National Sports Awards 2025: 17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ, ಖೇಲ್ ರತ್ನ ಈ ಬಾರಿ ಯಾರಿಗೂ ಇಲ್ಲ!
2025ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಕೇಂದ್ರ ಕ್ರೀಡಾ ಸಚಿವಾಲಯ ಪ್ರಕಟಿಸಿದ್ದು, 17 ಮಂದಿಗೆ ಅರ್ಜುನ ಪ್ರಶಸ್ತಿ, ಮೂವರು ಕೋಚ್‌ಗಳನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆದರೆ,ಈ ಬಾರಿ ಅತ್ಯುನ್ನತ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಯಾರೂ ಕೂಡ ಆಯ್ಕೆ ಮಾಡಲಾಗಿಲ್ಲ.
2025ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿಜೇತರ ವಿವರ. -
ನವದೆಹಲಿ: ಭಾರತದಲ್ಲಿ ಪ್ರತಿವರ್ಷ ನೀಡಲಾಗುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನು (National Sports Awards 2025) ಕೇಂದ್ರ ಕ್ರೀಡಾ ಸಚಿವಾಲಯ ಆಗಸ್ಟ್ 18 ರಂದು ಪ್ರಕಟಿಸಿದೆ. ಈ ಬಾರಿ ಯಾವುದೇ ಕ್ರೀಡಾಪಟುವಿಗೆ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡಲಾಗಿಲ್ಲ. ಇದೇ ವೇಳೆ 17 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಮೂವರು ಕೋಚ್‌ಗಳಿಗೆ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಸರ್ಕಾರ ವಿವಿಧ ವಿಭಾಗಗಳಲ್ಲಿ ಕ್ರೀಡಾಪಟುಗಳು, ಕೋಚ್‌ಗಳು ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದೆ.
World Championships: ಸೋಫಿಯಾ ನೋಬೆಲ್ ವಿರುದ್ಧ ಗೆದ್ದ ಪಿವಿ ಸಿಂಧೂಗೆ ಶುಭಾರಂಭ!
ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯುತ್ತಮ ಪ್ರದರ್ಶನ, ನಾಯಕತ್ವ, ಕ್ರೀಡಾ ಮನೋಭಾವ ಹಾಗೂ ಶಿಸ್ತು ಪ್ರದರ್ಶಿಸಿದ ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಲಾಗುತ್ತದೆ.
ಈ ಬಾರಿ ಅರ್ಜುನ್ ಪ್ರಶಸ್ತಿಗೆ ಆಯ್ಕೆಯಾದ ಪ್ರಮುಖ ಕ್ರೀಡಾಪಟುಗಳು
ತೇಜಸ್ವಿನ್ ಶಂಕರ್ – ಹೈಜಂಪ್ ಮತ್ತು ಡೆಕಾಥ್ಲಾನ್
ಮುಹಮ್ಮದ್ ಅಜ್ಮಲ್ ವಿ – ಸ್ಪ್ರಿಂಟ್
ಪ್ರಿಯಾಂಕಾ ಗೋಸ್ವಾಮಿ – ಅಥ್ಲೆಟಿಕ್ಸ್
ಟ್ರೀಸಾ ಜಾಲಿ – ಬ್ಯಾಡ್ಮಿಂಟನ್
ಗಾಯತ್ರಿ ಗೋಪಿಚಂದ್ – ಬ್ಯಾಡ್ಮಿಂಟನ್
ವಿದಿತ್ ಗುಜರಾತಿ – ಚೆಸ್
ದಿವ್ಯಾ ದೇಶಮುಖ್ – ಚೆಸ್
ಲಾಲ್ರೆಮ್ಸಿಯಾಮಿ – ಹಾಕಿ
ರಾಜ್‌ಕುಮಾರ್ ಪಾಲ್ – ಹಾಕಿ
ಅಖಿಲ್ ಶ್ಯೋರಾಣ್ – ಶೂಟಿಂಗ್
#News
— Bureaucrats India (@BureaucratsInd) August 18, 2026
National Sports Awards 2025 announced
Badminton stars Treesa Jolly and Gayatri Gopichand, along with 15 other sportspersons, have been selected for the Arjuna Award for outstanding performance.
