ಹರ್ಷಿತ್ ರಾಣಾರನ್ನು ಕೆಣಕಿದ ಪಾಕಿಸ್ತಾನಿ ಆಟಗಾರರು ವಿಡಿಯೊ ವೈರಲ್
Harshit Rana: ಪಾಕಿಸ್ತಾನ ಎ ತಂಡದ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ ರಾಣಾ ಮತ್ತು ಪಾಕಿಸ್ತಾನ ತಂಡದ ನಡುವೆ ಘರ್ಷಣೆ ಆರಂಭವಾಯಿತು. ರಾಣಾ ಅವರು ರೋಹೈಲ್ ನಜೀರ್ ಅವರನ್ನು ಡಕ್ ಆಗಿ ಔಟ್ ಮಾಡಿದಾಗ ಮತ್ತು ಆ ಬಳಿಕ ಆಯುಷ್ ಬಡೋನಿ ಅವರ ಬೌಲಿಂಗ್‌ನಲ್ಲಿ ಹುಸೇನ್ ಕ್ಯಾಚ್ ಪಡೆದ ನಂತರ ಅವರು ಶಮಿಲ್ ಹುಸೇನ್ ಎದುರು ಅತಿಯಾಗಿ ಸಂಭ್ರಮಿಸಿದರು.
Harshit Rana -
ದೋಹಾ, ನ.23: ಭಾನುವಾರ ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದ್ದ 'ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್' ಟೂರ್ನಿಯ 'ಗ್ರೂಪ್ ಬಿ' ಪಂದ್ಯದಲ್ಲಿ, ಭಾರತ 'ಎ' ಮತ್ತು ಪಾಕಿಸ್ತಾನ 'ಎ' ತಂಡಗಳ ನಡುವಿನ ಪಂದ್ಯದಲ್ಲಿ ಒಂದು ರೀತಿಯ ರಣರಂಗದ ವಾತಾವರಣ ಕಂಡುಬಂದಿತು. ಉಭಯ ತಂಡಗಳ ಆಟಗಾರರು ಪಂದ್ಯದುದ್ದಕ್ಕೂ ತೀವ್ರ ಮಾತಿನ ಚಕಮಕಿ ನಡೆಯಿತು.
44ನೇ ಓವರ್‌ನಲ್ಲಿ ಕೇವಲ ಎರಡು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ (ಡಕ್) ಔಟಾದ ಹರ್ಷಿತ್ ರಾಣಾ, ಈ ಘಟನೆಯ ಕೇಂದ್ರಬಿಂದುವಾದರು. ಅವರು ಡ್ರೆಸ್ಸಿಂಗ್ ರೂಮ್‌ಗೆ ಮರಳುತ್ತಿದ್ದಾಗ, ಪಾಕಿಸ್ತಾನ ತಂಡದ ಆಟಗಾರರು ಅವರಿಗೆ ಕಟುವಾದ ರೀತಿಯಲ್ಲಿ ಬೀಳ್ಕೊಡುಗೆ ನೀಡಿದರು. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘರ್ಷಣೆಯಲ್ಲಿ ಪಾಕಿಸ್ತಾನದ ಸ್ಪಿನ್ನರ್ ಸುಫ್ಯಾನ್ ಮೊಕಿಮ್ ಭಾಗಿಯಾಗಿದ್ದರು. ರಾಣ ಔಟಾಗಿ ಮರಳುವಾಗ ಮೊಕಿಮ್, ರಾಣಾ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಳ್ಳುವ ಹಂತದಲ್ಲಿದ್ದಾಗ, ಪಾಕಿಸ್ತಾನದ ಮತ್ತೊಬ್ಬ ಆಟಗಾರ ಮಧ್ಯಪ್ರವೇಶಿಸಿದರು. ಇದಕ್ಕೂ ಮುನ್ನ, ಪಾಕಿಸ್ತಾನ 'ಎ' ತಂಡದ ಆರಂಭಿಕ ಬ್ಯಾಟರ್‌ಗಳು ಬ್ಯಾಟಿಂಗ್ ಮಾಡುತ್ತಿದ್ದಾಗಲೂ ರಾಣಾ ಅವರೊಂದಿಗೆ ಮಾತಿನ ವಿನಿಮಯ ನಡೆದಿತ್ತು.
बहुत दुःखद है खेल को खेल भावना से खेला जाना चाहिए अम्पायर को चाहिए था की किसी के भी साथ मिसबिहेव को तुरंत रोक दे। बत्तमीज़ी मान्य नहीं होनी चाहिए इंडिया हार गया 48 रन से 🥵 अपने लोंडे भी कम नहीं था 🥶 https://t.co/DdamBfaubR
— ᵐᵗᵠ (@AyeMtq) November 23, 2026
ಪಾಕಿಸ್ತಾನ ಎ ತಂಡದ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ ರಾಣಾ ಮತ್ತು ಪಾಕಿಸ್ತಾನ ತಂಡದ ನಡುವೆ ಘರ್ಷಣೆ ಆರಂಭವಾಯಿತು. ರಾಣಾ ಅವರು ರೋಹೈಲ್ ನಜೀರ್ ಅವರನ್ನು ಡಕ್ ಆಗಿ ಔಟ್ ಮಾಡಿದಾಗ ಮತ್ತು ಆ ಬಳಿಕ ಆಯುಷ್ ಬಡೋನಿ ಅವರ ಬೌಲಿಂಗ್‌ನಲ್ಲಿ ಹುಸೇನ್ ಕ್ಯಾಚ್ ಪಡೆದ ನಂತರ ಅವರು ಶಮಿಲ್ ಹುಸೇನ್ ಎದುರು ಅತಿಯಾಗಿ ಸಂಭ್ರಮಿಸಿದರು.
ಪಾಕಿಸ್ತಾನದ ವಿರುದ್ಧದ ಸೋಲಿಗೆ ಜತೆಯಾಟದ ಕೊರತೆಯೇ ಕಾರಣ ಎಂದ ನಾಯಕ ತಿಲಕ್ ವರ್ಮಾ
ಪಾಕಿಸ್ತಾನ 'ಎ' ತಂಡವು 313 ರನ್‌ಗಳಿಗೆ ಆಲೌಟ್ ಆಗುವ ಮೂಲಕ, ಭಾರತ 'ಎ' ತಂಡಕ್ಕೆ ಗೆಲ್ಲಲು 314 ರನ್‌ಗಳ ಗುರಿಯನ್ನು ನೀಡಿತು. ನಾಯಕ ತಿಲಕ್ ವರ್ಮಾ ಶತಕ ಸಿಡಿಸಿ ತಂಡದ ಚೇಸಿಂಗ್‌ಗೆ ಆಧಾರವಾದರೆ, ಅಭಿಷೇಕ್ ಶರ್ಮಾ ಆಕ್ರಮಣಕಾರಿ ಆರಂಭವನ್ನೊದಗಿಸಿ 42 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಆರು ಸಿಕ್ಸರ್‌ಗಳ ನೆರವಿನಿಂದ 70 ರನ್ ಗಳಿಸಿದರು. ಆದಾಗ್ಯೂ, ಭಾರತ 'ಎ' ತಂಡವು 265 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ, 'ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026-27'ರ 'ಗ್ರೂಪ್ ಬಿ' ಪಂದ್ಯದಲ್ಲಿ ಭಾರತ 'ಎ' ತಂಡವು ಗುರಿ ತಲುಪಲು 48 ರನ್‌ಗಳ ಕೊರತೆ ಕಂಡು ಸೋಲನ್ನು ಅನುಭವಿಸಿತು.