IND vs ENG: ಓವಲ್‌ನ ಐದನೇ ಟೆಸ್ಟ್ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಆಡುವುದು ಪಕ್ಕಾ!
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಲಂಡನ್‌ನ ಕೆನಿಂಗ್ಟನ್ ಓವಲ್‌ನಲ್ಲಿ ಜುಲೈ 31 ರಂದು ಆರಂಭವಾಗುವ ಐದನೇ ಟೆಸ್ಟ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಭಾರತ ತಂಡದ ಪರ ಎಡಗೈ ವೇಗಿ ಅರ್ಷದೀಪ್ ಸಿಂಗ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆಂದು ಹೇಳಲಾಗುತ್ತಿದೆ.

ಕೆನಿಂಗ್ಟನ್ ಓವಲ್‌ನಲ್ಲಿ ಅರ್ಷದೀಪ್ ಸಿಂಗ್ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.

ಲಂಡನ್: ಭಾರತ ಕ್ರಿಕೆಟ್ ತಂಡ (India) ಗುರುವಾರದಿಂದ (ಜುಲೈ 31) ಆರಂಭವಾಗುವ 5 ಪಂದ್ಯಗಳ ಟೆಸ್ಟ್ ಸರಣಿಯ (IND vs ENG) ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಈ ಪಂದ್ಯಕ್ಕೂ ಮುನ್ನ, ಟೀಮ್ ಇಂಡಿಯಾದಲ್ಲಿ ನಿರಂತರ ಬದಲಾವಣೆಯ ಸುದ್ದಿ ಇದೆ. ವಿಶೇಷವಾಗಿ ಸ್ಟಾರ್ ಬೌಲರ್ ತಂಡವನ್ನು ಸೇರಬಹುದು. ವರದಿಗಳ ಪ್ರಕಾರ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಅರ್ಷ್‌ದೀಪ್ ಸಿಂಗ್ (Arshdeep Singh) ಅವರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಅಂದ ಹಾಗೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿಯೂ ಆಡಬೇಕಾಗಿತ್ತು. ಆದರೆ, ಅವರು ಗಾಯಕ್ಕೆ ತುತ್ತಾದ ಕಾರಣ ಆಡಲು ಸಾಧ್ಯವಾಗಿಲ್ಲ.
ಮ್ಯಾಂಚೆಸ್ಟರ್ ಟೆಸ್ಟ್ ನಿಮಿತ್ತ ಅಭ್ಯಾಸ ನಡೆಸುತ್ತಿದ್ದ ವೇಳೆ ಅರ್ಷ್‌ದೀಪ್ ಸಿಂಗ್ ಕೈಗೆ ಗಾಯವಾಗಿದ್ದು, ಹೊಲಿಗೆ ಹಾಕಬೇಕಾಯಿತು. ಬೌಲ್ ಮಾಡಿದ ಬಳಿಕ ಚೆಂಡು ತಡೆಯುವ ವೇಳೆ ಅವರ ಕೈಗೆ ಗಾಯ ಮಾಡಿಕೊಂಡಿದ್ದರು. ಇದೀಗ ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಮತ್ತು ಅಭ್ಯಾಸದ ಅವಧಿಯಲ್ಲಿ ಅವರು ಪೂರ್ಣ ಪ್ರಮಾಣದ ವೇಗದಲ್ಲಿ ಬೌಲ್ ಮಾಡಿದ್ದರು. ಭಾರತ ತಂಡದ ಟೀಮ್ ಮ್ಯಾನೇಜ್‌ಮೆಂಟ್ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಅವರನ್ನು ಆಡಿಸಲು ಬಯಸಿತ್ತು ಆದರೆ ಗಾಯದ ಕಾರಣ ಅವರು ಮ್ಯಾಂಚೆಸ್ಟರ್‌ನಲ್ಲಿ ಲಭ್ಯವಿರಲಿಲ್ಲ. ಆದರೆ ಈಗ ಟೀಮ್ ಇಂಡಿಯಾದ ಬೌಲಿಂಗ್ ಘಟಕದಲ್ಲಿ ಬದಲಾವಣೆಯಾಗಲಿದೆ. ಅರ್ಷ್‌ದೀಪ್ ಚೆಂಡನ್ನು ಉತ್ತಮ ರೀತಿಯಲ್ಲಿ ಸ್ವಿಂಗ್ ಮಾಡುವ ಕಲೆಯನ್ನು ಹೊಂದಿದ್ದಾರೆ. ಹಾಗಾಗಿ ಅವರಿಗೆ ಅವಕಾಶ ನೀಡಲಾಗಿದೆ.
