FIFA world Cup: ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ಈಜಿಪ್ಟ್ ತಂಡಕ್ಕೆ ಮೋಸ: ಕೋಚ್ ಗಂಭೀರ ಆರೋಪ!
ಫಿಫಾ ವಿಶ್ವಕಪ್ 2026ರ ಟೂರ್ನಿಯ ಅರ್ಜೆಂಟಿನಾ ವಿರುದ್ಧ 3-2 ಅಂತರದಿಂದ ಸೋತು ಟೂರ್ನಿಯಿಂದ ಹೊರಬಿದ್ದ ಬಳಿಕ, ಈಜಿಪ್ಟ್ ತಂಡದ ಮುಖ್ಯ ಕೋಚ್ ಹೋಸಾಮ್ ಹಸನ್ ತೀರ್ಪುಗಾರರ ನಿರ್ಧಾರಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂದ್ಯದ 58ನೇ ನಿಮಿಷದಲ್ಲಿ ಮುಸ್ತಫಾ ಜೀಕೊ ಗಳಿಸಿದ್ದ ಗೋಲನ್ನು ವಿಎಆರ್ (VAR) ಮೂಲಕ ರದ್ದುಗೊಳಿಸಿದ ಕ್ರಮವನ್ನು ಅವರು ಅನ್ಯಾಯ ಎಂದು ಬಣ್ಣಿಸಿದ್ದಾರೆ.
ಈಜಿಪ್ಟ್ ಸೋಲಿನ ಬಳಿಕ ಪಂದ್ಯದ ಅಂಪೈರ್‌ಗಳ ವಿರುದ್ಧ ಕೋಚ್ ಕಿಡಿ. -
ನವದೆಹಲಿ: ಫಿಫಾ ವಿಶ್ವಕಪ್ 2026ರ ಟೂರ್ನಿಯ (FIFA World Cup 2026) ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟಿನಾ ವಿರುದ್ಧ 3-2 ಅಂತರದಿಂದ ಹೃದಯವಿದ್ರಾವಕ ಸೋಲು ಕಂಡ ಬಳಿಕ, ಈಜಿಪ್ಟ್ ತಂಡದ ಮುಖ್ಯ ಕೋಚ್ ಹೋಸಾಮ್ ಹಸನ್ (Hossam Hassan) ತೀರ್ಪುಗಾರರ ನಿರ್ಧಾರಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಜಿಪ್ಟ್‌ನ ಮಾಜಿ ಆಟಗಾರರೂ ಆಗಿರುವ ಹಸನ್, ಪಂದ್ಯದಲ್ಲಿನ ಕಳಪೆ ನಿರ್ಧಾರಗಳನ್ನು ಕಟುವಾಗಿ ಟೀಕಿಸಿದರು. ವಿವಾದಾತ್ಮಕ ನಿರ್ಧಾರದ ಕಾರಣ ತಮ್ಮ ತಂಡದ ಗೋಲನ್ನು ರದ್ದುಗೊಳಿಸಲಾಗಿದ್ದು, ಇದರಿಂದ ತಮ್ಮ ತಂಡಕ್ಕೆ ಅನ್ಯಾಯವಾಗಿದೆ ಎಂದು ಅವರು ಆರೋಪಿಸಿದರು.
ಇದೇ ವೇಳೆ, ಪಂದ್ಯದ ರೆಫರಿ ಫ್ರಾಂಸ್ವಾ ಲೆಟೆಕ್ಸಿಯರ್ ಎದುರು ಕೂಡ ಹಸನ್ ತಮ್ಮ ತೀವ್ರ ಆಕ್ಷೇಪವನ್ನು ಅಧಿಕೃತವಾಗಿ ದಾಖಲಿಸಿದ್ದಾರೆ.
ಈ ಪಂದ್ಯವು ಈಜಿಪ್ಟ್ ಫುಟ್‌ಬಾಲ್ ಇತಿಹಾಸದ ಅತ್ಯಂತ ಸ್ಮರಣೀಯ ಕ್ಷಣವಾಗಿ ದಾಖಲಾಗುವ ಹಂತಕ್ಕೆ ತಲುಪಿತ್ತು. ವಿಶ್ವ ಚಾಂಪಿಯನ್ ಅರ್ಜೆಂಟಿನಾ ವಿರುದ್ಧದ ಪಂದ್ಯದಲ್ಲಿ ಈಜಿಪ್ಟ್ ತಂಡ ಅಂತಿಮ ಹಂತದವರೆಗೆ 2-0 ಮುನ್ನಡೆ ಕಾಯ್ದುಕೊಂಡಿದ್ದು, ತನ್ನ ಇತಿಹಾಸದಲ್ಲೇ ಮೊದಲ ಬಾರಿ ಕ್ವಾರ್ಟರ್‌ಫೈನಲ್ ಪ್ರವೇಶಿಸುವ ಸನಿಹದಲ್ಲಿತ್ತು.
