಪತ್ತು ಕುಂಟೆ ಜಮೀನು ಕಡಿಮೆ ಮಾಡಿರುವುದು ಗಮನಕ್ಕೆ ಬಂದಿದ್ದು. ಕೂಡಲೇ ದಂಡಾಧಿಕಾರಿಗಳು ಸ್ಥಳಕ್ಕೆ ಬಂದು ರೈತರ ಸಮಸ್ಯೆ ಯನ್ನು ಬಗೆಹರಿಸಕೊಡಬೇಕು ಎಂದರು.

SIR: ಎಸ್‌ಐಆರ್‌ ಪ್ರಕ್ರಿಯೆಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಆಗ್ರಹ

ಎಸ್‌ಐಆರ್‌ ಪ್ರಕ್ರಿಯೆಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಆಗ್ರಹ

ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಎಸ್‌ಐಆರ್‌ ಪ್ರಕ್ರಿಯೆ ಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಿ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಬೇಕು. ಮತದಾನದ ಹಕ್ಕು ಸಂವಿಧಾನಬದ್ಧ ಹಕ್ಕಾಗಿದ್ದು, ಆಡಳಿತಾ ತ್ಮಕ ಲೋಪಗಳಿಂದ ಯಾರಿಗೂ ಅನ್ಯಾಯವಾಗದಂತೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು

Ruthutare scheme: ಮಹಿಳೆಯರಿಗಾಗಿ ‘ಋತುತಾರೆ’ ಯೋಜನೆ ಘೋಷಿಸಿದ ರಾಜ್ಯ ಸರ್ಕಾರ; ನಟಿ ರಮ್ಯಾ ರಾಯಭಾರಿ

ಮಹಿಳೆಯರಿಗಾಗಿ ‘ಋತುತಾರೆ’ ಯೋಜನೆ ಜಾರಿ; ನಟಿ ರಮ್ಯಾ ರಾಯಭಾರಿ

ಮಹಿಳೆಯರಿಗಾಗಿ ವಿಶೇಷ ಆರೋಗ್ಯ ನೀತಿ ರೂಪಿಸಲಾಗುತ್ತಿದ್ದು, ʻಋತುತಾರೆʼ ಅಥವಾ ʻಋತುಬಂಧʼ ಎಂಬ ಹೆಸರಿನ ಯೋಜನೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತರಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್‌ ತಿಳಿಸಿದ್ದಾರೆ.

Shidlaghatta News: ವೇದಘೋಷ ಮೊಳಗಿದ ಶ್ರೀ ನಗರೇಶ್ವರ ಸ್ವಾಮಿ ಸನ್ನಿಧಿ: ಲೋಕ ಕಲ್ಯಾಣ, ವಿಶ್ವಶಾಂತಿ ಹಾಗೂ ರೈತರ ಸಮೃದ್ಧಿಗೆ ವಿಶೇಷ ವೇದಪಾರಾಯಣ

ವೇದಘೋಷ ಮೊಳಗಿದ ಶ್ರೀ ನಗರೇಶ್ವರ ಸ್ವಾಮಿ ಸನ್ನಿಧಿ

ವೇದೋ ನಿತ್ಯಮಧೀಯತಾಂ" ಎಂಬ ಸಂದೇಶವು ವೇದ ಅಧ್ಯಯನ ಹಾಗೂ ಧಾರ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮಹತ್ವವನ್ನು ಸಾರುತ್ತದೆ. ವೇದಮಂತ್ರಗಳ ಪಾರಾಯಣವು ಲೋಕ ಕಲ್ಯಾಣ, ವಿಶ್ವ ಶಾಂತಿ, ಸಕಾಲಿಕ ಮಳೆ ಹಾಗೂ ರೈತರ ಸಮೃದ್ಧಿಗಾಗಿ ಸಲ್ಲಿಸುವ ಮಹಾಯಜ್ಞವಾಗಿದ್ದು, ಇಂತಹ ಕಾರ್ಯಕ್ರಮಗಳು ಸನಾತನ ಧರ್ಮದ ಪರಂಪರೆಯನ್ನು ಉಳಿಸಿ ಧಾರ್ಮಿಕ ಜಾಗೃತಿ ಮೂಡಿಸು ತ್ತವೆ

