MI vs PBKS: ಮುಂಬೈ ಮಣಿಸಿ ಹಲವು ದಾಖಲೆ ಬರೆದ ಪಂಜಾಬ್ ಕಿಂಗ್ಸ್
IPL 2026: ಪಂದ್ಯವನ್ನು ಗೆದ್ದ ಪಂಜಾಬ್ ಕಿಂಗ್ಸ್, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ನ ದಾಖಲೆಯನ್ನು ಸರಿಗಟ್ಟಿತು. ಉಭಯ ತಂಡಗಳೆರಡು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ತಲಾ 18 ಪಂದ್ಯಗಳನ್ನು ಗೆದ್ದಿವೆ.
Punjab Kings -
ಮುಂಬಯಿ, ಎ. 17: ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್(MI vs PBKS) ತಂಡವು ಪ್ರಸಕ್ತ ನಡೆಯುತ್ತಿರುವ ಐಪಿಎಲ್ (IPL 2026) 2026 ರಲ್ಲಿ ತಮ್ಮ ಅಭೂತಪೂರ್ವ ಪ್ರದರ್ಶನವನ್ನು ಮುಂದುವರಿಸಿದ್ದು, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 7 ವಿಕೆಟ್ ಅಂತರದ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ತಂಡ ಹಲವು ದಾಖಲೆಗಳನ್ನು ನಿರ್ಮಿಸಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯ 24 ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಮುಂಬೈ ತಂಡ 195 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಕೇವಲ 16.3 ಓವರ್‌ಗಳಲ್ಲಿ 198 ರನ್ ಬಾರಿಸಿ ಪಂದ್ಯವನ್ನು ಗೆದ್ದುಕೊಂಡಿತು.
ಚೆನ್ನೈ ದಾಖಲೆ ಸರಿಟ್ಟಿದ ಪಂಜಾಬ್
ಪಂದ್ಯವನ್ನು ಗೆದ್ದ ಪಂಜಾಬ್ ಕಿಂಗ್ಸ್, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ನ ದಾಖಲೆಯನ್ನು ಸರಿಗಟ್ಟಿತು. ಉಭಯ ತಂಡಗಳೆರಡು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ತಲಾ 18 ಪಂದ್ಯಗಳನ್ನು ಗೆದ್ದಿವೆ.
ಐಪಿಎಲ್‌ನಲ್ಲಿ ಮುಂಬೈ ವಿರುದ್ಧ ಅತಿ ಹೆಚ್ಚು ಗೆಲುವುಗಳು
18 - ಪಂಜಾಬ್ ಕಿಂಗ್ಸ್ (35 ಪಂದ್ಯಗಳು)*
18 - ಚೆನ್ನೈ ಸೂಪರ್ ಕಿಂಗ್ಸ್ (39 ಪಂದ್ಯಗಳು)
17 - ಡೆಲ್ಲಿ ಕ್ಯಾಪಿಟಲ್ಸ್ (38 ಪಂದ್ಯಗಳು)
16 - ಆರ್‌ಸಿಬಿ (35 ಪಂದ್ಯಗಳು)
15 - ರಾಜಸ್ಥಾನ್ ರಾಯಲ್ಸ್ (31 ಪಂದ್ಯಗಳು
MI vs PBKS: ಸತತ ನಾಲ್ಕು ಸೋಲು; ಸಹ ಆಟಗಾರರಿಗೆ ಎಚ್ಚರಿಕೆ ನೀಡಿದ ಹಾರ್ದಿಕ್ ಪಾಂಡ್ಯ
ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಮೊದಲ ತಂಡ ಎಂಬ ದಾಖಲೆಯೂ ಪಂಜಾಬ್ ತಂಡದ ಪಾಲಾಯಿತು. ಒಟ್ಟು 6 ಪಂದ್ಯಗಳನ್ನು ಗೆದ್ದಿದೆ. ಚೆನ್ನೈ ತಂಡ 5 ಬಾರಿ ಜಯಿಸಿದೆ.
ಐಪಿಎಲ್‌ನಲ್ಲಿ ವಾಂಖೆಡೆಯಲ್ಲಿ ಮುಂಬೈ ವಿರುದ್ಧ ಅತಿ ಹೆಚ್ಚು ಗೆಲುವುಗಳು
6 - ಪಿಬಿಕೆಎಸ್ (11 ಪಂದ್ಯಗಳು)*
5 - ಸಿಎಸ್‌ಕೆ (13 ಪಂದ್ಯಗಳು)
5 - ಆರ್‌ಸಿಬಿ (13 ಪಂದ್ಯಗಳು)
4 - ಆರ್‌ಆರ್ (9 ಪಂದ್ಯಗಳು)
ಸತತ 4 ಸೋಲು ಕಂಡ ಮುಂಬೈ
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ, ಕ್ವಿಂಟನ್ ಡಿ ಕಾಕ್ ಭರ್ಜರಿ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 195 ರನ್ ಗಳಿಸಿತು. 196ರ ಗುರಿ ಪಂಜಾಬ್‌ಗೆ ಕಷ್ಟವಾಗಲಿಲ್ಲ. ಪ್ರಭ್‌ಸಿಮ್ರನ್ ಸಿಂಗ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಮತ್ತೆ ತಂಡಕ್ಕೆ ಆಸರೆಯಾದರು. ಈ ಜೋಡಿ 3ನೇ ವಿಕೆಟ್‌ಗೆ 66 ಎಸೆತಗಳಲ್ಲಿ 139 ರನ್ ಜೊತೆಯಾಟವಾಡಿ ತಂಡವನ್ನು 16.3 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು. ಶ್ರೇಯಸ್ 35 ಎಸೆತಕ್ಕೆ 66 ರನ್ ಸಿಡಿಸಿದರೆ, ಪ್ರಭ್‌ಸಿಮ್ರನ್ 39 ಎಸೆತಗಳಲ್ಲಿ ಔಟಾಗದೆ 80 ರನ್ ಗಳಿಸಿದರು.