ಆದರೆ ಪಂದ್ಯದ ಕೊನೆಯ 23 ನಿಮಿಷಗಳಲ್ಲಿ ಅರ್ಜೆಂಟಿನಾ ಅದ್ಭುತ ಕಮ್‌ಬ್ಯಾಕ್ ಮಾಡಿತು. ಸತತ ಮೂರು ಗೋಲುಗಳನ್ನು ದಾಖಲಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಇಂಜುರಿ ಟೈಮ್‌ನ ಎರಡನೇ ನಿಮಿಷದಲ್ಲಿ ಎನ್‌ಝೋ ಫರ್ನಾಂಡಿಸ್ ದಾಖಲಿಸಿದ ಗೋಲು ಅರ್ಜೆಂಟಿನಾಗೆ 3-2ರ ಗೆಲುವು ತಂದುಕೊಟ್ಟರೆ, ಈಜಿಪ್ಟ್‌ನ ಐತಿಹಾಸಿಕ ಕನಸನ್ನು ಭಗ್ನಗೊಳಿಸಿತು.
58ನೇ ನಿಮಿಷವೇ ಪಂದ್ಯಕ್ಕೆ ನಿರ್ಣಾಯಕ ತಿರುವು
ಪಂದ್ಯದ ಅತ್ಯಂತ ವಿವಾದಾತ್ಮಕ ಕ್ಷಣ 58ನೇ ನಿಮಿಷದಲ್ಲಿ ನಡೆಯಿತು. ಈಜಿಪ್ಟ್‌ನ ಮುಸ್ತಫಾ ಜೀಕೊ ಚೆಂಡನ್ನು ಗೋಲ್‌ಪೋಸ್ಟ್‌ಗೆ ಸೇರಿಸಿ ತಂಡಕ್ಕೆ 2-0ರ ಮುನ್ನಡೆ ತಂದುಕೊಟ್ಟಿದ್ದರು. ಆದರೆ ಗೋಲು ದಾಖಲಾದ ಬಳಿಕ ತೀರ್ಪುಗಾರರು ವಿಡಿಯೊ ಅಸಿಸ್ಟೆಂಟ್ ರೆಫರಿ (VAR) ಪರಿಶೀಲನೆಗೆ ಮೊರೆ ಹೋದರು.
ಪರಿಶೀಲನೆಯ ಬಳಿಕ, ಗೋಲು ದಾಖಲಿಸುವ ಮೊದಲು ಈಜಿಪ್ಟ್‌ನ ಮಾರ್ವಾನ್ ಅತ್ತಿಯಾ ಅರ್ಜೆಂಟಿನಾದ ಲಿಸಾಂಡ್ರೊ ಮಾರ್ಟಿನೆಜ್ ವಿರುದ್ಧ ಫೌಲ್ ಮಾಡಿದ್ದರು ಎಂದು ತೀರ್ಪುಗಾರರು ನಿರ್ಧರಿಸಿ, ಗೋಲನ್ನು ರದ್ದುಗೊಳಿಸಿದರು.
ಈ ನಿರ್ಧಾರದಿಂದ ಈಜಿಪ್ಟ್‌ಗೆ ದೊಡ್ಡ ಹಿನ್ನಡೆಯಾಯಿತು. ಬಳಿಕ 10 ನಿಮಿಷಗಳ ನಂತರ ತಂಡ ಮತ್ತೊಂದು ಗೋಲು ಗಳಿಸಿ 2-0ರ ಮುನ್ನಡೆ ಸಾಧಿಸಿದರೂ, ಮೊದಲ ಗೋಲು ರದ್ದಾಗದೇ ಇದ್ದಿದ್ದರೆ ಈಜಿಪ್ಟ್ 3-0 ಅಂತರದ ಭದ್ರ ಮುನ್ನಡೆ ಪಡೆಯುತ್ತಿತ್ತು. ಆ ಹಂತದಿಂದ ಅರ್ಜೆಂಟಿನಾಗೆ ಕಮ್‌ಬ್ಯಾಕ್ ಮಾಡುವುದು ಅತ್ಯಂತ ಕಷ್ಟಕರವಾಗುತ್ತಿತ್ತು.
DECLARAÇÕES FORTES!
— Jakelyne Loiola (@Jakelyneloiola_) July 7, 2026
O técnico do Egito, Hossam Hassan, fez duras críticas.
“Vou dizer o que penso independentemente das consequências. Esta foi claramente uma partida manipulada e o mundo inteiro viu isso.”
