ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಣಜಿ ಟ್ರೋಫಿ ಫೈನಲ್: ಐತಿಹಾಸಿಕ ಪ್ರಶಸ್ತಿಯತ್ತ ಜಮ್ಮು& ಕಾಶ್ಮೀರ, ಕರ್ನಾಟಕ್ಕೆ 9ನೇ ಪ್ರಶಸ್ತಿ ಗುರಿ

Ranji Trophy final: ಕರ್ನಾಟಕ ತಂಡಲ್ಲಿ ಭಾರತ ತಂಡದ ಆಟಗಾರರಾದ ಕೆ.ಎಲ್. ರಾಹುಲ್, ಕರುಣ್ ನಾಯರ್, ಮಯಂಕ್ ಅಗರವಾಲ್, ಪ್ರಸಿದ್ಧಕೃಷ್ಣ ಮತ್ತು ನಾಯಕ ದೇವದತ್ತ ಪಡಿಕ್ಕಲ್ ಪ್ರಮುಖ ಆಕರ್ಷಣೆಯಾಗಿದ್ದಾರೆ. 2014–15ರಲ್ಲಿ ಕೊನೆಯ ಬಾರಿ ಕರ್ನಾಟಕವು ಟ್ರೋಫಿ ಗೆದ್ದಿತ್ತು.

ಇಂದಿನಿಂದ ರಣಜಿ ಫೈನಲ್; ಐತಿಹಾಸಿಕ ಪ್ರಶಸ್ತಿಯತ್ತ ಜಮ್ಮು& ಕಾಶ್ಮೀರ

Paras Dogra (left) and Devdutt Padikkal -

Abhilash BC
Abhilash BC Feb 24, 2026 8:40 AM

ಹುಬ್ಬಳ್ಳಿ, ಫೆ.24: ಚೊಚ್ಚಲ ರಣಜಿ ಟ್ರೋಫಿ(Ranji Trophy final) ಮೇಲೆ ಕಣ್ಣಿಟ್ಟಿರುವ ಜಮ್ಮು–ಕಾಶ್ಮೀರ ಮತ್ತು 11 ವರ್ಷಗಳ ನಂತರ ಫೈನಲ್‌ಗೆ ಲಗ್ಗೆಯಿಟ್ಟಿರುವ ಕರ್ನಾಟಕ ತಂಡ ಇಂದು ಆರಂಭಗೊಳ್ಳಲಿರುವ ರಣಜಿ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಪಂದ್ಯ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜ್ಯ ತಂಡ ಫೈನಲ್‌ ಆಡುತ್ತಿರುವ ಕಾರಣ ಪಂದ್ಯಕ್ಕೆ ಭಾರೀ ಸಂಖ್ಯೆಯ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ.

ಕರ್ನಾಟಕ ತಂಡಲ್ಲಿ ಭಾರತ ತಂಡದ ಆಟಗಾರರಾದ ಕೆ.ಎಲ್. ರಾಹುಲ್, ಕರುಣ್ ನಾಯರ್, ಮಯಂಕ್ ಅಗರವಾಲ್, ಪ್ರಸಿದ್ಧಕೃಷ್ಣ ಮತ್ತು ನಾಯಕ ದೇವದತ್ತ ಪಡಿಕ್ಕಲ್ ಪ್ರಮುಖ ಆಕರ್ಷಣೆಯಾಗಿದ್ದಾರೆ. 2014–15ರಲ್ಲಿ ಕೊನೆಯ ಬಾರಿ ಕರ್ನಾಟಕವು ಟ್ರೋಫಿ ಗೆದ್ದಿತ್ತು. ಆಗ ತಂಡದಲ್ಲಿದ್ದ ರಾಹುಲ್, ಕರುಣ್, ಮಯಂಕ್ ಹಾಗೂ ಸ್ಪಿನ್‌–ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ. ಇವರೆಲ್ಲರೂ ಅಮೋಘ ಲಯದಲ್ಲಿದ್ದಾರೆ.

