ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜಸ್ಥಾನ ರಾಯಲ್ಸ್ ಮಾಜಿ ಆಟಗಾರ ಆರ್ಯಮಾನ್ ಬಿರ್ಲಾ ಈಗ ಆರ್‌ಸಿಬಿಯ ಹೊಸ ಅಧ್ಯಕ್ಷ!

Who Is Aryaman Birla: ಆರ್​ಸಿಬಿ ತಂಡದ ಶೇ. 100 ಷೇರು ಕೂಡ ಈ ಹೊಸ ಮಾಲೀಕರ ಪಾಲಾಗಲಿವೆ. ಇದರಲ್ಲಿ ಆರ್​ಸಿಬಿ ಪುರುಷರ ತಂಡ ಮಾತ್ರವಲ್ಲದೆ ಡಬ್ಲ್ಯುಪಿಎಲ್​ನಲ್ಲಿ ಆಡುವ ಆರ್​ಸಿಬಿ ಮಹಿಳಾ ತಂಡದ ಒಡೆತನವೂ ಸೇರಿದೆ. ಈ ಮೂಲಕ ಆರ್​ಸಿಬಿ, ಐಪಿಎಲ್​ ಇತಿಹಾಸದ ಅತ್ಯಂತ ದುಬಾರಿ ತಂಡ ಎನಿಸಿದೆ.

ಆರ್‌ಸಿಬಿಯ ಹೊಸ ಅಧ್ಯಕ್ಷ ಆರ್ಯಮಾನ್ ಬಿರ್ಲಾ ಯಾರು?

File photo of Aryaman Birla -

Abhilash BC
Abhilash BC Mar 25, 2026 8:32 AM

ಬೆಂಗಳೂರು, ಮಾ.25: ಹಾಲಿ ಚಾಂಪಿಯನ್​ ಆರ್​ಸಿಬಿ (RCB) ತಂಡ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಆದಿತ್ಯ ಬಿರ್ಲಾ ಗ್ರೂಪ್​, ಟೈಮ್ಸ್​ ಆಫ್​ ಇಂಡಿಯಾ ಗ್ರೂಪ್​, ಬೋಲ್ಟ್​ ವೆಂಚರ್ಸ್​ ಮತ್ತು ಬ್ಲ್ಯಾಕ್​​ಸ್ಟೋನ್​ ಕಂಪನಿಗಳ ಒಕ್ಕೂಟವು 16,706 ಕೋಟಿ ರೂ.ಗಳಿಗೆ (1.78 ಶತಕೋಟಿ ಡಾಲರ್​) ಆರ್​ಸಿಬಿ ತಂಡವನ್ನು ಖರೀದಿಸಿದೆ. 4 ಕಂಪನಿಗಳ ಒಕ್ಕೂಟವು ಆರ್​ಸಿಬಿ ತಂಡದ ಹಾಲಿ ಒಡೆತನ ಹೊಂದಿರುವ ಯುನೈಟೆಡ್​ ಸ್ಪಿರಿಟ್ಸ್​ ಲಿಮಿಟೆಡ್​ (ಯುಎಸ್​ಎಲ್​) ಜತೆ ಮಾರಾಟ ಒಪ್ಪಂದಕ್ಕೆ ಸಹಿ ಹಾಕಿವೆ. ಆದಿತ್ಯ ಬಿರ್ಲಾ ಗ್ರೂಪ್(Aditya Birla Group)​ನ ನಿರ್ದೇಶಕ ಆರ್ಯಮಾನ್​ ವಿಕ್ರಮ್​ ಬಿರ್ಲಾ ಆರ್​ಸಿಬಿಯ ಹೊಸ ಮಾಲೀಕತ್ವ ಸಂಸ್ಥೆಯ ಚೇರ್ಮನ್​ ಆಗಿರಲಿದ್ದರೆ. ಈ ಆರ್ಯಮಾನ್​ ವಿಕ್ರಮ್​ ಬಿರ್ಲಾ ಯಾರು?(Who Is Aryaman Birla) ಎಂಬ ವರದಿ ಇಲ್ಲಿದೆ.

