'ನಿಮ್ಮ ನಾಯಕತ್ವ ಮುಂದುವರಿಯಲಿ': ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಯುವರಾಜ್ ಸಿಂಗ್
Narendra Modi 76th Birthday: ಪ್ರಧಾನಿ ಮೋದಿ ಅವರ ಜನ್ಮದಿನವನ್ನು ಭವ್ಯವಾಗಿ ಆಚರಿಸಲು ದೇಶಾದ್ಯಂತ ಸಾರ್ವಜನಿಕ ಸೇವೆ ಮತ್ತು ಸ್ವಚ್ಛತಾ ಅಭಿಯಾನಗಳನ್ನು ನಡೆಸಲು ಬಿಜೆಪಿ ನಿರ್ಧರಿಸಿದೆ. ಇದಕ್ಕಾಗಿ ಸೆಪ್ಟೆಂಬರ್ 17ರಿಂದ 'ಸೇವಾ ಪಖ್ವಾಡ' ಎಂಬ ಎರಡು ವಾರಗಳ ಸೇವಾ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ.
Yuvraj Singh -
ನವದೆಹಲಿ, ಸೆ.17: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ 76ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಶುಭಾಶಯ ಕೋರಿದ್ದು, ಮೋದಿ ನಾಯಕತ್ವವು ಬಲಿಷ್ಠ ಭವಿಷ್ಯದತ್ತ ಭಾರತದ ಪಯಣವನ್ನು ರೂಪಿಸುವುದನ್ನು ಮುಂದುವರಿಸಿದೆ ಎಂದು ಹೇಳಿದ್ದಾರೆ.
ಟ್ವಿಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಯುವರಾಜ್ ಸಿಂಗ್, "ನಮ್ಮ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಟ್ವೀಟ್ ಮಾಡಿದ್ದಾರೆ. ಯುವರಾಜ್ ಮಾತ್ರವಲ್ಲದೆ ಹರ್ಭಜನ್ ಸಿಂಗ್, ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಬ್ಯಾಡ್ಮಿಂಡನ್ ತಾರೆ ಸೈನಾ ನೆಹ್ವಾಲ್ ಕೂಡ ಶುಭಾಶಯ ಕೋರಿದ್ದಾರೆ.
Wishing our Hon’ble Prime Minister Shri @narendramodi ji a very happy birthday.
— Yuvraj Singh (@YUVSTRONG12) September 17, 2026
Your leadership continues to shape India’s journey towards a stronger and more progressive future. 🇮🇳🙏
May the year ahead bring you good health, happiness and continued success.#SewaDiwas…
"ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಜನ್ಮದಿನದ ಶುಭಾಶಯಗಳು" ಎಂದು ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದಾರೆ.
🪔 Lighting the Aashirvaad Ka Diya on Sewa Diwas, with prayers and best wishes for Hon’ble PM Shri Narendra Modi ji on his birthday. @narendramodi ji 🙏
— Saina Nehwal (@NSaina) September 17, 2026
May the light of service, dedication and a stronger India continue to shine. 🇮🇳#सेवा_संकल्प_अभियान#SevaSankalpAbhiyan… pic.twitter.com/nyExR173dd
"ನಮ್ಮ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಆರೋಗ್ಯ ಮತ್ತು ಸಂತೋಷವನ್ನು ಹಾರೈಸುತ್ತೇನೆ. ನೀವು ಭಾರತವನ್ನು ಭವ್ಯ ಭವಿಷ್ಯದತ್ತ ಮುನ್ನಡೆಸುವುದನ್ನು ಮುಂದುವರಿಸಿ" ಎಂದು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.
