ʻಬಿಗ್ ಬಾಸ್ʼ ಸ್ಪರ್ಧಿಗಳ ಅಸಲಿ ಮುಖವಾಡ ಕಳಚಿದ ಪ್ರಥಮಾ ಪ್ರಸಾದ್; ಯಾರಿಗೆ ಯಾವ ಪಟ್ಟ? ಟಾಪ್ 5 ಸ್ಪರ್ಧಿಗಳ ಬಗ್ಗೆ ಅಚ್ಚರಿಯ ಭವಿಷ್ಯ!
Bigg Boss Kannada 13: ʻಬಿಗ್ ಬಾಸ್ 13ʼ ರಿಯಾಲಿಟಿ ಶೋನಿಂದ ಮೊದಲ ವಾರವೇ ನಿರ್ಗಮಿಸಿದ ನಟಿ ಪ್ರಥಮಾ ಪ್ರಸಾದ್, ಸಹ-ಸ್ಪರ್ಧಿಗಳ ನೈಜ ಮುಖವಾಡಗಳನ್ನು ಬಿಚ್ಚಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ನಡವಳಿಕೆ, ಅಹಂಕಾರ ಮತ್ತು ದೌರ್ಬಲ್ಯಗಳನ್ನು ನೇರ ಮಾತುಗಳಲ್ಲಿ ವಿಶ್ಲೇಷಿಸಿರುವ ಅವರು, ಸೌಂದರ್ಯ ಶೆಟ್ಟಿ, ಮಂಜು ಮತ್ತು ಗಗನ್ ಅವರ ಆಟದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
-
‘ಬಿಗ್ ಬಾಸ್’ ಮನೆಯಿಂದ ಮೊದಲ ವಾರವೇ ಹೊರಬಂದಿರುವ ನಟಿ ಪ್ರಥಮಾ ಪ್ರಸಾದ್, ಸಹ-ಸ್ಪರ್ಧಿಗಳ ನಡವಳಿಕೆ, ಅವರ ಸಾಮರ್ಥ್ಯ ಹಾಗೂ ಆಟದ ವೈಖರಿಯ ಬಗ್ಗೆ ʻವಿಶ್ವವಾಣಿ ಟಿವಿʼ ಜೊತೆಗೆ ಮುಕ್ತವಾಗಿ ಮನಬಿಚ್ಚಿ ಮಾತನಾಡಿದ್ದಾರೆ. ಪ್ರತಿಯೊಬ್ಬ ಸ್ಪರ್ಧಿಯ ಪ್ಲಸ್ ಮತ್ತು ಮೈನಸ್‌ಗಳನ್ನು ನೇರ ಮಾತುಗಳಲ್ಲಿ ವಿಶ್ಲೇಷಿಸಿರುವ ಅವರು, ಯಾರಿಗೆ ಯಾವ ಸಲಹೆ ಅಗತ್ಯ ಎಂಬುದನ್ನು ನಿಖರವಾಗಿ ತೆರೆದಿಟ್ಟಿದ್ದಾರೆ. ಕೊನೆಯವರೆಗೂ ಉಳಿಯಬಲ್ಲ ಟಾಪ್ ಸ್ಪರ್ಧಿಗಳ ಬಗ್ಗೆಯೂ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಸಹ ಸ್ಪರ್ಧಿಗಳ ಬಗ್ಗೆ ಪ್ರಥಮಾ ಪ್ರಸಾದ್ ಬಿಚ್ಚಿಟ್ಟ ಅಭಿಪ್ರಾಯಗಳು
ಗಗನ್ ಚಿನ್ನಪ್ಪ: ಪ್ರತಿಭಾವಂತ ವ್ಯಕ್ತಿ, ಆದರೆ ಮನೆಯ ಎಲ್ಲರೊಂದಿಗೆ ಇನ್ನಷ್ಟು ಚೆನ್ನಾಗಿ ಬೆರೆಯುವುದನ್ನು ಅವರು ಕಲಿಯಬೇಕಿದೆ.
