ಮಹಿಳಾ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದ ಶ್ರೀ ಚರಣಿ
ICC T20 Rankings: ಇಂಗ್ಲೆಂಡ್ ತಂಡದ ಆಟಗಾರ್ತಿ ಚಾರ್ಲಿ ಡೀನ್ ಮೂರು ಪಂದ್ಯಗಳಿಂದ ಐದು ವಿಕೆಟ್‌ಗಳನ್ನು ಪಡೆದ ನಂತರ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಮಾಜಿ ವಿಶ್ವದ ನಂ. 1 ಸೋಫಿ ಎಕ್ಲೆಸ್ಟೋನ್ ಕೂಡ ನಾಲ್ಕು ಸ್ಥಾನ ಜಿಗಿದು ಒಟ್ಟಾರೆಯಾಗಿ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ.
Sree Charani -
ದುಬೈ, ಜೂ. 23: ಐಸಿಸಿ ಮಹಿಳಾ ನೂತನ ಟಿ20 ಶ್ರೇಯಾಂಕದಲ್ಲಿ ಭಾರತದ ಎಡಗೈ ಸ್ಪಿನ್ನರ್ ಶ್ರೀ ಚರಣಿ(Sree Charani) ಅವರು ನಂ.1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಪ್ರಸಕ್ತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಆಡಿದ 3 ಪಂದ್ಯಗಳಿಂದ 10 ವಿಕೆಟ್ ಕಿತ್ತಿದ್ದಾರೆ. ಈ ಪ್ರದರ್ಶನ ಅವರ ನಂ.1 ಸ್ಥಾನಕ್ಕೆ ಕಾರಣವಾಯಿತು.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಕೇವಲ 12 ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲೇ ಶ್ರೀ ಚರಣಿ, ಅಂತರರಾಷ್ಟ್ರೀಯ ಕ್ರಿಕೆಟ್‌ನ ಸಂಪೂರ್ಣ ಶಿಖರವನ್ನು ಏರಿದ್ದಾರೆ. ಆಂಧ್ರಪ್ರದೇಶದ ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್ ಇಂಗ್ಲೆಂಡ್‌ನ ಲಿನ್ಸೆ ಸ್ಮಿತ್ ಅವರನ್ನು ಹಿಂದಿಕ್ಕಿ ವಿಶ್ವದ ನಂ.1 ಟಿ 20 ಬೌಲರ್ ಆಗಿದ್ದಾರೆ.
ಏತನ್ಮಧ್ಯೆ, ಭಾರತದ ಪ್ರಮುಖ ಸ್ಪಿನ್ನರ್ ದೀಪ್ತಿ ಶರ್ಮಾ ಅವರು ಟಾಪ್ 5 ರಿಂದ ಹೊರಬಿದ್ದಿದ್ದಾರೆ. ಟಿ20 ವಿಶ್ವಕಪ್ ಅನ್ನು ಐದು ವಿಕೆಟ್ ಗೊಂಚಲಿನೊಂದಿಗೆ ಆರಂಭಿಸಿದರೂ, ಆಫ್-ಸ್ಪಿನ್ನರ್ ಇತ್ತೀಚಿನ ಶ್ರೇಯಾಂಕದಲ್ಲಿ 8 ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಮುಂದಿನ ಐಪಿಎಲ್‌ಗೂ ಮುನ್ನವೇ ಡೆಲ್ಲಿ ತಂಡ ಸೇರಿದ ರಿಷಭ್ ಪಂತ್
ಇಂಗ್ಲೆಂಡ್ ತಂಡದ ಆಟಗಾರ್ತಿ ಚಾರ್ಲಿ ಡೀನ್ ಮೂರು ಪಂದ್ಯಗಳಿಂದ ಐದು ವಿಕೆಟ್‌ಗಳನ್ನು ಪಡೆದ ನಂತರ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಮಾಜಿ ವಿಶ್ವದ ನಂ. 1 ಸೋಫಿ ಎಕ್ಲೆಸ್ಟೋನ್ ಕೂಡ ನಾಲ್ಕು ಸ್ಥಾನ ಜಿಗಿದು ಒಟ್ಟಾರೆಯಾಗಿ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ.
ಏತನ್ಮಧ್ಯೆ, ಮಹಿಳಾ ಟಿ20ಐ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಜಾರ್ಜಿಯಾ ವೋಲ್ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭಾರತದ ಸ್ಮೃತಿ ಮಂಧಾನ ಐದನೇ ಸ್ಥಾನದಲ್ಲಿದ್ದರೆ, ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಒಂದು ಸ್ಥಾನ ಏರಿಕೆಯಾಗಿ 6ನೇ ಸ್ಥಾನಕ್ಕೆ ತಲುಪಿದ್ದಾರೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಒಂದು ಸ್ಥಾನ ಏರಿಕೆಯಾಗಿ 10ನೇ ಸ್ಥಾನಕ್ಕೆ ತಲುಪಿದ್ದಾರೆ.
ಟಾಪ್-10 ಟಿ20 ಬೌಲರ್‌ಗಳು
ಶ್ರೀ ಚರಣಿ (ಭಾರತ)- 753 ಅಂಕಗಳು
ಚಾರ್ಲಿ ಡೀನ್ (ಇಂಗ್ಲೆಂಡ್)- 733 ಅಂಕಗಳು
ಲಿನ್ಸೆ ಸ್ಮಿತ್ (ಇಂಗ್ಲೆಂಡ್)-726 ಅಂಕಗಳು
ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್)- 722 ಅಂಕಗಳು
ಸಾದಿಯಾ ಇಕ್ಬಾಲ್ (ಪಾಕಿಸ್ತಾನ)- 714 ಅಂಕಗಳು
ನಾನ್ಕುಲುಲೆಕೊ ಮ್ಲಾಬಾ (ದಕ್ಷಿಣ ಆಫ್ರಿಕಾ)- 713 ಅಂಕಗಳು
ಲಾರೆನ್ ಬೆಲ್ (ಇಂಗ್ಲೆಂಡ್)- 710 ಅಂಕಗಳು
ದೀಪ್ತಿ ಶರ್ಮಾ (ಭಾರತ)- 708 ಅಂಕಗಳು
ಅನ್ನಾಬೆಲ್ ಸದರ್ಲ್ಯಾಂಡ್ (ಆಸ್ಟ್ರೇಲಿಯಾ)- 704 ಅಂಕಗಳು
ನಶ್ರಾ ಸುಂಧು (ಪಾಕಿಸ್ತಾನ)- 687 ಅಂಕಗಳು