Nagarjuna College of Engineering and Technology: ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿಗೆ ₹25 ಲಕ್ಷ ಸಂಶೋಧನಾ ಅನುದಾನ

ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿಗೆ ₹25 ಲಕ್ಷ ಸಂಶೋಧನಾ ಅನುದಾನ

ಮೂರು ವರ್ಷಗಳ ಅವಧಿಯಲ್ಲಿ ಸೂಪರ್ ಎಲಾಸ್ಟಿಸಿಟಿ ಮತ್ತು ಅದರ ಇಂಜಿನಿಯರಿಂಗ್ ಕ್ಷೇತ್ರದಲ್ಲಿನ ಅನ್ವಯಗಳ ಕುರಿತು ಸಂಶೋಧನೆ ಕೈಗೊಳ್ಳಲು ಈ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ. ಕೈಗಾರಿಕಾ ಸಹಭಾಗಿತ್ವದೊಂದಿಗೆ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಸಲು ಇದು ನೆರವಾಗಲಿದೆ ಎಂದು ಡಾ. ಮಹೇಶ್ ಕೆ.ಕೆ. ತಿಳಿಸಿದ್ದಾರೆ.

KSRTC: ಕೆಎಸ್‌ಆರ್‌ಟಿಸಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್. ಕೊಂಡಪ್ಪರಿಗೆ ಆತ್ಮೀಯ ಬೀಳ್ಕೊಡುಗೆ

ಮಾಜಿ ಅಧ್ಯಕ್ಷ ಎಚ್. ಕೊಂಡಪ್ಪರಿಗೆ ಆತ್ಮೀಯ ಬೀಳ್ಕೊಡುಗೆ

ಸಮಾರಂಭದಲ್ಲಿ ಘಟಕ ವ್ಯವಸ್ಥಾಪಕ ಸಚಿನ್, ಸಿಬ್ಬಂದಿ ಮೇಲ್ವಿಚಾರಕರಾದ ಶಿವಣ್ಣ, ಮೈಲಾರಪ್ಪ, ಕಾರ್ಮಿಕ ಮುಖಂಡರಾದ ಮುನಿಕೃಷ್ಣಪ್ಪ, ಸರ್ವಣ ಚೆನ್ನರಾಯಪ್ಪ, ಬುಲೆಟ್ ನಾಗರಾಜ್, ಶಿವಲಿಂಗಯ್ಯ, ಮುರಳಿ ಮೋಹನ್, ಶಶಿಕುಮಾರ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್. ಕೊಂಡಪ್ಪ ಅವರನ್ನು ಸನ್ಮಾನಿಸಿ, ಅವರ ಸೇವೆಯನ್ನು ಸ್ಮರಿಸಿದರು.

Karnataka State Junior Athletics Championship: ಕರ್ನಾಟಕ ರಾಜ್ಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಜಿಲ್ಲಾ ತಂಡ ಆಯ್ಕೆ

ರಾಜ್ಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಜಿಲ್ಲಾ ತಂಡ ಆಯ್ಕೆ

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇದೇ ತಿಂಗಳ 11 ಮತ್ತು 12ರಂದು ನಡೆಯಲಿರುವ ರಾಜ್ಯ ಮಟ್ಟದ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ 14, 16, 18 ಹಾಗೂ 20 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ತಂಡವನ್ನು ಆಯ್ಕೆ ಮಾಡಲಾಗುತ್ತಿದೆ. ಜಿಲ್ಲಾ ಮಟ್ಟದ ಆಯ್ಕೆ ಸ್ಪರ್ಧೆಯು ಆ.6ರಂದು ಬೆಳಿಗ್ಗೆ 10 ಗಂಟೆಗೆ ಚಿಕ್ಕಬಳ್ಳಾಪುರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯ ಲಿದ್ದು, ಜಿಲ್ಲೆಯ ಅರ್ಹ ಕ್ರೀಡಾಪಟುಗಳು ಭಾಗವಹಿಸುವಂತೆ ಕೋರಲಾಗಿದೆ.

