IPL 2026: ಆರ್‌ಸಿಬಿ ತಂಡದ ಹೀಗೊಬ್ಬ ಅಭಿಮಾನಿ; ವಿಡಿಯೊ ವೈರಲ್
RCB crazy fans: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಗಿತ್ತು. ಈ ಪಂದ್ಯದ ಸೋಲಿಗೆ ಅಭಿಮಾನಿಗಳು ಕಾರಣ ಬಿಚ್ಚಿಟ್ಟಿದ್ದಾರೆ. ಆರ್‌ಸಿಬಿ ಸೋಲಿನ ಬಳಿಕ ಹಲವು ಅಭಿಮಾನಿಗಳು ಬ್ಯಾಟಿಂಗ್ ಪ್ರದರ್ಶನಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
rcb crazy fan -
ಬೆಂಗಳೂರು, ಎ.20: ಜೀವನಕ್ಕಿಂತಲೂ ಹೆಚ್ಚಾಗಿ ಕ್ರಿಕೆಟ್ ಅನ್ನು ಪ್ರೀತಿಸುವ ಅಭಿಮಾನಿಗಳಿಗೆ ಭಾರತದಲ್ಲಿ ಕೊರತೆಯೇನಿಲ್ಲ. ಅದರಲ್ಲೂ ಕೆಲವರದಂತೂ ವಿಪರೀತ ಅಭಿಮಾನ ಅದೇ ರೀತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB Fans) ತಂಡವನ್ನು ವಿಶಾಲ್ ಪೂಜಾರಿ(Vishal Pujari) ಎಂಬ ಅಭಿಮಾನಿ ಹಿಂಬಾಲಿಸುತ್ತಿದ್ದಾರೆ. ತಮ್ಮ ದುಬಾರಿ ಬೆಲೆಯ ಸ್ಕೋಡಾ ಕಾರನ್ನೇ ಆರ್‌ಸಿಬಿ ಮಯ ಮಾಡಿದ್ದಾರೆ. ಆರ್‌ಸಿಬಿ ತಂಡದ ಲೋಗೋ, ಆಟಗಾರರ ಚಿತ್ರವನ್ನು ಕಾರಿಗೆ ಸ್ಟಿಕ್ಕರಿಂಗ್ ಮಾಡಿಸಿದ್ದಾರೆ. ಈ ಕಾರು ಎಲ್ಲೇ ಹೋದರು ಎಲ್ಲರ ಗಮನಸೆಳೆಯುತ್ತಿದೆ.
ಅವರನ್ನು ಸಾಮಾಜಿಕ ಜಾಲತಾಣದ ಬ್ಲಾಗರ್ ಮಾತಿಗೆಳೆದಾಗ ‘ಕನ್ನಡಿಗರ ಗತ್ತು ಯಾವತ್ತು ಕಮ್ಮಿ ಆಗಲ್ಲ. ತಂಡ ಸೋಲಲಿ ಗೆಲ್ಲಲಿ ಒಟ್ಟಿನಲ್ಲಿ ಕ್ರಿಕೆಟ್ ಪ್ರೀತಿ ಎಲ್ಲೆಡೆಯೂ ಹಬ್ಬಬೇಕು ಎನ್ನುವುದಷ್ಟೇ ನನ್ನ ಉದ್ದೇಶ’ ಎಂದರು. ಕನ್ನಡ ಹಾಗೂ ಬೆಂಗಾಳಿ ದಂಪತಿಗಳ ಮಿಸ್ಟರ್ ಆ್ಯಂಡ್ ಮಿಸೆಸ್ ಅಲುವರಾ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಈ ಕ್ರೇಝಿ ಆರ್‌ಸಿಬಿ ಕಾರನ್ನು ಬಹಿರಂಗಪಡಿಸಿದ್ದಾರೆ.
ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಉತ್ತಮವಾಗಿ ಆಡತ್ತಿರುವ ಆರ್‌ಸಿಬಿ ಈವರೆಗೆ ಆಡಿದ 6 ಪಂದ್ಯಗಳ ಪೈಕಿ 4 ಪಂದ್ಯ ಗೆದ್ದು 8 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ.
