ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏಳು ವಿಕೆಟ್‌ ಉರುಳಿಸಿದ ಸಾರಂಶ್ ಜೈನ್; 99 ರನ್‌ಗೆ ಬಿಹಾರ ಆಲೌಟ್

Ranji Trophy 2026: ಕರ್ನಾಟಕ ವಿರುದ್ಧ ಆಡುತ್ತಿರುವ ತ್ರಿಪುರಾ ತಂಡ ಭೋಜನ ವಿರಾಮದ ವೇಳೆಗೆ ಪ್ರವಾಸಿ ತಂಡವು 2 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿದೆ. ತಮಿಳುನಾಡು ವಿರುದ್ಧ ರೈಲ್ವೇಸ್ 83/7 ರನ್ ಗಳಿಸಿದೆ.

ಏಳು ವಿಕೆಟ್‌ ಉರುಳಿಸಿದ ಸಾರಂಶ್ ಜೈನ್; 99 ರನ್‌ಗೆ ಬಿಹಾರ ಆಲೌಟ್

Saransh Jain -

Abhilash BC
Abhilash BC Oct 26, 2026 12:50 PM

ನವದೆಹಲಿ, ಅ.26: ರಣಜಿ ಟ್ರೋಫಿಯ ಮೂರನೇ ಸುತ್ತಿನ ಪಂದ್ಯಗಳಲ್ಲಿ, ಸೋಮವಾರ ಬಿಹಾರದ ವಿರುದ್ಧ ಮಧ್ಯಪ್ರದೇಶದ ಸ್ಪಿನ್ನರ್ ಸಾರಂಶ್ ಜೈನ್ ಏಳು ವಿಕೆಟ್‌ಗಳನ್ನು ಪಡೆದರು. ಇವರ ಈ ಸಾಧನೆಯ ನೆರವಿನಿಂದ ಮಧ್ಯಪ್ರದೇಶ ತಂಡವು ಬಿಹಾರವನ್ನು 99 ರನ್‌ಗಳಿಗೆ ಆಲೌಟ್ ಮಾಡಿತು.

ಸಾರಂಶ್ 40 ರನ್‌ಗಳಿಗೆ 7 ವಿಕೆಟ್‌ಗಳನ್ನು ಪಡೆದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವಾಗಿದೆ. ಇತ್ತೀಚೆಗೆ, ಆಗಸ್ಟ್ 23 ರಿಂದ 27 ರವರೆಗೆ ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಾರಂಶ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆ ಪಂದ್ಯದಲ್ಲಿ ಸಾರಾಂಶ್ ಮೂರು ವಿಕೆಟ್‌ಗಳನ್ನು ಪಡೆದರು. ಇದು ಇಲ್ಲಿಯವರೆಗಿನ ಅವರ ಏಕೈಕ ಅಂತರರಾಷ್ಟ್ರೀಯ ಪ್ರದರ್ಶನವಾಗಿದೆ. 33 ವರ್ಷದ ಈ ಆಟಗಾರ ಮಧ್ಯಪ್ರದೇಶ ಪರ 59 ಪ್ರಥಮ ದರ್ಜೆ (FC) ಪಂದ್ಯಗಳನ್ನು ಆಡಿದ್ದು, 28.23ರ ಸರಾಸರಿಯಲ್ಲಿ 195 ವಿಕೆಟ್‌ಗಳನ್ನು ಪಡೆದಿದ್ದಾರೆ.

ಶತಕ ಬಾರಿಸಿ ಮಿಥಾಲಿ ರಾಜ್‌ ದಾಖಲೆ ಮುರಿದ ಹರ್ಮನ್‌ಪ್ರೀತ್‌ ಕೌರ್‌

2025-26ರ ದೇಶೀಯ ಕ್ರಿಕೆಟ್ ಋತು ಜೈನ್ ವೃತ್ತಿಜೀವನದ ಮತ್ತೊಂದು ಮಹತ್ವದ ಹೆಜ್ಜೆಯಾಯಿತು. ಅವರು 57.55ರ ಸರಾಸರಿಯಲ್ಲಿ 518 ರನ್ ಗಳಿಸುವುದರ ಜೊತೆಗೆ 20.43ರ ಸರಾಸರಿಯಲ್ಲಿ 30 ವಿಕೆಟ್ ಪಡೆದರು. ಇದಾದ ಬಳಿಕ ದುಲೀಪ್ ಟ್ರೋಫಿಯಲ್ಲಿ ಸೆಂಟ್ರಲ್ ಝೋನ್ ಪರ ಅದ್ಭುತ ಪ್ರದರ್ಶನ ನೀಡಿದ ಜೈನ್ ‘ಪ್ಲೇಯರ್ ಆಫ್ ದಿ ಸೀರೀಸ್’ ಗೌರವಕ್ಕೆ ಪಾತ್ರರಾದರು. ಎರಡು ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ ಅವರು ಎರಡು ಅರ್ಧಶತಕಗಳನ್ನೂ ಸಿಡಿಸಿದರು.

ಕರ್ನಾಟಕ ವಿರುದ್ಧ ಆಡುತ್ತಿರುವ ತ್ರಿಪುರಾ ತಂಡ ಭೋಜನ ವಿರಾಮದ ವೇಳೆಗೆ ಪ್ರವಾಸಿ ತಂಡವು 2 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿದೆ. ತಮಿಳುನಾಡು ವಿರುದ್ಧ ರೈಲ್ವೇಸ್ 83/7 ರನ್ ಗಳಿಸಿದೆ.