Bengaluru India Nano 2026: ಬೆಂಗಳೂರನ್ನು ಜಾಗತಿಕ 'ಡೀಪ್-ಟೆಕ್' ರಾಜಧಾನಿಯಾಗಿ ಮಾಡುವ ಗುರಿ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರನ್ನು ಜಾಗತಿಕ 'ಡೀಪ್-ಟೆಕ್' ರಾಜಧಾನಿಯಾಗಿ ಮಾಡುವ ಗುರಿ: ಸಿಎಂ

CM DK Shivakumar: ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ 14ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನದಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿದ್ದಾರೆ. ಬೆಂಗಳೂರು ಭಾರತವನ್ನು ಜಾಗತಿಕ ಐಟಿ ಭೂಪಟದಲ್ಲಿ ನಿಲ್ಲಿಸಿದೆ. ಈಗ ಭಾರತವನ್ನು ಜಾಗತಿಕ 'ಡೀಪ್-ಟೆಕ್' ಭೂಪಟದಲ್ಲಿ ನಿಲ್ಲಿಸುವ ಸಮಯ ಬಂದಿದೆ. ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಹೇಳಿದ್ದಾರೆ.

Chinthamani News: ನಿಯಮಿತ ಮಣ್ಣು ಪರೀಕ್ಷೆಯಿಂದ ವೆಚ್ಚ ಕಡಿಮೆ, ಆದಾಯ ಹೆಚ್ಚಳ: ಕೃಷಿ ವಿಜ್ಞಾನಿಗಳ ಸಲಹೆ

ಪ್ರಾತ್ಯಕ್ಷಿಕೆ ಮೂಲಕ ಮಣ್ಣು ಪರೀಕ್ಷೆಯ ಮಹತ್ವ ಸಾರಿದ ವಿದ್ಯಾರ್ಥಿಗಳು

ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಿರುನಾಟಕ, ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಚಿತ್ರಗಳ ಮೂಲಕ ಮಣ್ಣಿನ ಮಾದರಿ ಸಂಗ್ರಹಣೆ, ಪರೀಕ್ಷೆ ನಡೆಸುವ ವಿಧಾನ ಮತ್ತು ಮಣ್ಣಿನ ಆರೋಗ್ಯ ಕಾಪಾಡುವ ಕ್ರಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿದರು.

GKVK students Protest: ಜಿಕೆವಿಕೆ ವಿದ್ಯಾರ್ಥಿಗಳ ಪ್ರತಿಭಟನೆ; ಕೃಷಿ ಅಧಿಕಾರಿಗಳ ನೇಮಕಾತಿ ಗೊಂದಲ ಬಗೆಹರಿಸುವ ಭರವಸೆ ನೀಡಿದ ಸಿಎಂ

ಕೃಷಿ ಅಧಿಕಾರಿಗಳ ನೇಮಕಾತಿ ಗೊಂದಲ ಬಗೆಹರಿಸಲು ಸಿಎಂ ಸೂಚನೆ

ಕೃಷಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಲು ಆಗ್ರಹಿಸಿ ಬೆಂಗಳೂರಿನಲ್ಲಿ ಜಿಕೆವಿಕೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಸಿಎಂ ಡಿ.ಕೆ.ಶಿವಕುಮಾರ್‌ ಅವರು, ನಿಮಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಆರ್ಡರ್ ಮಾಡದೇ ಇದ್ದರೂ ತಲುಪಿದ ಪಾರ್ಸೆಲ್: ಬೆಂಗಳೂರಿನಲ್ಲಿ 500 ರುಪಾಯಿಯ ಕ್ಯಾಶ್-ಆನ್-ಡೆಲಿವರಿ ಸ್ಕ್ಯಾಮ್; ಏನಿದು ಮೋಸದ ಜಾಲ? ಹೇಗೆ ಕಾರ್ಯ ನಿರ್ವಹಿಸುತ್ತೆ?