ಜಮ್ಮು–ಕಾಶ್ಮೀರದ ಮಧ್ಯಮವೇಗಿ ಅಕೀಬ್ ನಬಿ ದಾರ್ ಇಡೀ ಟೂರ್ನಿಯಲ್ಲಿ 59 ವಿಕೆಟ್ ಪಡೆದಿದ್ದಾರೆ. ಬಂಗಾಳ ವಿರುದ್ಧದ ಸೆಮಿಫೈನಲ್‌ನಲ್ಲಿ ನಬಿ ಸಹಿತ ತಂಡದ ಎಲ್ಲರೂ ಅಮೋಘ ಆಟವಾಡಿದ್ದರು.

IND vs ZIM: ಟೀಮ್‌ ಬಸ್‌ನಲ್ಲಿ ಔಟ್‌ ಆಫ್‌ ಫಾರ್ಮ್‌ ಅಭಿಷೇಕ್‌ ಶರ್ಮಾಗೆ ಕ್ಲಾಸ್‌ ತೆಗೆದುಕೊಂಡ ಗೌತಮ್‌ ಗಂಭೀರ್‌!

ತಂಡಗಳು

ಕರ್ನಾಟಕ: ದೇವದತ್ತ ಪಡಿಕ್ಕಲ್‌ (ನಾಯಕ), ಮಯಂಕ್‌ ಅಗರವಾಲ್‌, ಕೆ.ಎಲ್‌.ರಾಹುಲ್‌, ಕರುಣ್‌ ನಾಯರ್‌, ಆರ್‌.ಸ್ಮರಣ್‌, ಶ್ರೇಯಸ್‌ ಗೋಪಾಲ್‌, ಕೃತಿಕ್‌ ಕೃಷ್ಣ (ವಿಕೆಟ್‌ ಕೀಪರ್‌), ವೈಶಾಖ ವಿಜಯಕುಮಾರ್, ವಿದ್ಯಾಧರ ಪಾಟೀಲ, ಪ್ರಸಿದ್ಧ ಕೃಷ್ಣ, ಮೊಹ್ಸಿನ್‌ ಖಾನ್‌, ಶಿಖರ್‌ ಶೆಟ್ಟಿ, ಅನೀಶ್‌ ಕೆ.ವಿ, ಶ್ರೀಜಿತ್‌ ಕೆ.ಎಲ್‌ (ವಿಕೆಟ್‌ ಕೀಪರ್‌), ವಿದ್ವತ್‌ ಕಾವೇರಪ್ಪ.

ಜಮ್ಮು–ಕಾಶ್ಮೀರ: ಪಾರಸ್‌ ಡೋಗ್ರಾ (ನಾಯಕ), ಶುಭಂ ಖಜೂರಿಯಾ, ಯಾವರ್ ಹಸನ್‌, ಶುಭಂ ಸಿಂಗ್ ಪುಂಡಿರ್‌, ಅಬ್ದುಲ್‌ ಸಮದ್‌, ಕನ್ಹಯ್ಯ ವಾಧ್ವಾನ್‌ (ವಿಕೆಟ್ ಕೀಪರ್‌), ಅಬಿದ್ ಮುಷ್ತಾಕ್‌, ಅಕೀಬ್ ನಬಿ ದಾರ್‌, ಯುಧ್‌ವೀರ್‌ ಸಿಂಗ್, ವಂಶಜ್‌ ಶರ್ಮಾ, ಸುನಿಲ್ ರಾಮ್‌ ಕುಮಾರ್, ಕವಲ್‌ ಪ್ರೀತ್ ಸಿಂಗ್‌, ಸಾಹಿತ್ ಲೋತ್ರಾ, ದಿಕ್ಷಾಂತ್‌ ಕುಂಡಾಲ್ (ವಿಕೆಟ್ ಕೀಪರ್), ಉಮರ್ ನಜೀರ್‌.

ಪಂದ್ಯ ಆರಂಭ: ಬೆಳಿಗ್ಗೆ 9.

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಹಾಟ್‌ಸ್ಟಾರ್ ಆ್ಯಪ್.