ಡೆಲ್ಲಿ ವಿರುದ್ಧ ತವರಿನಲ್ಲಿ ಸೋಲು
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಗಿತ್ತು. ಈ ಪಂದ್ಯದ ಸೋಲಿಗೆ ಅಭಿಮಾನಿಗಳು ಕಾರಣ ಬಿಚ್ಚಿಟ್ಟಿದ್ದಾರೆ. ಆರ್‌ಸಿಬಿ ಸೋಲಿನ ಬಳಿಕ ಹಲವು ಅಭಿಮಾನಿಗಳು ಬ್ಯಾಟಿಂಗ್ ಪ್ರದರ್ಶನಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಕೆಲ ಅಭಿಮಾನಿಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕನ್ನಡಿದ ಕೆಎಲ್ ರಾಹುಲ್ ಬ್ಯಾಟಿಂಗ್ ಶ್ಲಾಘಿಸಿದ್ದಾರೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಗ್ಯಾಲರಿಯಲ್ಲಿರುವ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟು ಶೋಆಫ್ ಮಾಡುವುದೇ ಹೆಚ್ಚಾಯಿತು. ರನ್ ಬರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ವಿರಾಟ್ ಕೊಹ್ಲಿ ಕಿಸ್ ಕೊಡುವುದು, ಇತರ ಕಡೆ ಗಮನ ಕೊಡುವುದಕ್ಕಿಂತ ಬ್ಯಾಟಿಂಗ್ ಕಡೆ ಗಮನ ಕೊಡಬೇಕು ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಆರಂಭದಲ್ಲಿ ಸ್ಫೋಟಕ ಆಟವಾಡಿದರೂ, ಆ ಬಳಿಕ ಮಂಕಾಯಿತು. ಫಿಲ್ ಸಾಲ್ಟ್ (38 ಎಸೆತದಲ್ಲಿ 4 ಬೌಂಡರಿ, 3 ಸಿಕ್ಸರ್‌ನೊಂದಿಗೆ 63 ರನ್) ಹೊರತುಪಡಿಸಿ ಆರ್‌ಸಿಬಿಯ ಮತ್ತ್ಯಾವ ಬ್ಯಾಟರ್ ಕೂಡ ಅಪಾಯಕಾರಿಯಾಗಿ ಕಾಣಲಿಲ್ಲ. ಟಿಮ್ ಡೇವಿಡ್ 26 ರನ್ ಗಳಿಸಿದರೂ, ಅವರ ಎಂದಿನ ಹೊಡಿಬಡಿ ಆಟ ನೋಡಲಾಗದೆ ಅಭಿಮಾನಿಗಳು ನಿರಾಸೆಗೊಂಡರು. ಜಿತೇಶ್ ಶರ್ಮಾ 14 ರನ್ ಗಳಿಸಲು 20 ಎಸೆತ ವ್ಯರ್ಥ ಮಾಡಿದ್ದು, ತಂಡಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿತು.
IPL 2026; ಡೆಲ್ಲಿ-ಸನ್‌ರೈಸರ್ಸ್ ಪಂದ್ಯದಲ್ಲಿ ಆಟಗಾರರು ನಿರ್ಮಿಸಬಹುದಾದ ದಾಖಲೆಗಳಿವು
ಡೆಲ್ಲಿ ಪರ ರಾಹುಲ್ 57 ರನ್ ಗಳಿಸಿ ಔಟಾದರೆ, 26 ರನ್ ಕೊಡುಗೆ ನೀಡಿದ ನಾಯಕ ಅಕ್ಷರ್, ಗಾಯಗೊಂಡು ಹೊರನಡೆದರು. 17, 18, 19ನೇ ಓವರಲ್ಲಿ ಆರ್‌ಸಿಬಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿತು. ಕೊನೆ ಓವರಲ್ಲಿ ಡೆಲ್ಲಿಗೆ ಗೆಲ್ಲಲು 15 ರನ್ ಬೇಕಿತ್ತು. ಆದರೆ, ಆರ್‌ಸಿಬಿ ಬಳಿ ಕೊನೆ ಓವರ್ ಎಸೆಯಲು ಸೂಕ್ತ ಆಯ್ಕೆ ಇರಲಿಲ್ಲ. ಕೊನೆಗೆ ತಂಡವನ್ನು ಗೆಲ್ಲಿಸುವ ಹೊಣೆಯನ್ನು ಶೆಫರ್ಡ್ ಹೆಗಲಿಗೆ ಹೊರಿಸಲಾಯಿತು. ಮೊದಲೆರಡು ಎಸೆತದಲ್ಲಿ ಕೇವಲ 2 ರನ್ ನೀಡಿದ ಶೆಫರ್ಡ್, ಆ ಬಳಿಕ ಮಿಲ್ಲರ್ ಅಬ್ಬರವನ್ನು ನಿಯಂತ್ರಿಸಲು ಆಗಲಿಲ್ಲ. 2 ಸಿಕ್ಸರ್, 1 ಬೌಂಡರಿ ಸಿಡಿಸಿದ ಮಿಲ್ಲರ್ ತಂಡವನ್ನು 1 ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.