500 ರುಪಾಯಿ ಕ್ಯಾಶ್-ಆನ್-ಡೆಲಿವರಿ ಸ್ಕ್ಯಾಮ್ ಬಗ್ಗೆ ಎಚ್ಚರಿಸಿದ ಯುವತಿ

Viral Video: ಇಂದು ಆನ್‌ಲೈನ್ ವ್ಯವಹಾರದಲ್ಲಿ ಮೋಸದ ಜಾಲ ಹೆಚ್ಚಾಗಿದ್ದು, ಹಣವನ್ನು ಕಳುಹಿಸುವ ಮುನ್ನ ಸರಿಯಾಗಿ ಪರಿಶೀಲಿಸಬೇಕಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ಹೊಸ ಸ್ಕ್ಯಾಮ್‌ ನಡೆಯುತ್ತಿದೆ. ಯುವತಿಯೊಬ್ಬರು ಯಾವುದೇ ವಸ್ತು ಆರ್ಡರ್ ಮಾಡದೇ ಇದ್ದರೂ ಅವರ ಹೆಸರಿಗೆ ಹಾಗೂ ವಿಳಾಸಕ್ಕೆ 500 ರುಪಾಯಿ ಮೌಲ್ಯದ ಪಾರ್ಸಲ್ ಬಂದಿದೆ. ಈ ವಂಚನೆಯ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಎಚ್ಚರಿಕೆ ನೀಡಿದ್ದಾರೆ.

Karnataka Cabinet Expansion: ರಾಜೀನಾಮೆ ನೀಡಿದ್ರೆ ಕ್ಷಣದಲ್ಲಿ ಅಂಗೀಕಾರ; ಅತೃಪ್ತ ಶಾಸಕರಿಗೆ ಸಿಎಂ ಡಿಕೆಶಿ ಎಚ್ಚರಿಕೆ

ರಾಜೀನಾಮೆ ನೀಡಿದ್ರೆ ಕ್ಷಣದಲ್ಲಿ ಅಂಗೀಕಾರ; ಶಾಸಕರಿಗೆ ಸಿಎಂ ಎಚ್ಚರಿಕೆ

ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕೆಲವು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರಲ್ಲ ಎಂಬ ಪ್ರಶ್ನೆಗೆ ಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ. "ನನಗೆ ಹಾಗೂ ಪರಮೇಶ್ವರ್ ಅವರಿಗೆ ಧರಂಸಿಂಗ್, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವ ಸ್ಥಾನ ತಪ್ಪಿಸಿದರು. ಆಗ ನಾನೂ ರಾಜೀನಾಮೆ ಕೊಡಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದ್ದಾರೆ.

Mandya News: ಕಾರು ಅಪಘಾತದಲ್ಲಿ ಯುವತಿ ಅನುಮಾನಾಸ್ಪದ ಸಾವು; ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಆರೋಪ!

ಯುವತಿ ಅನುಮಾನಾಸ್ಪದ ಸಾವು; ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಆರೋಪ!

ಹುಟ್ಟುಹಬ್ಬ ಆಚರಣೆ ನೆಪದಲ್ಲಿ ಮಗಳನ್ನು ಕರೆದೊಯ್ದ ಸ್ನೇಹಿತರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಮಗಳು ಅದಕ್ಕೆ ಒಪ್ಪದಿದ್ದಾಗ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾವಗಡದ ಮಣಪ್ಪುರಂ ಗೋಲ್ಡ್ ಲೋನ್ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್‌; ದಾಖಲೆಗಳು ಬೆಂಕಿಗಾಹುತಿ

ಪಾವಗಡದ ಮಣಪ್ಪುರಂ ಗೋಲ್ಡ್ ಲೋನ್ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್‌

Pavagada News: ಪಾವಗಡ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪವಿರುವ ಮಣಪ್ಪುರಂ ಗೋಲ್ಡ್ ಲೋನ್ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರುವ ಘಟನೆ ಮಂಗಳವಾರ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಚೇರಿಯಲ್ಲಿದ್ದ ಕೆಲವು ದಾಖಲೆಗಳು ಹಾಗೂ ಕಡತಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ.