Wishing health and happiness for our Hon’ble PM Shri Narendra Modi Ji. May you continue to lead India towards a glorious future. @narendramodi
— Gautam Gambhir (@GautamGambhir) September 17, 2026
"‘ಜನಸೇವೆಯೇ ದೇಶಸೇವೆ’ ಎಂಬ ಪವಿತ್ರ ಸಂಕಲ್ಪದೊಂದಿಗೆ, ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರು 25 ವರ್ಷಗಳನ್ನು ದೇಶಸೇವೆಗೆ ಮುಡಿಪಾಗಿಟ್ಟಿದ್ದಾರೆ" ಎಂದು ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
‘जनसेवा से देशसेवा’ के पावन संकल्प को जीवन का ध्येय बनाकर प्रधानमंत्री श्री @narendramodi जी ने 25 वर्षों तक राष्ट्रसेवा को समर्पित किए हैं। उनकी इस प्रेरणादायी यात्रा को सादर नमन। 🇮🇳
— Harbhajan Turbanator (@harbhajan_singh) September 16, 2026
आइए, 17 सितंबर को शाम 6–7 बजे अपने-अपने घरों में ‘आशीर्वाद का दीया’ जलाएं और एकजुट होकर उनके… https://t.co/VPvCQjZMDU
ಗುಜರಾತ್‌ನ ವಡ್ನಗರದಲ್ಲಿ 1950ರ ಸೆಪ್ಟೆಂಬರ್ 17ರಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮಗುವೊಂದು ಮುಂದೆ ದೇಶದ ಪ್ರಧಾನ ಮಂತ್ರಿಯಾಗುವ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ಆದರೆ ಜೀವನದಲ್ಲಿ ಎದುರಾದ ಸವಾಲುಗಳನ್ನು ಸ್ವೀಕರಿಸುತ್ತಾ ಸಾಗಿ 1985ರಲ್ಲಿ ರಾಜಕೀಯಕ್ಕೆ ಪ್ರವೇಶ ಪಡೆದು, 2001ರಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿ ಮತ್ತು 2014ರಲ್ಲಿ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು ನರೇಂದ್ರ ಮೋದಿ. ಈ ದಿನ 76ನೇ ವಸಂತಕ್ಕೆ ಕಾಲಿಡಲಿರುವ ಪ್ರಧಾನಿ ಮೋದಿ, ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಜನಿಸಿ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ‘ಹೈಫನೇಷನ್’ ಅಂತ್ಯ
ಪ್ರಧಾನಿ ಮೋದಿ ಅವರ ಜನ್ಮದಿನವನ್ನು ಭವ್ಯವಾಗಿ ಆಚರಿಸಲು ದೇಶಾದ್ಯಂತ ಸಾರ್ವಜನಿಕ ಸೇವೆ ಮತ್ತು ಸ್ವಚ್ಛತಾ ಅಭಿಯಾನಗಳನ್ನು ನಡೆಸಲು ಬಿಜೆಪಿ ನಿರ್ಧರಿಸಿದೆ. ಇದಕ್ಕಾಗಿ ಸೆಪ್ಟೆಂಬರ್ 17ರಿಂದ 'ಸೇವಾ ಪಖ್ವಾಡ' ಎಂಬ ಎರಡು ವಾರಗಳ ಸೇವಾ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಇದರಲ್ಲಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ 'ಸ್ವಚ್ಛತಾ ಹೀ ಸೇವಾ 2026' ಎಂಬ ದೇಶವ್ಯಾಪಿ ಸ್ವಚ್ಛತಾ ಅಭಿಯಾನವು ಸೇರಿದೆ. ಇದರೊಂದಿಗೆ ಸೆಪ್ಟೆಂಬರ್ 17ರಂದು ಎಲ್ಲರೂ ತಮ್ಮ ಮನೆಗಳಲ್ಲಿ ಸಾಂಪ್ರದಾಯಿಕ ದೀಪವನ್ನು ಬೆಳಗಿಸುವಂತೆ ಅವರಿಗೆ ಆಶೀರ್ವಾದ ನೀಡುವಂತೆ ಕೋರಿದೆ.