Veteran footballer Isaiah Arumainayagam will receive the Arjuna Award… pic.twitter.com/OBqWVgWJE7
17 ಮಂದಿ ಅರ್ಜುನ ಪ್ರಶಸ್ತಿ ವಿಜೇತರು
ತೇಜಸ್ವಿನ್ ಶಂಕರ್-ಅಥ್ಲೆಟಿಕ್ಸ್
ಮುಹಮ್ಮದ್ ಅಜ್ಮಲ್ ವಿ- ಅಥ್ಲೆಟಿಕ್ಸ್
ಪ್ರಿಯಾಂಕಾ ಗೋಸ್ವಾಮಿ ಅಥ್ಲೆಟಿಕ್ಸ್
ಟ್ರೀಸಾ ಜಾಲಿ- ಬ್ಯಾಡ್ಮಿಂಟನ್
ಪುಲ್ಲೇಲ ಗಾಯತ್ರಿ ಗೋಪಿಚಂದ್- ಬ್ಯಾಡ್ಮಿಂಟನ್
ನರೇಂದ್ರ- ಬಾಕ್ಸಿಂಗ್
ವಿದಿತ್ ಸಂತೋಷ್ ಗುಜರಾತಿ- ಚೆಸ್
ದಿವ್ಯಾ ಜಿತೇಂದ್ರ ದೇಶಮುಖ್- ಚೆಸ್
ಧನುಷ್ ಶ್ರೀಕಾಂತ್ ಕಿವುಡ- ಶೂಟಿಂಗ್
ಲಾಲ್ರೆಮ್ಸಿಯಾಮಿ- ಹಾಕಿ
ರಾಜಕುಮಾರ್ ಪಾಲ್- ಹಾಕಿ
ಸುರ್ಜೀತ್- ಕಬಡ್ಡಿ
ಪೂಜಾ- ಕಬಡ್ಡಿ
ರುದ್ರಾಂಶ್ ಖಂಡೇಲ್ವಾಲ್ - ಪ್ಯಾರಾ ಶೂಟಿಂಗ್
ಏಕ್ತಾ ಭಯ್- ಪ್ಯಾರಾ ಅಥ್ಲೆಟಿಕ್ಸ್
ಅರವಿಂದ್ ಸಿಂಗ್- ರೋಯಿಂಗ್
ಅಖಿಲ್ ಶೆರಾನ್- ಶೂಟಿಂಗ್
ʻನನ್ನನ್ನು ಉಳಿಸಿದ್ದಕ್ಕಾಗಿ ನಿಮಗೆ ಧನ್ಯವಾದʼ: ದೇವದತ್ ಪಡಿಕ್ಕಲ್‌ರನ್ನು ಅಪ್ಪಿಕೊಂಡ ಕೆಎಲ್ ರಾಹುಲ್!
ದ್ರೋಣಾಚಾರ್ಯ ಪ್ರಶಸ್ತಿ ವಿಜೇತರು
2025ರಲ್ಲಿ ಐವರು ಕೋಚ್‌ಗಳು ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಥ್ಲೆಟಿಕ್ಸ್ ಕೋಚ್ ಪರ್ವೀರ್ ಸಿಂಗ್, ಬಾಕ್ಸಿಂಗ್ ಕೋಚ್ ಚೋಟೆ ಲಾಲ್ ಯಾದವ್ ಹಾಗೂ ಶೂಟಿಂಗ್ ಕೋಚ್ ನೇಹಾ ನಂದ್‌ಕುಮಾರ್ ಚವ್ಹಾಣ್ ಆಯ್ಕೆಯಾಗಿದ್ದಾರೆ. ಬಾಕ್ಸಿಂಗ್ ಕೋಚ್ ಧರ್ಮೇಂದ್ರ ಸಿಂಗ್ ಯಾದವ್ ಹಾಗೂ ಕುಸ್ತಿ ಕೋಚ್ ವೀರೇಂದ್ರ ಕುಮಾರ್ ಅವರು ಜೀವಮಾನ ವಿಭಾಗದಲ್ಲಿ ದ್ರೋಣಾಚಾರ್ಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಅರ್ಜುನ ಪ್ರಶಸ್ತಿ (ಜೀವಮಾನ) ವನ್ನು ಫುಟ್ಬಾಲ್ ಆಟಗಾರ ಐ. ಅರುಮನಾಯಗಂ ಅವರಿಗೆ ನೀಡಲಾಗಿದೆ. ಈ ಪ್ರಶಸ್ತಿಯು ಕ್ರೀಡಾ ಕ್ಷೇತ್ರಕ್ಕೆ ಕೊಡುಗೆ ನೀಡಿದ ಮತ್ತು ಸಕ್ರಿಯ ಸ್ಪರ್ಧೆಯಿಂದ ನಿವೃತ್ತರಾದ ನಂತರವೂ ವಿವಿಧ ಸಾಮರ್ಥ್ಯಗಳಲ್ಲಿ ಅದನ್ನು ಉತ್ತೇಜಿಸುತ್ತಿರುವ ಕ್ರೀಡಾಪಟುಗಳನ್ನು ಗೌರವಿಸುತ್ತದೆ ಮತ್ತು ಪ್ರೇರೇಪಿಸುತ್ತದೆ.