ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pratika Rawal: ವೀಲ್‌ಚೇರ್‌ನಲ್ಲಿ ಬಂದು ಭಾರತದ ವಿಶ್ವಕಪ್ ವಿಜಯವನ್ನು ಆಚರಿಸಿದ ಪ್ರತೀಕಾ ರಾವಲ್

ಪ್ರತಿಕಾ ರಾವಲ್ ಅವರು ಸ್ಮರಣೀಯ ಪಂದ್ಯಾವಳಿಯನ್ನು ಆಡಿದ್ದರು. ಏಳು ಪಂದ್ಯಗಳಿಂದ 51.33 ಸರಾಸರಿ ಮತ್ತು 77.77 ಸ್ಟ್ರೈಕ್ ರೇಟ್‌ನಲ್ಲಿ 308 ರನ್ ಗಳಿಸಿದರು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು 122 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಮೂರು ಸೋಲುಗಳ ನಂತರ ಭಾರತ ಚೇತರಿಸಿಕೊಳ್ಳಲು ಸಹಾಯ ಮಾಡಿದರು.

ವೀಲ್‌ಚೇರ್‌ನಲ್ಲಿ ಬಂದು ವಿಶ್ವಕಪ್ ಗೆಲುವು ಸಂಭ್ರಮಿಸಿದ ಪ್ರತೀಕಾ

ಪ್ರತಿಕಾ ರಾವಲ್‌ -

Abhilash BC Abhilash BC Nov 3, 2025 10:26 AM

ನವಿ ಮುಂಬೈ: ಪ್ರತಿಕಾ ರಾವಲ್(Pratika Rawal) ಗಾಯಗೊಂಡು ಮಹಿಳಾ ವಿಶ್ವಕಪ್‌ ಟೂರ್ನಿಯ(Women's World Cup) ಸೆಮಿ ಫೈನಲ್‌ ಪಂದ್ಯಕ್ಕೂ ಮುನ್ನ ತಂಡದಿಂದ ಹೊರಬಿದ್ದಿದ್ದರು. ಹೀಗಾಗಿ ಅವರಿಗೆ ಫೈನಲ್‌ ಆಡುವ ಅವಕಾಶ ಕೈತಪ್ಪಿ ಹೋಗಿತ್ತು. ಆದರೆ ಮಹಿಳಾ ವಿಶ್ವಕಪ್ ಗೆಲುವಿನ ನಂತರ ಭಾರತದ ಸಂಭ್ರಮಾಚರಣೆಯನ್ನು ಅವರು ತಪ್ಪಿಸಿಕೊಳ್ಳುತ್ತಿರಲಿಲ್ಲ. ಭಾನುವಾರ, ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ(IND vs SA Women) ವಿರುದ್ಧ ಭಾರತ 52 ರನ್‌ಗಳ ಜಯ ಸಾಧಿಸಿದ ನಂತರ, ಪ್ರತಿಕಾ ಭಾರತದ ತ್ರಿವರ್ಣ ಧ್ವಜವನ್ನು ಧರಿಸಿ ವೀಲ್‌ಚೇರ್‌ನಲ್ಲಿ ಮೈದಾನಕ್ಕೆ ಬಂದು ತಂಡದ ಸಹ ಆಟಗಾರ್ತಿಯರೊಂದಿಗೆ ಸಂಭ್ರಮಿಸಿದರು. ಟ್ರೋಫಿ ಸಂಭ್ರಮಾಚರಣೆಯಲ್ಲೂ ಭಾಗಿಯಾದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಜೇತ ತಂಡದ ಭಾಗವಾಗಲು ತುಂಬಾ ಸಂತೋಷ ಎಂದು ಪ್ರತಿಕಾ ಹೇಳಿದರು. ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ ಆಡಲು ಸಾಧ್ಯವಾಗದಿದ್ದರೂ ತಂಡದ ಐತಿಹಾಸಿಕ ಕ್ಷಣದ ಭಾಗವಾಗಿರುವುಉ ಹೆಮ್ಮೆಯ ಸಂಗತಿ ಎಂದರು.

"ಈ ಭಾವನೆಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನನ್ನ ಭುಜದ ಮೇಲಿನ ಈ ಧ್ವಜ ಎಲ್ಲವನ್ನೂ ಅರ್ಥೈಸುತ್ತದೆ, ಮತ್ತು ತಂಡದೊಂದಿಗೆ ಇಲ್ಲಿ ನಿಲ್ಲುವುದು ಅವಾಸ್ತವಿಕವೆನಿಸುತ್ತದೆ. ಗಾಯಗಳು ಆಟದ ಒಂದು ಭಾಗ, ಆದರೆ ಈ ವಿಜೇತ ತಂಡದ ಭಾಗವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾನು ಈ ತಂಡವನ್ನು ಪ್ರೀತಿಸುತ್ತೇನೆ" ಎಂದು ಪಂದ್ಯದ ನಂತರ ಪ್ರತಿಕಾ ಹೇಳಿದರು.

ಇದನ್ನೂ ಓದಿ Women’s World Cup 2025: ಚೊಚ್ಚಲ ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ₹51 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ

"ಇಷ್ಟು ದೀರ್ಘ ಕಾಯುವಿಕೆಯ ನಂತರ ವಿಶ್ವಕಪ್ ಗೆದ್ದ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದೇವೆ ಎಂಬುದು ಅದ್ಭುತವೆನಿಸುತ್ತದೆ ಮತ್ತು ಪ್ರೇಕ್ಷಕರು ಈ ಕ್ಷಣಕ್ಕೆ ನಿಜವಾಗಿಯೂ ಅರ್ಹರು. ಹೊರಗೆ ಕುಳಿತು ನೋಡುವುದು ಕಷ್ಟಕರವಾಗಿತ್ತು, ಆಡುವುದಕ್ಕಿಂತ ಹೆಚ್ಚು ಕಷ್ಟಕರವಾಗಿತ್ತು. ವಿಕೆಟ್ ಅಥವಾ ಸಿಕ್ಸ್ ಬಂದಾಗಲೆಲ್ಲಾ ನನ್ನನ್ನು ಬೆರಗುಗೊಳಿಸಿತು. ಇದು ಸರಳವಾಗಿ ಅದ್ಭುತವಾಗಿದೆ" ಎಂದು ಪ್ರತೀಕಾ ಹೇಳಿದರು.

ಪ್ರತಿಕಾ ರಾವಲ್ ಅವರು ಸ್ಮರಣೀಯ ಪಂದ್ಯಾವಳಿಯನ್ನು ಆಡಿದ್ದರು. ಏಳು ಪಂದ್ಯಗಳಿಂದ 51.33 ಸರಾಸರಿ ಮತ್ತು 77.77 ಸ್ಟ್ರೈಕ್ ರೇಟ್‌ನಲ್ಲಿ 308 ರನ್ ಗಳಿಸಿದರು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು 122 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಮೂರು ಸೋಲುಗಳ ನಂತರ ಭಾರತ ಚೇತರಿಸಿಕೊಳ್ಳಲು ಸಹಾಯ ಮಾಡಿದರು.