ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹಾರಾಣಿ ಟ್ರೋಫಿ ಹರಾಜು; ನಿಕಿ ಪ್ರಸಾದ್‌ ದುಬಾರಿ ಆಟಗಾರ್ತಿ

ಲೀಗ್ ಹಂತದ ಪಂದ್ಯಗಳು ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿವೆ. ಫೈನಲ್ ಪಂದ್ಯ (ಆ 10) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ. ಅದಿತಿ ರಾಜೇಶ್ (1.50 ಲಕ್ಷ), ಕಂಡಿಕುಪ್ಪಾ ಕಾಶ್ವಿ (1.55 ಲಕ್ಷ), ಚಾಂದಸೀ ಕೃಷ್ಣಮೂರ್ತಿ (70 ಸಾವಿರ) ಮತ್ತು ಪುಷ್ಪಾ ಕಿರೇಸೂರ್ (40 ಸಾವಿರ) ಅವರು ಬೆಂಗಳೂರು ಬ್ಲಾಸ್ಟರ್ ಪಾಲಾದರು.

ಮಹಾರಾಣಿ ಟ್ರೋಫಿ ಹರಾಜು; ನಿಕಿ ಪ್ರಸಾದ್‌ ದುಬಾರಿ ಆಟಗಾರ್ತಿ

Profile Abhilash BC Jul 30, 2025 9:04 AM

ಬೆಂಗಳೂರು: ಮಹಾರಾಣಿ ಟ್ರೋಫಿ(Maharani T20 Trophy 2025) ಕ್ರಿಕೆಟ್‌ನ ಚೊಚ್ಚಲ ಆವೃತ್ತಿಗಾಗಿ ನಡೆದ ಹರಾಜಿನಲ್ಲಿ ಭಾರತ ಅಂಡರ್‌-19 ಟಿ20 ಮಹಿಳೆಯರ ತಂಡದ ನಾಯಕಿ ನಿಕಿ ಪ್ರಸಾದ್(Niki Prasad) ಅತಿ ಹೆಚ್ಚು ಮೌಲ್ಯ ಗಳಿಸಿದರು. ಅವರು 3.70 ಲಕ್ಷ ರೂ.ಗೆ ಬೆಂಗಳೂರು ಬ್ಲಾಸ್ಟರ್ ಪಾಲಾದರು. ಶುಭಾ ಸತೀಶ್‌ 2ನೇ ದುಬಾರಿ ಆಟಗಾರ್ತಿ ಎನಿಸಿದರು. ಅವರನ್ನು ಮೈಸೂರು ವಾರಿಯರ್ ತಂಡ 3.10 ಲಕ್ಷ ರೂ.ಗೆ ಖರೀದಿಸಿತು. 3 ಲಕ್ಷ ರೂ.ಗೆ ಶಿವಮೊಗ್ಗ ಲಯನೆಸ್‌ ಪಾಲಾದ ಮಿಥಿಲಾ ವಿನೋದ್‌ 3ನೇ ದುಬಾರಿ ಆಟಗಾರ್ತಿ. ರಾಜೇಶ್ವರಿ ಗಾಯಕ್ವಾಡ್‌ ಒಂದು ಲಕ್ಷ ರೂ.ಗೆ ಹುಬ್ಳಿ ಟೈಗರ್ ಸೇರಿಕೊಂಡರು.

ಟೂರ್ನಿಯಲ್ಲಿ ಭಾಗವಹಿಸುವ ಒಟ್ಟು ಐದು ತಂಡಗಳೂ ತಲಾ 16 ಆಟಗಾರ್ತಿಯರನ್ನು ಖರೀದಿಸಿದವು. ಪ್ರತಿ ಫ್ರ್ಯಾಂಚೈಸಿಯು ತಲಾ 10 ಲಕ್ಷದ ಪರ್ಸ್‌ ಹೊಂದಿದ್ದವು. ಆಗಸ್ಟ್ 4ರಿಂದ 10ರವರೆಗೆ ಮಹಾರಾಣಿ ಟ್ರೋಫಿ ಟೂರ್ನಿಯು ನಡೆಯಲಿದೆ.

ಲೀಗ್ ಹಂತದ ಪಂದ್ಯಗಳು ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿವೆ. ಫೈನಲ್ ಪಂದ್ಯ (ಆ 10) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ. ಅದಿತಿ ರಾಜೇಶ್ (1.50 ಲಕ್ಷ), ಕಂಡಿಕುಪ್ಪಾ ಕಾಶ್ವಿ (1.55 ಲಕ್ಷ), ಚಾಂದಸೀ ಕೃಷ್ಣಮೂರ್ತಿ (70 ಸಾವಿರ) ಮತ್ತು ಪುಷ್ಪಾ ಕಿರೇಸೂರ್ (40 ಸಾವಿರ) ಅವರು ಬೆಂಗಳೂರು ಬ್ಲಾಸ್ಟರ್ ಪಾಲಾದರು.

ಮಂಗಳೂರು ಡ್ರ್ಯಾಗನ್ಸ್‌ ಫ್ರ್ಯಾಂಚೈಸಿಯು ಲಿಯಾಂಕಾ ಶೆಟ್ಟಿ (2. 25 ಲಕ್ಷ), ಪ್ರತ್ಯೂಷಾ ಕುಮಾರ್ (1.80ಲಕ್ಷ) ಮತ್ತು ಸಿ.ಯು. ಇಂಚರಾ (1.55 ಲಕ್ಷ), ಕಾರ್ಣಿಕಾ ಕಾರ್ತಿಕ್ (1.25ಲಕ್ಷ) ಮತ್ತು ಪಿ. ಸಲೋನಿ (85 ಸಾವಿರ) ಅವರನ್ನು ಸೇರ್ಪಡೆ ಮಾಡಿಕೊಂಡಿತು.

ಶಿವಮೊಗ್ಗ ಲಯನೆಸ್ ತಂಡವು ಮಿಥಿಲಾ ವಿನೋದ್ (3 ಲಕ್ಷ), ಲಾವಣ್ಯ ಚಲನಾ (1.45 ಲಕ್ಷ), ರೋಶಿನಿ ಕಿರಣ್ (1.30ಲಕ್ಷ) ಮತ್ತು ಸೌಮ್ಯ ವರ್ಮಾ (1.05 ಲಕ್ಷ), ಶ್ರೀನಿಥಿ ಪಿ ರೈ (80 ಸಾವಿರ) ಅವರನ್ನು ಖರೀದಿ ಮಾಡಿಕೊಂಡಿತು.

ಇದನ್ನೂ ಓದಿ IND vs ENG: ಓವಲ್‌ನ ಐದನೇ ಟೆಸ್ಟ್‌ ಪಂದ್ಯದಲ್ಲಿ ಅರ್ಷದೀಪ್‌ ಸಿಂಗ್‌ ಆಡುವುದು ಪಕ್ಕಾ!