IND vs ENG: 5ನೇ ಟೆಸ್ಟ್‌ಗೂ ಮುನ್ನ ಓವಲ್ ಪಿಚ್ ಕ್ಯುರೇಟರ್ ವಿರುದ್ಧ ಗೌತಮ್ ಗಂಭೀರ್ ಕಿರಿಕ್!
ಅರ್ಷದೀಪ್ ಸಿಂಗ್ ಈಗಾಗಲೇ ಭಾರತ ಪರ 63 ಟಿ20ಐ ಮತ್ತು 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಅವರು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು ಮತ್ತು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು. ಫೈನಲ್‌ನಲ್ಲಿ ಅವರು 19 ನೇ ಓವರ್ ಬೌಲ್ ಮಾಡಿ ಕೇವಲ 4 ರನ್‌ಗಳನ್ನು ನೀಡಿ ಭಾರತದ ಗೆಲುವನ್ನು ಖಚಿತಪಡಿಸಿದ್ದರು. ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗುವ ಮೊದಲೇ, ಅರ್ಷದೀಪ್ ಸಿಂಗ್ ಟೆಸ್ಟ್ ಕ್ರಿಕೆಟ್‌ನತ್ತ ಕಣ್ಣು ಹಾಕಿದ್ದರು. ಕಳೆದ ಒಂದು ತಿಂಗಳಿನಿಂದ, ಅವರು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರೊಂದಿಗೆ ತಮ್ಮ ಬೌಲಿಂಗ್‌ನಲ್ಲಿ ಶ್ರಮಿಸಿದ್ದಾರೆ.
IND vs ENG: ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ತಮ್ಮ ನೆಚ್ಚಿನ ಇನಿಂಗ್ಸ್ ಹೆಸರಿಸಿದ ಶುಭಮನ್ ಗಿಲ್!
ಭಾರತದ ಪ್ಲೇಯಿಂಗ್ XIನಲ್ಲಿ ಬದಲಾವಣೆ ಸಾಧ್ಯತೆ
ಪಂಜಾಬ್ ಪರ ಅರ್ಷದೀಪ್ ಸಿಂಗ್ ಉತ್ತಮ ಪ್ರಥಮ ದರ್ಜೆ ದಾಖಲೆಯನ್ನು ಹೊಂದಿದ್ದಾರೆ. 21 ಟೆಸ್ಟ್ ಪಂದ್ಯಗಳಲ್ಲಿ ಈ ಎಡಗೈ ವೇಗದ ಬೌಲರ್ 30ರ ಸರಾಸರಿಯಲ್ಲಿ 66 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕೆಂಟ್ ಪರ ಕೌಂಟಿ ಕ್ರಿಕೆಟ್ ಆಡಿದ ಅವರ ಅನುಭವವೂ ಸಹಾಯವಾಗಬಹುದು. ಮ್ಯಾಂಚೆಸ್ಟರ್‌ನಲ್ಲಿ ನಿರಾಶಾದಾಯಕ ಆರಂಭದ ನಂತರ, ಅನ್ಶುಲ್ ಕಾಂಬೋಜ್ ಆಡುವ XI ನಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ. ಶಾರ್ದುಲ್ ಠಾಕೂರ್ ಅವರ ಉಪಯುಕ್ತತೆಯೂ ಪ್ರಶ್ನಾರ್ಹವಾಗಿದೆ. ಟೀಮ್ ಮ್ಯಾನೇಜ್‌ಮೆಂಟ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸದಿದ್ದರೆ, ಅರ್ಷದೀಪ್ ಸಿಂಗ್ ಮತ್ತು ಆಕಾಶ್ ದೀಪ್ ತಂಡಕ್ಕೆ ಬರುವುದು ಬಹುತೇಕ ಖಚಿತ.