ಮಾಜಿ ಕ್ರಿಕೆಟಿಗ ಆರ್ಯಮನ್ ಬಿರ್ಲಾ

ಆರ್ಯಮನ್ ಬಿರ್ಲಾ, ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರ. 28 ವರ್ಷದ ಈ ಆಟಗಾರ ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ಪರ ಆಡಿದ್ದ ಮಾಜಿ ಕ್ರಿಕೆಟಿಗ. ಆರ್‌ಸಿಬಿ ಹಾಲಿ ನಾಯಕ ರಜತ್ ಪಾಟಿದಾರ್ ಮತ್ತು ಹರಾಜಿನಲ್ಲಿ 7 ಕೋಟಿ ರೂ.ಗೆ ಖರೀದಿಯಾದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು.

ಎಡಗೈ ಬ್ಯಾಟ್ಸ್‌ಮನ್ ಆಗಿದ್ದ ಆರ್ಯಮನ್‌, ಮಧ್ಯಪ್ರದೇಶ ಪರ ಒಂಬತ್ತು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಮತ್ತು ಈಡನ್ ಗಾರ್ಡನ್ಸ್‌ನಲ್ಲಿ ಬಂಗಾಳ ವಿರುದ್ಧದ ಒಂದು ಶತಕ ಸೇರಿದಂತೆ 414 ರನ್‌ಗಳನ್ನು ಗಳಿಸಿದ್ದಾರೆ. ನಾಲ್ಕು ಲಿಸ್ಟ್-ಎ ಪಂದ್ಯಗಳಲ್ಲಿ 36 ರನ್‌ಗಳನ್ನು ಗಳಿಸಿದ್ದಾರೆ. ವಿಶೇಷ ಎಂದರೆ ಆರ್ಯಮಾನ್ ಅವರನ್ನು ಐಪಿಎಲ್ 2018 ರ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ 30 ಲಕ್ಷ ರೂ.ಗೆ ಖರೀದಿಸಿತ್ತು. ಆದಾಗ್ಯೂ, ಅವರು ಫ್ರಾಂಚೈಸಿಗಾಗಿ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ ಮತ್ತು 2020 ರ ಋತುವಿಗೆ ಮುಂಚಿತವಾಗಿ ಬಿಡುಗಡೆ ಮಾಡಲಾಯಿತು.

ಆರ್‌ಸಿಬಿ ಬಗ್ಗೆ ಆರ್ಯಮನ್ ಬಿರ್ಲಾ ಹೇಳಿದ್ದೇನು?

"ಆರ್‌ಸಿಬಿಯ ಮುಂದಿನ ಹಂತದ ಬೆಳವಣಿಗೆಯನ್ನು ರೂಪಿಸಲು ಈ ಪಾಲುದಾರಿಕೆಯಲ್ಲಿ ಒಟ್ಟಿಗೆ ಸೇರುವುದು ಒಂದು ಸೌಭಾಗ್ಯ. ಈ ಪಾಲುದಾರಿಕೆಯು ಕ್ರೀಡೆ, ಮಾಧ್ಯಮ ಮತ್ತು ಗ್ರಾಹಕ ವ್ಯವಹಾರಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಒಟ್ಟುಗೂಡಿಸುತ್ತದೆ" ಎಂದು ಆರ್ಯಮನ್‌ ಹೇಳಿದರು.

RCB: ನಂದಿನಿ ಉತ್ಪನ್ನಗಳ ಪ್ರಚಾರಕ್ಕೆ RCB ಜೊತೆ ಒಪ್ಪಂದ, ಈ ಐಪಿಎಲ್‌ ಸೀಸನ್‌ನಲ್ಲಿ ಆರ್‌ಸಿಬಿಗೆ ಕೆಎಂಎಫ್‌ ಡೈರಿ ಪಾರ್ಟ್‌ನರ್‌

ಆರ್​ಸಿಬಿ ತಂಡದ ಶೇ. 100 ಷೇರು ಕೂಡ ಈ ಹೊಸ ಮಾಲೀಕರ ಪಾಲಾಗಲಿವೆ. ಇದರಲ್ಲಿ ಆರ್​ಸಿಬಿ ಪುರುಷರ ತಂಡ ಮಾತ್ರವಲ್ಲದೆ ಡಬ್ಲ್ಯುಪಿಎಲ್​ನಲ್ಲಿ ಆಡುವ ಆರ್​ಸಿಬಿ ಮಹಿಳಾ ತಂಡದ ಒಡೆತನವೂ ಸೇರಿದೆ. ಈ ಮೂಲಕ ಆರ್​ಸಿಬಿ, ಐಪಿಎಲ್​ ಇತಿಹಾಸದ ಅತ್ಯಂತ ದುಬಾರಿ ತಂಡ ಎನಿಸಿದೆ.