ಮುಂಬೈ ಪಂದ್ಯಕ್ಕೂ ಮುನ್ನ ಉರ್ವಿಲ್ ಪಟೇಲ್ ಸ್ಫೋಟಕ ಬ್ಯಾಟಿಂಗ್ ವೀಕ್ಷಿಸಿದ ಕೊಹ್ಲಿ
Kohli Stops To Watch Urvil Patel batting: 204 ರನ್‌ಗಳ ದೊಡ್ಡ ಗುರಿಯನ್ನು ಬೆನ್ನಟ್ಟಿದ ಚೆನ್ನೈಗೆ ಉರ್ವಿಲ್ ಪಟೇಲ್, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ನೆರವಾದರು. ಕೇವಲ 13 ಎಸೆತಗಳಲ್ಲಿ 50 ರನ್ ಸಿಡಿಸಿದರು. ಲಕ್ನೋ ತಂಡದ ಪ್ರತಿಯೊಬ್ಬ ಬೌಲರ್‌ಗೂ ಬೆವರಿಳಿಸಿದರು. ಮೊದಲು ಆವೇಶ್ ಖಾನ್ ಓವರ್‌ನಲ್ಲಿ ಸಿಕ್ಸರ್‌ಗಳ ಮಳೆ ಸುರಿಸಿದರು. ಕೇವಲ 23 ಎಸೆತಗಳಲ್ಲಿ 2 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್‌ಗಳೊಂದಿಗೆ 65 ರನ್ ಗಳಿಸಿದರು.
Virat Kohli Stops To Watch Urvil Patel batting -
ರಾಯ್ಪುರ, ಮೇ 11: ಭಾನುವಾರ ನಡೆದಿದ್ದ ಐಪಿಎಲ್(IPL 2026) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2 ವಿಕೆಟ್ ಅಂತರದ ಗೆಲುವು ಸಾಧಿಸಿತು. ಈ ಪಂದ್ಯಕ್ಕೂ ಮುನ್ನ ನಡೆದಿದ್ದ ಮತ್ತೊಂದು ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿತ್ತು. ಈ ರೋಚಕ ಪಂದ್ಯವನ್ನು ಆರ್‌ಸಿಬಿ ವಿರಾಟ್ ಕೊಹ್ಲಿ(Virat Kohli) ಗಂಭೀರವಾಗಿ ವೀಕ್ಷಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗಿದೆ.
ಅಧಿಕೃತ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ಹಂಚಿಕೊಂಡಿರುವ ವೈರಲ್ ವೀಡಿಯೊದಲ್ಲಿ, ಕೊಹ್ಲಿ ಹೈಡ್ರೇಶನ್ ಬ್ರೇಕ್ ಸಮಯದಲ್ಲಿ ಸಿಎಸ್‌ಕೆ-ಎಲ್‌ಎಸ್‌ಜಿ ಪಂದ್ಯವನ್ನು ವೀಕ್ಷಿಸುತ್ತಿರುವುದನ್ನು ಕಾಣಬಹುದು. ಆ ಸಮಯದಲ್ಲಿ, ಉರ್ವಿಲ್ ತನ್ನ ಅದ್ಭುತ ಅರ್ಧಶತಕವನ್ನು ಆಚರಿಸುತ್ತಿದ್ದರು.
From Chennai to Raipur! 💛❤️
— Star Sports (@StarSportsIndia) May 10, 2026
Even @imVkohli stopped for a moment to catch a glimpse of #UrvilPatel's historic 65(23) 👏#TATAIPL Revenge Week 2026 ➡️ #RCBvMI | LIVE NOW 👉https://t.co/y41wRLoDHD pic.twitter.com/3J2CfFkxbV
204 ರನ್‌ಗಳ ದೊಡ್ಡ ಗುರಿಯನ್ನು ಬೆನ್ನಟ್ಟಿದ ಚೆನ್ನೈಗೆ ಉರ್ವಿಲ್ ಪಟೇಲ್, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ನೆರವಾದರು. ಕೇವಲ 13 ಎಸೆತಗಳಲ್ಲಿ 50 ರನ್ ಸಿಡಿಸಿದರು. ಲಕ್ನೋ ತಂಡದ ಪ್ರತಿಯೊಬ್ಬ ಬೌಲರ್‌ಗೂ ಬೆವರಿಳಿಸಿದರು. ಮೊದಲು ಆವೇಶ್ ಖಾನ್ ಓವರ್‌ನಲ್ಲಿ ಸಿಕ್ಸರ್‌ಗಳ ಮಳೆ ಸುರಿಸಿದರು. ಕೇವಲ 23 ಎಸೆತಗಳಲ್ಲಿ 2 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್‌ಗಳೊಂದಿಗೆ 65 ರನ್ ಗಳಿಸಿದರು.
RCB vs MI: ಗೋಲ್ಡನ್ ಡಕ್ ಮೂಲಕ ಅನಗತ್ಯ ದಾಖಲೆ ಬರೆದ ವಿರಾಟ್ ಕೊಹ್ಲಿ
ಅರ್ಧಶತಕ ಗಳಿಸಿದ ನಂತರ ಉರ್ವಿಲ್ ಪಟೇಲ್ ತಮ್ಮ ಜೇಬಿನಿಂದ ಒಂದು ಚೀಟಿ ತೆಗೆದು ವಿಶಿಷ್ಟವಾಗಿ ಸಂಭ್ರಮಿಸಿದರು. ಆ ಚೀಟಿಯಲ್ಲಿ"ಅಪ್ಪ, ಇದು ನಿಮಗಾಗಿ. ನೀವು ಏನಾಗಬೇಕೆಂದು ಬಯಸಿದ್ದಿರೋ, ಅದನ್ನು ನಾನು ಮಾಡಿ ತೋರಿಸಿದ್ದೇನೆ" ಎಂದು ಬರೆಯಲಾಗಿತ್ತು.
ಮುಂಬೈ ವಿರುದ್ಧದ ಪಂದ್ಯದಲ್ಲಿ ಗೋಲ್ಡನ್ ಡಕ್‌ಗೆ ಬಲಿಯಾದ ವಿರಾಟ್ ಕೊಹ್ಲಿ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಇದು ಕೊಹ್ಲಿ ಐಪಿಎಲ್‌ನಲ್ಲಿ 12ನೇ ಡಕ್ ಮತ್ತು ಟೂರ್ನಮೆಂಟ್ ಇತಿಹಾಸದಲ್ಲಿ ಎಂಟನೇ ಗೋಲ್ಡನ್ ಡಕ್ ಆಗಿದೆ. ಹಾಲಿ ಆವೃತ್ತಿಯಲ್ಲಿ ಸತತ ಎರಡನೇ ಡಕ್. ಕಳೆದ ಲಖನೌ ಎದುರಿನ ಪಂದ್ಯದಲ್ಲಿಯೂ ಕೊಹ್ಲಿ ಶೂನ್ಯ ಸುತ್ತಿದ್ದರು.