ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫಿಫಾ ವಿಶ್ವಕಪ್‌ನಿಂದ ಹೊರಬಿದ್ದ ಬ್ರೆಜಿಲ್; ನೇಮರ್ ಕಣ್ಣೀರಿನ ವಿದಾಯ

FIFA World Cup: 68ನೇ ನಿಮಿಷದಲ್ಲಿ ಮೈದಾನಕ್ಕಿಳಿದ ನೇಮಾರ್, ಹೆಚ್ಚುವರಿ( 90+10ನೇ ನಿಮಿಷ) ಸಮಯದಲ್ಲಿ ಗೋಲೊಂದನ್ನು ಬಾರಿಸಿದರು. ಈ ಒಂದು ಗೋಲಿನ ನೆರವಿನಿಂದ ಬ್ರೆಜಿಲ್ ಪರ ಸಾರ್ವಕಾಲಿಕ ಗರಿಷ್ಠ ಗೋಲು ಬಾರಿಸಿದ ಆಟಗಾರ ಎನಿಸಿದರು. ಬ್ರೆಜಿಲ್ ಪರ ಒಟ್ಟು 130 ಪಂದ್ಯಗಳಲ್ಲಿ 80 ಗೋಲು ಹಾಗೂ 59 ಅಸಿಸ್ಟ್‌ಗಳನ್ನು ದಾಖಲಿಸಿ, ಮಾಜಿ ದಿಗ್ಗಜ ಪೆಲೆ ಅವರ ದಾಖಲೆಯನ್ನು ಹಿಂದಿಕ್ಕಿದರು.

ಫಿಫಾ ವಿಶ್ವಕಪ್‌ನಿಂದ ಹೊರಬಿದ್ದ ಬ್ರೆಜಿಲ್; ನೇಮರ್ ಕಣ್ಣೀರಿನ ವಿದಾಯ

Neymar -

Abhilash BC
Abhilash BC Jul 6, 2026 8:20 AM

ನ್ಯೂಜೆರ್ಸಿ, ಜು.6: ಸೋಮವಾರ ನ್ಯೂಜೆರ್ಸಿಯಲ್ಲಿ ನಡೆದ ಫಿಫಾ ವಿಶ್ವಕಪ್‌(FIFA World Cup)ನ 16ನೇ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್ ತಂಡ ನಾರ್ವೆ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿತು. ಸೋಲಿನ ಬೆನ್ನಲ್ಲೇ ಬ್ರೆಜಿಲ್‌ನ ಸ್ಟಾರ್ ಆಟಗಾರ ನೇಮರ್ ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಘೋಷಿಸಿದರು. ಬ್ರೆಜಿಲ್‌ ತಂಡವು ನಾರ್ವೆ ವಿರುದ್ಧ 2-1 ಅಂತರದಿಂದ ಸೋಲಿನೊಂದಿಗೆ ಕೂಟದಿಂದ ಹೊರಬಿದ್ದಿತು. 1990ರ ಬಳಿಕ ಬ್ರೆಜಿಲ್ ತಂಡವು ಟೂರ್ನಿಯಿಂದ ಇಷ್ಟು ಬೇಗ ಹೊರಬಿದ್ದಿರುವುದು ಇದೇ ಮೊದಲ ಬಾರಿ.

68ನೇ ನಿಮಿಷದಲ್ಲಿ ಮೈದಾನಕ್ಕಿಳಿದ ನೇಮಾರ್, ಹೆಚ್ಚುವರಿ( 90+10ನೇ ನಿಮಿಷ) ಸಮಯದಲ್ಲಿ ಗೋಲೊಂದನ್ನು ಬಾರಿಸಿದರು. ಈ ಒಂದು ಗೋಲಿನ ನೆರವಿನಿಂದ ಬ್ರೆಜಿಲ್ ಪರ ಸಾರ್ವಕಾಲಿಕ ಗರಿಷ್ಠ ಗೋಲು ಬಾರಿಸಿದ ಆಟಗಾರ ಎನಿಸಿದರು. ಬ್ರೆಜಿಲ್ ಪರ ಒಟ್ಟು 130 ಪಂದ್ಯಗಳಲ್ಲಿ 80 ಗೋಲು ಹಾಗೂ 59 ಅಸಿಸ್ಟ್‌ಗಳನ್ನು ದಾಖಲಿಸಿ, ಮಾಜಿ ದಿಗ್ಗಜ ಪೆಲೆ ಅವರ ದಾಖಲೆಯನ್ನು ಹಿಂದಿಕ್ಕಿದರು. ನೇಮರ್ ಅವರ ವಿದಾಯದೊಂದಿಗೆ ಬ್ರೆಜಿಲ್ ಫುಟ್‌ಬಾಲ್‌ನ ಸುವರ್ಣ ಯುಗವೊಂದು ಅಂತ್ಯಗೊಂಡಂತಾಗಿದೆ. ಸೋಲಿನ ಆಘಾತದಲ್ಲಿ ಅವರು ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ದೃಶ್ಯವು ಅಭಿಮಾನಿಗಳನ್ನು ಭಾವುಕರನ್ನಾಗಿ ಮಾಡಿತು.



'ನಾನು ಸಾಕಷ್ಟು ಪ್ರಯತ್ನಿಸಿದೆ, ಆದರೆ ಈಗ ಎಲ್ಲವೂ ಮುಗಿದಿದೆ. ನಾನು ಎಲ್ಲಿಂದ ವೃತ್ತಿಜೀವನ ಆರಂಭಿಸಿದ್ದೆನೋ ಇಂದಿಗೆ ಇಲ್ಲೇ ಮುಗಿಸುತ್ತಿದ್ದೇನೆ' ಎಂದು ತಮ್ಮ 16 ವರ್ಷಗಳ ಸುದೀರ್ಘ ಅಂತಾರರಾಷ್ಟ್ರೀಯ ವೃತ್ತಿಜೀವನಕ್ಕೆ ನೇಮರ್‌ ತೆರೆ ಎಳೆದರು.

ಫಿಫಾ ವಿಶ್ವಕಪ್‌ನಲ್ಲಿ 'ವಯಾಗ್ರ' ಚರ್ಚೆ! ಆಟಗಾರರು ಎನರ್ಜಿ ಪಿಲ್ ಬಳಸಿದ್ರರಾ? ಇಲ್ಲಿದೆ ಸತ್ಯ!

ನಾರ್ವೆಯ ಯುವ ತಾರೆ ಎರ್ಲಿಂಗ್ ಹಾಲೆಂಡ್, 79ನೇ ಮತ್ತು 90ನೇ ನಿಮಿಷಗಳಲ್ಲಿ ಅವಳಿ ಗೋಲು ಬಾರಿಸುವ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಪ್ರಸಕ್ತ ಸಾಲಿನ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರ ಸಾಲಿನಲ್ಲಿಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಹಾಗೂ ಫ್ರಾನ್ಸ್‌ನ ಕೈಲಿಯನ್ ಎಂಬಾಪೆ ಸಾಲಿಗೆ ಹಾಲೆಂಡ್ ಸೇರ್ಪಡೆಯಾಗಿದ್ದಾರೆ. ಗೋಲ್ಡನ್ ಬೂಟ್ ರೇಸ್‌ನಲ್ಲಿ ಈ ಮೂವರು ಆಟಗಾರರು ತಲಾ ಏಳು ಗೋಲುಗಳೊಂದಿಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.