ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Women’s Hockey Asia Cup 2025: ಮಹಿಳಾ ಹಾಕಿ ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ

ಭಾರತ ತಂಡವು ‘ಬಿ’ ಗುಂಪಿನಲ್ಲಿದ್ದು, ಥಾಯ್ಲೆಂಡ್‌, ಜಪಾನ್‌ ಮತ್ತು ಸಿಂಗಾಪುರ ಸಹ ಇದೇ ಗುಂಪಿನಲ್ಲಿವೆ. ಆತಿಥೇಯ ಚೀನಾ, ಕೊರಿಯಾ, ಮಲೇಷ್ಯಾ ಮತ್ತು ಚೀನಾ ತೈಪೆ ತಂಡಗಳು ‘ಎ’ ಗುಂಪಿನಲ್ಲಿವೆ. ಈ ಟೂರ್ನಿಯಲ್ಲಿ ಗೆದ್ದ ತಂಡವು 2026ರ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲಿದೆ.

ಮಹಿಳಾ ಹಾಕಿ ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ

Abhilash BC Abhilash BC Aug 21, 2025 4:43 PM

ನವದೆಹಲಿ: ಚೀನಾದ ಹಾಂಗ್‌ಝೌನಲ್ಲಿ ಸೆಪ್ಟೆಂಬರ್‌ 5 ರಿಂದ 14 ರವರೆಗೆ ನಡೆಯಲಿರುವ ಮಹಿಳಾ ಏಷ್ಯಾಕಪ್ 2025(Women’s Hockey Asia Cup 2025) ಟೂರ್ನಿಗೆ ಹಾಕಿ ಇಂಡಿಯಾ(Hockey India) ಗುರುವಾರ 20 ಸದಸ್ಯರ ತಂಡವನ್ನು ಪ್ರಕಟಿಸಿದೆ. ಸಲಿಮಾ ಟೆಟೆ(Salima Tete) ಭಾರತವನ್ನು ಮುನ್ನಡೆಸಲಿದ್ದಾರೆ. ಭಾರತ ತಂಡವು ‘ಬಿ’ ಗುಂಪಿನಲ್ಲಿದ್ದು, ಥಾಯ್ಲೆಂಡ್‌, ಜಪಾನ್‌ ಮತ್ತು ಸಿಂಗಾಪುರ ಸಹ ಇದೇ ಗುಂಪಿನಲ್ಲಿವೆ. ಆತಿಥೇಯ ಚೀನಾ, ಕೊರಿಯಾ, ಮಲೇಷ್ಯಾ ಮತ್ತು ಚೀನಾ ತೈಪೆ ತಂಡಗಳು ‘ಎ’ ಗುಂಪಿನಲ್ಲಿವೆ. ಈ ಟೂರ್ನಿಯಲ್ಲಿ ಗೆದ್ದ ತಂಡವು 2026ರ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲಿದೆ.

ಟೂರ್ನಿಯಲ್ಲಿ ಭಾರತ ತಂಡ ಥಾಯ್ಲೆಂಡ್‌ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಸೆಪ್ಟೆಂಬರ್‌ 5ರಂದು ನಡೆಯಲಿದೆ. ಸೆ. 6ರಂದು ಹಾಲಿ ಚಾಂಪಿಯನ್ ಜಪಾನ್‌ ತಂಡವನ್ನು ಎದುರಿಸಲಿದ್ದು, 8ರಂದು ಕೊನೆಯ ಲೀಗ್‌ ಪಂದ್ಯದಲ್ಲಿ ಸಿಂಗಾಪುರ ವಿರುದ್ಧ ಆಡಲಿದೆ.

"ಶಿಸ್ತುಬದ್ಧ ಆಟವಾಡಿ ಟ್ರೋಫಿ ಗೆದ್ದು 2026ರ ಎಫ್‌ಐಎಚ್‌ ಮಹಿಳಾ ವಿಶ್ವಕಪ್‌ ಹಾಕಿಗೆ ನೇರ ಅರ್ಹತೆ ಪಡೆಯುವುದು ನಮ್ಮ ಅಂತಿಮ ಗುರಿ" ಎಂದು ನಾಯಕಿ ಸಲಿಮಾ ಟೆಟೆ ಹೇಳಿದರು.

ಭಾರತ ತಂಡ

ಗೋಲ್‌ಕೀಪರ್ಸ್‌: ಬಿಚು ದೇವಿ ಖರಿಬಮ್, ಬನ್ಸಾರಿ ಸೋಲಂಕಿ.

ಡಿಫೆಂಡರ್ಸ್‌: ನಿಕಿ ಪ್ರಧಾನ್, ಉದಿತಾ, ಜ್ಯೋತಿ, ಮನಿಶಾ ಚೌಹನ್, ಇಶಿಕಾ ಚೌಧರಿ, ಸುಮನ್ ದೇವಿ ತೌಡಂ.

ಮಿಡ್‌ಫೀಲ್ಡರ್ಸ್‌: ಸಲಿಮಾ ಟೆಟೆ, ನೇಹಾ, ವೈಷ್ಣವಿ ವಿಠ್ಠಲ್ ಫಾಳ್ಕೆ, ಶರ್ಮಿಳಾ ದೇವಿ, ಸುನೆಲಿತಾ ಟೊಪ್ಪೊ, ಲಾಲ್‌ರೆಮ್ಸಿಯಾನಿ.

ಫಾರ್ವರ್ಡ್ಸ್‌: ನವನೀತ್ ಕೌರ್,ರುತುಜಾ ದಾದಸೊ ಪಿಸಾಳ್‌, ಮುಮ್ತಾಝ್‌ ಖಾನ್‌, ಸಂಗೀತಾ ಕುಮಾರಿ, ದೀಪಿಕಾ, ಬ್ಯೂಟಿ ಡಂಗ್ಡಂಗ್‌.

ಮಹಿಳಾ ಹಾಕಿ ಏಷ್ಯಾ ಕಪ್ 2025 ಭಾರತದ ವೇಳಾಪಟ್ಟಿ

ಸೆಪ್ಟೆಂಬರ್ 5; ಭಾರತ vs ಥಾಯ್ಲೆಂಡ್‌

ಸೆಪ್ಟೆಂಬರ್ 6: ಭಾರತ vs ಜಪಾನ್‌

ಸೆಪ್ಟೆಂಬರ್ 8: ಭಾರತ vs ಸಿಂಗಾಪುರ

ಇದನ್ನೂ ಓದಿ Asia Cup hockey: ಹಾಕಿ ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ; ಹರ್ಮನ್‌ಪ್ರೀತ್‌ಗೆ ನಾಯಕತ್ವ