Adigas Yatra: ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರ-ಖಾಸಗಿ ಸಂಸ್ಥೆಗಳು ಕೈ ಜೋಡಿಸಬೇಕು: ನಾಗರಾಜ ಅಡಿಗ

ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರ-ಖಾಸಗಿ ಸಂಸ್ಥೆಗಳು ಕೈ ಜೋಡಿಸಬೇಕು

Tourism Development: ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣ ನಿರ್ಮಿಸಲು ಸಾಧ್ಯ. ಆದ್ದರಿಂದ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಕೈ ಜೋಡಿಸಬೇಕಾದ ಅವಶ್ಯಕತೆ ಇದೆ ಎಂದು ಅಡಿಗಾಸ್‌ ಯಾತ್ರಾ ಮುಖ್ಯ ವ್ಯವಸ್ಥಾಪಕ ನಾಗರಾಜ ಅಡಿಗ ಅವರು ತಿಳಿಸಿದ್ದಾರೆ.

ಕೈತಪ್ಪಿದ ಸಚಿವ ಸ್ಥಾನ; ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಎಸ್‌.ಆರ್. ಶ್ರೀನಿವಾಸ್‌ ರಾಜೀನಾಮೆ ಘೋಷಣೆ

ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ಎಸ್‌.ಆರ್. ಶ್ರೀನಿವಾಸ್‌ ರಾಜೀನಾಮೆ

Karnataka cabinet expansion: ಜನ ನನಗೆ ಸಚಿವ ಸ್ಥಾನ ಕೊಡಬೇಕು ಎಂದು ಕೇಳುತ್ತಾರೆ. ಆದರೆ ರಾಜಕೀಯದಲ್ಲಿ ನಮ್ಮಂಥ ಸಾಮಾನ್ಯ ರೈತನ ಮಗ ಮೇಲೆ ಬರೋದು ಕಷ್ಟ. ನಮಗೆ ಯೋಗ್ಯತೆ ಇಲ್ಲ ಅಂತ ಅರ್ಥ. ಹಾಗಾಗಿ ಸಚಿವ ಸ್ಥಾನ ತಪ್ಪಿದೆ ಎಂದು ಗುಬ್ಬಿ ಶಾಸಕ ಎಸ್‌.ಆರ್.ಶ್ರೀನಿವಾಸ್‌ ಬೇಸರ ಹೊರಹಾಕಿದ್ದಾರೆ.

Utthana Katha Spardhe 2026: ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ-2026ಕ್ಕೆ ಕಥೆಗಳ ಆಹ್ವಾನ; ಅ.10 ಕೊನೆಯ ದಿನ

ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಕಥೆಗಳ ಆಹ್ವಾನ

Utthana Katha Spardhe 2026: ಉತ್ಥಾನ ಮಾಸಪತ್ರಿಕೆಯು ಕಳೆದ 6 ದಶಕಗಳಿಂದ ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿಯ 2026ನೇ ಸಾಲಿನ ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಕಥೆಯನ್ನು ಆಹ್ವಾನಿಸಲಾಗಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಶಾಸಕರಿಗೆ ʼವಿಆರ್‌ಎಸ್ʼ ದಾರಿ ತೋರಿದ ಕಾಂಗ್ರೆಸ್