ತಾಂಡವ್: ಅವರದ್ದೇ ಆದ ಒಂದು ವಿಶಿಷ್ಟ Aura ಇದೆ, ಆದರೆ ಅದೇ ಇಡೀ ಜೀವನವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ವೈಷ್ಣವಿ: ಜನರನ್ನು ಗೊಂದಲಕ್ಕೀಡು ಮಾಡುವುದನ್ನು ಮೊದಲು ನಿಲ್ಲಿಸಬೇಕು. ಒಂದೆಡೆ ಮಗುವಿನಂತೆ ಮುಗ್ಧವಾಗಿ ವರ್ತಿಸುತ್ತಾ, ಮತ್ತೊಂದೆಡೆ ಜಗಳವಾಡುವುದು ಪ್ರೇಕ್ಷಕರಲ್ಲಿ ಗೊಂದಲ ಮೂಡಿಸುತ್ತದೆ.
ಆಸಿಯಾ ಫಿರ್ದೋಸ್: ಪ್ರತಿಯೊಂದು ವಿಷಯದಲ್ಲೂ ಅತಿಯಾಗಿ ತಮ್ಮನ್ನು ಸಮರ್ಥಿಸಿಕೊಳ್ಳಲು ಹೋಗುತ್ತಾರೆ, ಅದರ ಅಗತ್ಯವಿಲ್ಲ.
ಕಾವ್ಯ ಗೌಡ: ಇವರ ಆಟ ಹಾಗೂ ವ್ಯಕ್ತಿತ್ವದ ಬಗ್ಗೆ ನನಗಿನ್ನೂ ಸ್ಪಷ್ಟತೆಯಿಲ್ಲ, ಗೊಂದಲವೇ ಹೆಚ್ಚಿದೆ.
ಸಂಗೀತಾ ಭಟ್: ಎಲ್ಲವನ್ನೂ ತಾವೇ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಅನಗತ್ಯವಾಗಿ ಅತಿಯಾದ ಜವಾಬ್ದಾರಿಯನ್ನು ಹೊರಲು ಪ್ರಯತ್ನಿಸುತ್ತಿದ್ದಾರೆ.
ಅವಿನಾಶ್: ಮೊದಲ ದಿನವೇ ಹೇಳಿದಂತೆ ಇವರು ಅತ್ಯಂತ ‘ಕ್ಲಿಷ್ಟ’ ವ್ಯಕ್ತಿ. ಕ್ಷಣಾರ್ಧದಲ್ಲೇ ಇವರ ಸ್ವಭಾವ ಬದಲಾಗುವುದರಿಂದ ಇವರನ್ನು ನಿಭಾಯಿಸುವುದು ಕಷ್ಟ.
ಓಂ ಪ್ರಕಾಶ್: ಮನೆಯಲ್ಲಿರುವ ಅತ್ಯಂತ ವಿನಮ್ರ ವ್ಯಕ್ತಿ.
ಲಿಖಿತ್: ಎಲ್ಲರನ್ನೂ ನಗಿಸುವ ತುಂಟ ಹುಡುಗ. ಅನಿರೀಕ್ಷಿತ ಉತ್ತರಗಳನ್ನು ಕೊಡುವ ಇವನ ಗುಣ ಇಷ್ಟ. ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಸಾಗುವ ಅವನ ಸ್ವಭಾವ ಮೆಚ್ಚುವಂಥದ್ದು.
ಕಿರಣ್ ಶಾಸ್ತ್ರಿ: ಜ್ಞಾನದಲ್ಲಿ ಜ್ಞಾನಿ, ಆದರೆ ಸ್ವಭಾವದಲ್ಲಿ ಅಜ್ಞಾನಿ.