“E quero dizer mais uma coisa: se eles querem tanto que a Argentina… pic.twitter.com/x4BtviYCIS
ಪಂದ್ಯದ ಬಳಿಕ ಫಿಫಾ ಅನುವಾದಕರ ಮೂಲಕ ಮಾತನಾಡಿದ ಈಜಿಪ್ಟ್ ತಂಡದ ಮುಖ್ಯ ಕೋಚ್ ಹೋಸಾಮ್ ಹಸನ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
"ಈ ಪಂದ್ಯದಲ್ಲಿ ನಮಗೆ ಗೌರವ ಅಥವಾ ಫೇರ್ ಪ್ಲೇ ದೊರೆತಿದೆ ಎಂದು ನನಗೆ ಅನಿಸುವುದಿಲ್ಲ. ಪಂದ್ಯದ ಫಲಿತಾಂಶ ಹಾಗೂ ಅದರ ದಿಕ್ಕು ಬದಲಾದ ರೀತಿಯನ್ನು ನಾನು ಒಪ್ಪಲಾರೆ. ಇದನ್ನು ಕೇವಲ ದುರಾದೃಷ್ಟ ಎಂದು ಹೇಳಿ ಮುಚ್ಚಿಹಾಕಲು ನಾನು ಬಯಸುವುದಿಲ್ಲ. ಇಂದು ನಮ್ಮ ತಂಡಕ್ಕೆ ಅನ್ಯಾಯವಾಗಿದೆ. ನಾವು ಈ ಗೆಲುವಿಗೆ ಸಂಪೂರ್ಣ ಅರ್ಹರಾಗಿದ್ದೆವು," ಎಂದು ಹೋಸಾಮ್ ಹಸನ್ ಹೇಳಿದ್ದಾರೆ.
STRONG STATEMENTS!
— HAIER😡😂 (@pyramidvalley_) July 8, 2026
After the final whistle, Egypt coach Hossam Hassan made some explosive remarks:
🗣️ “I’m going to say what I think, regardless of the consequences. This match was clearly manipulated, and the whole world saw it.”
🗣️ “And one more thing: if they want Argentina… pic.twitter.com/wbMd1kFJDi
ಪಂದ್ಯದ ಸಮಯದ ಬಗ್ಗೆಯೂ ಕೋಚ್ ಅಸಮಾಧಾನ
ಪಂದ್ಯ ಮುಗಿದ ಬಳಿಕ ಈಜಿಪ್ಟ್ ತಂಡದ ಮುಖ್ಯ ಕೋಚ್ ಹೋಸಾಮ್ ಹಸನ್ ಅವರು ಮೈದಾನದಲ್ಲೇ ರೆಫರಿ ಜೊತೆ ತೀವ್ರ ವಾಗ್ವಾದ ನಡೆಸುತ್ತಿರುವುದು ಕಂಡುಬಂತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತೀರ್ಪುಗಾರರಿಗೆ ನೇರವಾಗಿ ಇದು ಸಂಪೂರ್ಣ ಅನ್ಯಾಯಕರ ಪರಿಸ್ಥಿತಿ ಎಂದು ತಿಳಿಸಿದ್ದಾಗಿ ಹೇಳಿದರು.
ವಿಶ್ವಕಪ್‌ನಲ್ಲಿ ಎರ್ಲಿಂಗ್ ಹಾಲ್ಯಾಂಡ್ ಅಬ್ಬರ! ಫುಟ್ಬಾಲ್‌ಗೆ ಸಿಕ್ಕ ವೈ'ಕಿಂಗ್'
ಇದರ ಜೊತೆಗೆ, ಪಂದ್ಯದ ವೇಳಾಪಟ್ಟಿಯ ಬಗ್ಗೆಯೂ ಹಸನ್ ಪ್ರಶ್ನೆ ಎತ್ತಿದರು. ಸ್ಥಳೀಯ ಸಮಯದ ಪ್ರಕಾರ ಮಧ್ಯಾಹ್ನ 12 ಗಂಟೆಗೆ ಪಂದ್ಯವನ್ನು ಆಯೋಜಿಸಿರುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಮೈದಾನದ ಒಳಗೆ ಮತ್ತು ಹೊರಗೆ ಪ್ರಶ್ನಿಸಬೇಕಾದ ಹಲವು ಸಂಗತಿಗಳಿವೆ ಎಂದು ಅವರು ದೂರಿದ್ದಾರೆ.
ಈ ಸಂಪೂರ್ಣ ಬೆಳವಣಿಗೆ ಹಾಗೂ ವಿವಾದದಿಂದ ನಿರಾಶರಾಗಿರುವ ಹೋಸಾಮ್ ಹಸನ್, ಫಿಫಾ ವಿಶ್ವಕಪ್‌ನ ಉಳಿದ ಪಂದ್ಯಗಳನ್ನು ತಾವು ವೀಕ್ಷಿಸುವುದಿಲ್ಲ ಎಂದು ಘೋಷಿಸಿದರು. 2018ರ ಬಳಿಕ ಈಜಿಪ್ಟ್‌ಗೆ ಇದು ಮೊದಲ ಫಿಫಾ ವಿಶ್ವಕಪ್ ಆಗಿತ್ತು. ಅಲ್ಲದೆ, 1934ರ ನಂತರ ಮೊದಲ ಬಾರಿ ತಂಡ ರೌಂಡ್ ಆಫ್ 16 ತಲುಪಿದ್ದು, ವಿಶ್ವಕಪ್ ಇತಿಹಾಸದಲ್ಲೇ ಇದುವರೆಗೆ ದಾಖಲಿಸಿದ ಅತ್ಯುತ್ತಮ ಸಾಧನೆಯಾಗಿದೆ.