ಶಾಸಕರಿಗೆ ʼವಿಆರ್‌ಎಸ್ʼ ದಾರಿ ತೋರಿದ ಕಾಂಗ್ರೆಸ್

ಎರಡು ತಿಂಗಳ ವಿಳಂಬದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ನಿರೀಕ್ಷೆಯಂತೆ ಅನೇಕ ಸಂಪುಟದಿಂದ ಕೊಕ್ ನೀಡಲಾಗಿದ್ದು, ಇದು ಅನಿರೀಕ್ಷಿತವೇ ಆಗಿದೆ. ಆದರೆ ಮತ್ತೊಂದು ದಿಢೀರ್ ಬೆಳವಣಿಗೆ ಎಂದರೆ, ಶಾಸಕರ ರಾಜ ಕೀಯ ಸ್ವಯಂ ನಿವೃತ್ತಿ, ಅಂದರೆ ಸಂಪುಟ ವಿಸ್ತರಣೆ ಯ ಪರಿಣಾಮ ಸುಮಾರು 15ಕ್ಕೂ ಹೆಚ್ಚು ಶಾಸಕರು ಇದೀಗ ಸ್ವಯಂ ನಿವೃತ್ತಿ ಹಾದಿಯಲಿದ್ದಾರೆ.

ಸಭಾಪತಿ ಸ್ಥಾನಕ್ಕೂ ಸಾಂವಿಧಾನಿಕ ಸಂಕಟ

ಸಭಾಪತಿ ಸ್ಥಾನಕ್ಕೂ ಸಾಂವಿಧಾನಿಕ ಸಂಕಟ

ಸಭಾಪತಿ ಹಾಗೂ ಉಪಸಭಾಪತಿಗಳಾಗಿ ಸಲೀಂ ಅಹಮದ್ ಹಾಗೂ ಉಮಾಶ್ರೀ ಅವರ ಹೆಸರುಗಳು ಮುಂಚೂಣಿಗೆ ಬಂದಿದ್ದರೂ, ಬಸವರಾಜ್ ಹೊರಟ್ಟಿ ಅವರ ಕಾನೂನಾತ್ಮಕ ನಿಲುವಿನಿಂದ ಮೇಲ್ಮನೆ ಯ ಸಭಾಪತಿ ಗಾದಿಯ ಬದಲಾವಣೆ ಪ್ರಕ್ರಿಯೆ ಅಷ್ಟು ಸುಲಭವಾಗಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ. ಸಭಾಪತಿ ಸ್ಥಾನಕ್ಕೆ ಸಂಬಂಧಿಸಿದಂತೆ ಕಠಿಣ ಸಂಸದೀಯ ನಿಯಮಗಳಿವೆ.

ತಾಳ್ಮೆ ಇರಲಿ, ಎಲ್ಲರಿಗೂ ಅವಕಾಶ ಸಿಗಲಿದೆ: 133 ಶಾಸಕರೂ ಸಚಿವರಾಗಲೂ ಅರ್ಹರು: ಸಿಎಂ ಡಿಕೆ ಶಿವಕುಮಾರ್

ತಾಳ್ಮೆ ಇರಲಿ, ಎಲ್ಲರಿಗೂ ಅವಕಾಶ ಸಿಗಲಿದೆ

ಒಂದು ಅವಧಿಯಲ್ಲಿ ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ ಎಂದರು. ನೂತನ ವಾಗಿ ಅಧಿಕಾರ ಸ್ವೀಕರಿಸಿರುವ ಸಚಿವರಿಗೆ ವಿಶ್ರಮಿಸುವ ಸಮಯವಿಲ್ಲ. ಎಲ್ಲ ಸಚಿವರಿಗೆ ಬೆಂಗಳೂರಿ ನಲ್ಲಿ ತಮ್ಮ ಕೆಲಸಗಳನ್ನು ಮುಗಿಸಲು ಕೇವಲ ಒಂದು ದಿನದ ಕಾಲಾವಕಾಶ ನೀಡಲಾಗಿದೆ. ಮರುದಿನ ದಿಂದಲೇ ಅವರು ತಮಗೆ ನಿಯೋಜಿಸಲಾದ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರಾಗಿ, ಕ್ಷೇತ್ರ ಭೇಟಿ ಮಾಡುವುದು ಅವರ ಪ್ರಮುಖ ಜವಾಬ್ದಾರಿಯಾಗಿದೆ.

Loading...