ಮಂಜ: ಬಾಯಿ ಜಾಸ್ತಿ ಇರಬಹುದು, ಆದರೆ ಒಳ್ಳೆಯ ಹೃದಯ ಹೊಂದಿರುವ ವ್ಯಕ್ತಿ.
ಧನುಷ್: ದೈಹಿಕವಾಗಿ ಸದೃಢವಾಗಿರುವ ಅತ್ಯುತ್ತಮ ಆಟಗಾರ. ಆದರೆ ತಮ್ಮ ಕೋಪವನ್ನು ಕೊಂಚ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.
ಸೌಂದರ್ಯ ಶೆಟ್ಟಿ: ಜಾಣ ಆಟಗಾರ್ತಿ. ಆದರೆ ಅವರ ಕ್ಯಾಶುವಲ್ ಆಟಿಟ್ಯೂಡ್ ಎಲ್ಲೋ ಒಂದು ಕಡೆ ಅವರಿಗೆ ಮುಳುವಾಗುವ ಸಾಧ್ಯತೆಯಿದೆ.
ಯಶಸ್: ನಾಲಿಗೆ ಸೀಳಿ ಎರಡು ಹೋಳಾದರೂ ಛಲ ಬಿಡದೆ ಕಠಿಣ ಸ್ಪರ್ಧೆಯನ್ನು ಮುಗಿಸಿದ ಅವರ ಧೈರ್ಯ ಮತ್ತು ಸಾಹಸ ನಿಜಕ್ಕೂ ಶ್ಲಾಘನೀಯ.
ಜಗ್ಗ ಮಮ್ಮಿ: ನನ್ನ ಅಚ್ಚುಮೆಚ್ಚಿನ ವ್ಯಕ್ತಿ. ಆದರೆ ಅವರ ಅತಿಯಾದ ಮುಗ್ಧತೆಯೇ ಅವರ ಬೆನ್ನಿಗೆ ಚೂರಿ ಹಾಕುವಂತಿದೆ.
ಆ ಕಂಟೆಸ್ಟಂಟ್ ಬಗ್ಗೆ ಏನು ಹೇಳಲ್ಲ; ಬಿಗ್ಬಾಸ್ ಮನೇಲಿ ಫೇಕ್ ಮಾಡ್ಬಹುದು!
ಟಾಪ್ 5 ರೇಸ್‌ನಲ್ಲಿ ಯಾರಿರಲಿದ್ದಾರೆ?
"ಯಾರು ಟಾಪ್ 5ವರೆಗೆ ಇರುತ್ತಾರೆ" ಎಂದು ಕೇಳಿದ್ದಕ್ಕೆ ಪ್ರಥಮಾ ಪ್ರಸಾದ್, "ಈಗಲೇ ಅಂತಿಮ 5 ಜನರನ್ನು ನಿರ್ಧರಿಸುವುದು ಆತುರವಾದೀತು. ಆದರೂ ಸದ್ಯದ ಪರಿಸ್ಥಿತಿಯಲ್ಲಿ ಸೌಂದರ್ಯ ಶೆಟ್ಟಿ ಕೊನೆಯವರೆಗೂ ಉಳಿಯುವ ಎಲ್ಲ ಅರ್ಹತೆ ಹೊಂದಿದ್ದಾರೆ. ಮಂಜು ತಮ್ಮ ಕೋಪ ಕಡಿಮೆ ಮಾಡಿಕೊಂಡರೆ ಹಾಗೂ ಗಗನ್ ತಮ್ಮ ಅಹಂಕಾರ ಬದಿಗಿಟ್ಟರೆ ಅವರೂ ಮುನ್ನಡೆಯಬಹುದು. ಆಸಿಯಾ ದೈಹಿಕವಾಗಿ ಬಲಿಷ್ಠರಾಗಿದ್ದರೂ ಅವರ ಅತಿಯಾದ ಭಾವುಕತೆ ಅಡ್ಡಿಯಾಗಬಹುದು" ಎಂದು ಹೇಳಿದ್ದಾರೆ.