ಇಂದಿನ ಭಾರತ-ಐರ್ಲೆಂಡ್ ಮೊದಲ ಟಿ20 ನಡೆಯುವುದು ಅನುಮಾನ; ಪಂದ್ಯಕ್ಕೆ ಭಾರೀ ಮಳೆ ಭೀತಿ
IND vs IRE 1st T20I: ಕಳೆದ ಕೆಲವು ದಿನಗಳಿಂದ ಬೆಲ್‌ಫಾಸ್ಟ್‌ನಲ್ಲಿ ಹವಾಮಾನವು ಬದಲಾಗುತ್ತಿದ್ದು, ಪರಿಸ್ಥಿತಿಯನ್ನು ಊಹಿಸುವುದು ಕಷ್ಟಕರವಾಗಿದೆ. ಮಳೆಯ ಅಡಚಣೆಗಳು ಇದ್ದರೂ ಸಹ, ಆರಂಭಿಕ T20I ಪೂರ್ಣಗೊಳ್ಳಬಹುದೆಂಬ ಭರವಸೆಯನ್ನು ಹುಟ್ಟುಹಾಕಿದೆ. ಪಂದ್ಯವು ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ ಅನ್ನು ಭಾರತೀಯ ಕಾಲಮಾನ ಸಂಜೆ 5:30 ಕ್ಕೆ ನಿಗದಿಪಡಿಸಲಾಗಿದೆ.
IND vs IRE 1st T20I -
ಬೆಲ್‌ಫಾಸ್ಟ್ , ಜೂ.26: ಮಿಂಚಿನ ಬ್ಯಾಟಿಂಗ್‌ನಿಂದ ಸಂಚಲನ ಮೂಡಿಸಿರುವ 15 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿಯ ಪದಾರ್ಪಣ ಪಂದ್ಯಕ್ಕಾಗಿ ಕಾದು ಕುಳಿತಿರುವ ಅವರ ಅಭಿಮಾನಿಗಳಗೆ ನಿರಾಸೆಯಾಗುವ ಸಾಧ್ಯತೆಯೊಂದು ಕಂಡುಬಂದಿದೆ. ಇಂದು ನಡೆಯುವ ಭಾರತ ಮತ್ತು ಐರ್ಲೆಂಡ್(IND vs IRE 1st T20I) ನಡುವಣ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಭಾರೀ ಮಳೆ ಭೀತಿ ಎದುರಾಗಿದೆ.
ಬಿಬಿಸಿ ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯದ ಆರಂಭಕ್ಕೂ ಮುನ್ನ ಹಗುರ ಮಳೆ ಮತ್ತು ಮೋಡ ಕವಿದ ವಾತಾವರಣವಿರಲಿದ್ದು, ಮಧ್ಯಾಹ್ನ ಮತ್ತು ಸಂಜೆ ಮಳೆಯಾಗುವ ಸಾಧ್ಯತೆಯಿದೆ. ನಿಗದಿತ ಪಂದ್ಯದ ಸಮಯದಲ್ಲಿ ಮಳೆಯ ಸಂಭವನೀಯತೆ ಶೇ. 30 ರಿಂದ 43 ರವರೆಗೆ ಇರುತ್ತದೆ ಎಂದು ಮುನ್ಸೂಚನೆ ನೀಡಿದೆ.
ಕಳೆದ ಕೆಲವು ದಿನಗಳಿಂದ ಬೆಲ್‌ಫಾಸ್ಟ್‌ನಲ್ಲಿ ಹವಾಮಾನವು ಬದಲಾಗುತ್ತಿದ್ದು, ಪರಿಸ್ಥಿತಿಯನ್ನು ಊಹಿಸುವುದು ಕಷ್ಟಕರವಾಗಿದೆ. ಮಳೆಯ ಅಡಚಣೆಗಳು ಇದ್ದರೂ ಸಹ, ಆರಂಭಿಕ T20I ಪೂರ್ಣಗೊಳ್ಳಬಹುದೆಂಬ ಭರವಸೆಯನ್ನು ಹುಟ್ಟುಹಾಕಿದೆ. ಪಂದ್ಯವು ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ ಅನ್ನು ಭಾರತೀಯ ಕಾಲಮಾನ ಸಂಜೆ 5:30 ಕ್ಕೆ ನಿಗದಿಪಡಿಸಲಾಗಿದೆ.
ಭಾರತದ ಅಭಿಮಾನಿಗಳು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯವನ್ನು ನೇರಪ್ರಸಾರ ವೀಕ್ಷಿಸಬಹುದು. ಸೋನಿ ಎಲ್‌ಐವಿ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ನೇರಪ್ರಸಾರ ಲಭ್ಯವಿರುತ್ತದೆ.
All set for a new beginning 🫡
— BCCI (@BCCI) June 25, 2026
Captain @ShreyasIyer15 addresses his first team huddle as #TeamIndia commence training at Belfast.#IREvIND pic.twitter.com/R1G2LMj2Zm
ವೈಭವ್ ಸೂರ್ಯವಂಶಿ ಅವರಿಗೆ ಆಡುವ 11ರಲ್ಲಿ ಸ್ಥಾನ ಕಲ್ಪಿಸುವುದು ಭಾರತ ತಂಡಕ್ಕೆ ಸವಾಲಾಗಿದೆ. ಹೌದು, ಪ್ರಸಕ್ತ ಭಾರತದ ಅಗ್ರ ಮೂವರು ಆಟಗಾರರಾದ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರನ್ನು ಕಡೆಗಣಿಸುವುದು ಸುಲಭವಲ್ಲ. ಇತ್ತೀಚೆಗೆ ಈ ಮೂವರೂ ಚುಟುಕು ಮಾದರಿಯಲ್ಲಿ ಉತ್ತಮವಾಗಿಯೇ ಆಡಿದ್ದಾರೆ. ವಿಶ್ವಕಪ್ ಫೈನಲ್‌ನಲ್ಲಿ ಮೂವರೂ ಅರ್ಧ ಶತಕಗಳನ್ನು ಬಾರಿಸಿದ್ದಾರೆ.
ರಾಜಸ್ಥಾನದಲ್ಲಿ ಜನಿಸಿದ ಐರ್ಲೆಂಡ್ ವೇಗಿ ಜೈ ಮೂಂದ್ರ ಯಾರು?
ವೈಭವ್‌ಗೆ ಅವಕಾಶ ನೀಡಬೇಕಾದರೆ ಸ್ಯಾಮ್ಸನ್– ಅಭಿಷೇಕ್ ಇವರಲ್ಲಿ ಒಬ್ಬರನ್ನು ಕೈಬಿಡಬೇಕಾಗುತ್ತದೆ. ಇಲ್ಲವೇ ಸ್ಯಾಮ್ಸನ್ ಅವರನ್ನು ಕೆಳಕ್ರಮಾಂಕದಲ್ಲಿ ಆಡಿಸಬೇಕಾಗುತ್ತದೆ. ಆದರೆ ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ಈಗ ಕ್ರಮವಾಗಿ ನಾಯಕ ಶ್ರೇಯಸ್ ಅಯ್ಯರ್ ಮತ್ತು ಉಪನಾಯಕ ತಿಲಕ್ ವರ್ಮಾ ಅವರು ಆಡುವ ಸಾಧ್ಯತೆಯಿದೆ. ಒಂದೊಮ್ಮೆ ಆರನೇ ಕ್ರಮಾಂಕದಲ್ಲಿ ಸಂಜು ಅವರನ್ನು ಆಡಿಸಿದರೆ ಆಗ ಒಬ್ಬ ಬೌಲರ್‌ನನ್ನು ಕೈಬಿಡಬೇಕಾಗುತ್ತದೆ. ಒಟ್ಟಾರೆ ಪ್ಲೇಯಿಂಗ್ ಇಲೆವೆಬನ್ ಆಯ್ಕೆಯೇ ಭಾರತಕ್ಕೆ ಜಟಿಲವಾಗಿದೆ.
ತಂಡಗಳು
ಭಾರತ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪ ನಾಯಕ), ರವಿ ಬಿಷ್ಣೋಯಿ, ಅಭಿಷೇಕ್ ಶರ್ಮಾ, ಸೂರ್ಯಾಂಶ್ ಶೆಡ್ಗೆ, ಪ್ರಸಿದ್ಧ ಕೃಷ್ಣ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ.
ಐರ್ಲೆಂಡ್: ಲೋರ್ಕನ್ ಟಕರ್ (ನಾಯಕ), ರಾಸ್ ಅಡೇರ್, ಬೆನ್ ಕ್ಯಾಲಿಟ್ಝ್, ಗರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀನ್ ಡೊಹೆನಿ, ಮ್ಯಾಥ್ಯೂ ಹಂಫ್ರೀಸ್, ಗ್ಯಾವಿನ್ ಹೊಯೆ, ಮ್ಯಾಥ್ಯೂ ಹೊಲಾರ್ಡ್, ಲಿಯಾಮ್ ಮೆಕಾರ್ತಿ, ಜೈ ಮೂಂಡ್ರಾ, ಹ್ಯಾರಿ ಟೆಕ್ಟರ್, ಟಿಮ್ ಟೆಕ್ಟರ್ ಮತ್ತು ರುಬೆನ್ ವಿಲ್ಸನ್.